ಪರಿಸರ ರಕ್ಷಣೆ ಜವಾಬ್ದಾರಿಯಾಗಲಿ

bkt-18-9
ಬಾಗಲಕೋಟೆ ನಗರದ ಬಿವಿವಿ ಸಂಘದ ಎಸ್.ನಿಜಲಿಂಗಪ್ಪ ವೈದ್ಯಕೀಯ ಮಹಾವಿದ್ಯಾಲಯದ ಶಿವಾಲಯದ ಆವರಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮ ಬಿವಿವಿ ಸಂಘದ ಅಕ್ಕನ ಬಳಗದ ರಾಜೇಶ್ವರಿ ವಿ.ಚರಂತಿಮಠ ಉದ್ಘಾಟಿಸಿದರು.
Published on

ಬಾಗಲಕೋಟೆ: ಮನುಷ್ಯನ ಬದುಕಿಗೆ ಶುದ್ಧ ಗಾಳಿ ತುಂಬ ಅವಶ್ಯಕ. ಸಮೃದ್ಧವಾದ ಗಿಡಮರಗಳಿಂದ ನಮಗೆ ಶುದ್ಧಗಾಳಿ ಪ್ರಾಪ್ತವಾಗುತ್ತದೆ. ಆದ್ದರಿಂದ ಮರಗಳನ್ನು ಬೆಳೆಸಿ ಪರಿಸರವನ್ನು ರಕ್ಷಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಬೇಕು ಎಂದು ಬಿವಿವಿ ಸಂಘದ ಅಕ್ಕನ ಬಳಗದ ರಾಜೇಶ್ವರಿ ವಿ.ಚರಂತಿಮಠ ಹೇಳಿದರು.

ನಗರದ ಬಿವಿವಿ ಸಂಘದ ಎಸ್.ನಿಜಲಿಂಗಪ್ಪ ವೈದ್ಯಕೀಯ ಮಹಾವಿದ್ಯಾಲಯದ ಶಿವಾಲಯದ ಆವರಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

Aರೋಗ್ಯಕರ ಸಮಾಜ ನಿರ್ಮಾಣದಲ್ಲಿ ಪರಿಸರದ ಪಾತ್ರ ಮತ್ತು ಕೊಡುಗೆ ಅನನ್ಯವಾಗಿದೆ. ಸ್ವಚ್ಛ ಮತ್ತು ಸುಂದರ ಪರಿಸರ ಮನುಷ್ಯನ ಬದುಕಿಗೆ ಅತಿ ಅವಶ್ಯಕವಾಗಿದೆ ಎಂದರು.

ಬಸವೇಶ್ವರ ವಾಣಿಜ್ಯ ಕಾಲೇಜಿನ ಉಪನ್ಯಾಸಕಿ ಡಾ.ನಂದಿನಿ ದೊಡ್ಡಮನಿ ಮಾತನಾಡಿ, ಮನುಷ್ಯ ವಾಸಿಸಲು ಇರುವ ಗ್ರಹ ಭೂಮಿಯೊಂದೆ. ಆದ್ದರಿಂದ ಭೂಮಿಯ ಮೇಲೆ ಪರಿಸರವನ್ನು ಉಳಿಸಿ ಬೆಳೆಸುವ ಹೊಣೆಗಾರಿಕೆ ನಮ್ಮೆಲ್ಲರದಾಗಿದೆ ಎಂದರು.

ಬಿವಿವಿ ಸಂಘದ ಕುಮಾರೇಶ್ವರ ಆಸ್ಪತ್ರೆಯ ಅಽÃಕ್ಷಕಿ ಡಾ.ಭುವನೇಶ್ವರಿ ಯಳಮಲಿ, ಬಿವಿವಿ ಸಂಘದ ಕಟ್ಟಡ ಸಮಿತಿ ಕಾರ್ಯಾಧ್ಯಕ್ಷ ಮಹೇಶ ಕಕರಡ್ಡಿ, ಬಿವಿವಿ ಸಂಘದ ಸದಸ್ಯ ವಿಶ್ವನಾಥ ಇಲಾಳಶೆಟ್ಟರ, ಅಕ್ಕನ ಬಳಗದ ಅಧ್ಯಕ್ಷೆ ನಿರ್ಮಲಾ ಹಲಕುರ್ಕಿ, ಎಂ.ಎಸ್.ಮುನೋಳ್ಳಿ, ಹಾರ್ಟಿಕಲ್ಚರ್ ಆಫೀಸರ್ ಸಂಗಯ್ಯಾ ಲೂತಿಮಠ ಇತರರು ಇದ್ದರು. ನಿವೇದಿತಾ ಪಟ್ಟಣಶೆಟ್ಟಿ ಪ್ರಾರ್ಥಿಸಿದರು. ಗಿರಿಜಾ ಪರ್ವತಿಕರ ಸ್ವಾಗತಿಸಿದರು. ವಿಜಯಲಕ್ಷಿ÷್ಮÃ ಭದ್ರಶೆಟ್ಟಿ ನಿರೂಪಿಸಿದರು. ಆಶಾ ಜಿಗಜಿನ್ನಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net