

ಕಲಬುರಗಿ: ಗಿಡಗಳು ಮಕ್ಕಳಂತೆ ಪ್ರತಿಯೊಬ್ಬರು ಬೆಳೆಸಿದಾಗ ಮಾತ್ರ ಪರಿಸರ ಕಾಪಾಡಲು ಸಾಧ್ಯವಾಗುತ್ತದೆ. ಅಲ್ಲದೆ ಜನರ ಆರೋಗ್ಯ ಸಹ ವೃದ್ಧಿಯಾಗಲಿದೆ ಎಂದು ಕಸಾಪ ಕಲಬುರಗಿ ತಾಲೂಕು ಅಧ್ಯಕ್ಷ ಗುರುಬಸಪ್ಪ ಸಜ್ಜನಶೆಟ್ಟಿ ಹೇಳಿದರು.
ಹೊರವಲಯದ ಶರಣಸಿರಸಗಿ ಗ್ರಾಮದ ಶರಣ ಜ್ಯೋತಿ ಕನ್ನಡ ಪ್ರಾಥಮಿಕ ಹಾಗೂ ಗ್ರಾಮೀಣ ಕ್ರೀಡಾ ವಸತಿ ಶಾಲೆ ಮತ್ತು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ಸಂಯುಕ್ತ ಆಶ್ರಯದಲ್ಲಿ ಬುಧವಾರ ಹಮ್ಮಿಕೊಂಡಿದ್ದ ವನಮಹೋತ್ಸವ ಹಾಗೂ ಸಸಿ ನೆಡುವ ಕಾರ್ಯಕ್ರಮವನ್ನು ಮಕ್ಕಳಿಗೆ ಸಸಿಗಳನ್ನು ವಿತರಿಸಿ ಚಾಲನೆ ನೀಡಿ, ಪರಿಸರ ರಕ್ಷಣೆ ಮಾಡಿ, ಸ್ವಚ್ಛತೆ ಕಾಪಾಡಿಕೊಂಡು ಹೋಗುವುದು ಎಲ್ಲರ ಜವಾಬ್ದಾರಿಯಾಗಿದೆ ಎಂದರು.
ಧರ್ಮಸ್ಥಳ ಧರ್ಮಾರ್ಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ಅವರು ಹಲವು ಸಮಾಜಮುಖಿ ಕಾರ್ಯಕ್ರಮಗಳನ್ನು ತಮ್ಮ ಸಂಸ್ಥೆಯ ಮೂಲಕ ಅನುಷ್ಠಾನ ಮಾಡುತ್ತಿದ್ದು, ರೈತರು ಸೇರಿದಂತೆ ಗ್ರಾಮೀಣ ಭಾಗದ ಎಲ್ಲ ವರ್ಗದವÀರಿಗೆ ಸಹಕಾರಿ ಆಗಿದೆ ಎಂದು ತಿಳಿಸಿದರು.
ಅಧ್ಯP್ಷÀತೆ ವಹಿಸಿದ್ದ ಜಿ¯್ಲÁ ಜನಜಾಗೃತಿ ವೇದಿಕೆ ಹಾಗೂ ಸಂಸ್ಥೆಯ ಅಧ್ಯP್ಷÀರಾದ ಸಿ.ಎನ್.ಬಾಬಳಗಾಂವ ಮಾತನಾಡಿ, ಮಕ್ಕಳು ದಿನಾಲು ಮನೆ. ಶಾಲೆಯ ಆವರಣಗಳಲ್ಲಿ, ದೇವಸ್ಥಾನಗಳಲ್ಲಿ ತಮ್ಮ ಹುಟ್ಟುಹಬ್ಬದ ದಿನದಂದು ಸಸಿಗಳನ್ನು ಹಚ್ಚುವ ಮೂಲಕ ಆಚರಣೆ ಮಾಡಲು ಸಲಹೆ ನೀಡಿದರು.
ಶಾಲಾ ಕಮಿಟಿ ಉಪಾಧ್ಯP್ಷÀ ಧನರಾಜ ಭಾಸಗಿ, ಮುಖ್ಯಗುರು ಸಿದ್ಧರಾಮ ಮುಗಳಿ, ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯ ಕೃಷಿ ಅಧಿಕಾರಿ ಗಂಗಾಧರ ಮೇಲಿನಮನಿ, ಭೀಮರಾಯ ಸನದಿ ಇತರರಿದ್ದರು. ಶಿP್ಷÀಕಿ ಚಂದಮ್ಮ ವಡಗೇರಿ ಸ್ವಾಗತಿಸಿದರು. ಗೋದಾವರಿ ಪೂಜಾರಿ ನಿರೂಪಿಸಿದರು. ರತಿಕ್ ವಂದಿಸಿದರು.