ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಕರ್ತವ್ಯ

15 9 SBD 2
Published on

ಶಹಾಬಾದ್ : ರಿಸರ ಸಂರಕ್ಷಣೆ ಕೇವಲ ಸರ್ಕಾರದ ಕರ್ತವ್ಯವಲ್ಲ, ಪ್ರತಿಯೊಬ್ಬರ ನಾಗರಿಕರ ಕರ್ತವ್ಯವಾಗಿದ್ದು, ಎಲ್ಲರೂ ಪರಿಸರಸ್ನೇಹಿ ಮೂರ್ತಿ ಪ್ರತಿಷ್ಠಾಪಿಸಬೇಕು ಎಂದು ನಗರ ಪೊಲೀಸ್ ಠಾಣೆ ಪಿಐ ರಾಘವೇಂದ್ರ ಹೇಳಿದರು.

ಗಣೇಶ ಚತುರ್ಥಿ ಮತ್ತು ಈದ್ ಮಿಲಾದ್ ನಿಮಿತ್ತ ಗುರುವಾರ ಸಂಜೆ ನಗರ ಪೊಲೀಸ್ ಠಾಣೆಯಲ್ಲಿ ಕೆರೆದಿದ್ದ ಶಾಂತಿ ಸಭೆಯಲ್ಲಿ ಮಾತನಾಡಿದ ಅವರು, ಗಣೇಶ ಮಂಟಪದಲ್ಲಿ ಪರಿಸರ ಸ್ನೇಹಿ ವಾತಾವರಣ ನಿರ್ಮಿಸುವುದು ಮುಖ್ಯವಾಗಿದೆ. ಪ್ರತಿಯೊಬ್ಬರು ಪಿಒಪಿ ಮೂರ್ತಿ ಸ್ಥಾಪಿಸದೆ ಮಣ್ಣಿನ ಗಣೇಶ ಸ್ಥಾಪಿಸಿ ಪ್ಲಾಸ್ಟಿಕ್ ಮುಕ್ತ ಹಬ್ಬ ಆಚರಣೆ ಮಾಡಬೇಕೆಂದು ಹೇಳಿದರು. ರಾತ್ರಿ ೧೦ಗಂಟೆ ಒಳಗೆ ವಿಸರ್ಜನೆ ಮಾಡಬೇಕು. ಡಿಜೆ ಕೂಡ ಬಳಸುವಂತಿಲ್ಲ. ಈ ಬಾರಿ ರಾಷ್ಟಿಯ ಹೆದ್ದಾರಿ ೧೫೦ರಲ್ಲಿರುವ ಕಾಗಿಣಾ ನದಿ ಸೇತುವೆ ಕೆಟ್ಟು ಹೋಗಿದ್ದು, ಪಕ್ಕದಲ್ಲಿ ಹೊಸ ಸೇತುವೆ ನಿರ್ಮಾಣ ಕಾರ್ಯ ನಡೆಯುತ್ತಿದ್ದರಿಂದ ಅಲ್ಲಿ ವಿಸರ್ಜನೆ ಮಾಡದೆ ಗೋಳಾ (ಕೆ) ಬಳಿಯ ಬ್ರಿಜ್ ಕಂ ಬ್ಯಾರೇಜ್ ಬಳಿ ವಿಸರ್ಜನೆಗೆ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಹೇಳಿದರು.

ನಗರ ಸಭೆ ಪೌರಾಯುಕ್ತೆ ಪಂಕಜಾ ರಾವೂರ, ಜೆಸ್ಕಾಂ ಎಇಇ ಯೂನುಸ್ ಖಾನ್, ಬಿಸಿಸಿ ಅಧ್ಯಕ್ಷ ಡಾ.ಎಂ.ಎ.ರಶೀದ್, ಅರುಣಕುಮಾರ ಪಟ್ಟಣಕರ್, ಪಿಎಸ್‌ಐ ಚಂದ್ರಕಾಂತ ಮಾತನಾಡಿದರು. ವಿಹಿಂಪ ತಾಲೂಕು ಅಧ್ಯಕ್ಷ ಬಸವರಾಜ ಸಾತಿಹಾಳ, ಕೃಷ್ಣಪ್ಪ ಕರಣಿಕ, ಕಾಶೀನಾಥ ಜೋಗಿ, ರವಿ ರಾಠೋಡ್, ಸುಭಾಷ ಜಾಪೂರ, ಚಂದ್ರಕಾಂತ ಗೊಬ್ಬುರಕರ್, ಸೂರ್ಯಕಾಂತ ಕೋಬಾಳ, ನಾಗರಾಜ ಮೇಲಗಿರಿ, ರಾಮು ಕುಸಾಳೆ, ಇಬ್ರಾಹಿಂ, ರಾಕೇಶ ಪವಾರ್, ಹಣಮಂತ ಪವಾರ್ ಇತರರಿದ್ದರು. ನಿಂಗಣ್ಣಗೌಡ ಪಾಟೀಲ್ ನಿರೂಪಣೆ ಮಾಡಿದರು. ======== =

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net