ಪರಿಹಾರ ನಿಧಿಗೆ ಲಕ್ಷ ರೂ. ನೀಡಿದ ದಿವಗಿ ಶ್ರೀ ರಾಮಾನಂದ ಸ್ವಾಮೀಜಿ

9KMT1a
Published on

ಕುಮಟಾ: ತಾಲೂಕಿನ ದಿವಗಿಯಲ್ಲಿ ಗುರುವಾರ ಶ್ರೀ ರಾಮಾನಂದ ಸ್ವಾಮೀಜಿ ಮಠ ಟ್ರಸ್ಟಿನ ವತಿಯಿಂದ ಪಿಎಂ ಕೇರ್​ಫಂಡ್​ಗೆ 50 ಸಾವಿರ ರೂ. ಹಾಗೂ ಸಿಎಂ ಪರಿಹಾರ ನಿಧಿಗೆ 50 ಸಾವಿರ ರೂ. ಸೇರಿ ಒಟ್ಟು 1 ಲಕ್ಷ ರೂ. ಚೆಕ್​ಅನ್ನು ಅವಧೂತ ಶ್ರೀ ರಾಮಾನಂದ ಸ್ವಾಮೀಜಿ ಅವರು ಶಾಸಕ ದಿನಕರ ಶೆಟ್ಟಿ ಅವರ ಮೂಲಕ ಸರ್ಕಾರಕ್ಕೆ ಸಲ್ಲಿಸಿದರು. ಜಗತ್ತು ಶೀಘ್ರ ಕರೊನಾ ವೈರಾಣುವಿನ ಸಂಕಷ್ಟದಿಂದ ಮುಕ್ತವಾಗಲಿ. ಜನರು ನೆಮ್ಮದಿಯಿಂದ ಬಾಳುವಂತಾಗಲಿ ಎಂದು ಸ್ವಾಮೀಜಿ ಅವರು ಹರಸಿದರು. ಈ ವೇಳೆ ಮಠ ಟ್ರಸ್ಟಿಗಳಾದ ಕೃಷ್ಣಮೂರ್ತಿ ಭಟ್ಟ, ಪ್ರಕಾಶ ಪಂಡಿತ, ಡಾ. ಜಿ.ಜಿ. ಹೆಗಡೆ ಹಾಗೂ ಬಿಜೆಪಿ ಜಿಲ್ಲಾಧ್ಯಕ್ಷ ವೆಂಕಟೇಶ ನಾಯಕ, ಮಂಡಲಾಧ್ಯಕ್ಷ ಹೇಮಂತಕುಮಾರ ಗಾಂವಕರ, ಸತೀಶ ಅಂಬಿಗ, ಅನಿಲ್ ಭಂಡಾರಿ, ಸುಭಾಷ ಅಂಬಿಗ, ಮಠದ ಭಕ್ತರಾದ ಎಂ.ಎಸ್. ಹೆಗಡೆ ಇನ್ನಿತರರು ಇದ್ದರು.

25 ಸಾವಿರ ರೂ. : ಕುಮಟಾದ ಹಳಕಾರ ಚಾರಿಟಬಲ್ ಮೆಡಿಕಲ್ ಆಂಡ್ ಇನ್​ಫಾಮೇಶನ್ ಟ್ರಸ್ಟಿನ ವತಿಯಿಂದ ಸಿಎಂ ಪರಿಹಾರ ನಿಧಿಗಾಗಿ ಟ್ರಸ್ಟಿನ ಅಧ್ಯಕ್ಷ ಡಾ. ಅಶೋಕ ಭಟ್ಟ ಅವರು 25 ಸಾವಿರ ರೂ. ಚೆಕ್ ಅನ್ನು ಉಪವಿಭಾಗಾಧಿಕಾರಿ ಅಜಿತ್ ಎಂ. ರೈ ಅವರಿಗೆ ಸಲ್ಲಿಸಿದ್ದಾರೆ.</

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net