ಪರಿಶ್ರಮದ ಅಧ್ಯಯನದಿಂದ ಯಶಸ್ಸು ಸಾಧ್ಯ

bkt-12-4
ಬಾಗಲಕೋಟೆ ನಗರದ ಬಿವಿವಿ ಸಂಘದ ಇಂಜಿನಿಯರಿAಗ್ ಕಾಲೇಜಿನ ಸಭಾಭವನದಲ್ಲಿ ವಿದ್ಯಾಗಿರಿಯ ಬಸವೇಶ್ವರ ಕಲಾ ವಿಜ್ಞಾನ, ವಾಣಿಜ್ಯ ಮತ್ತು ಸ್ವತಂತ್ರ ಪದವಿ ಪೂರ್ವ ಕಾಲೇಜಿನ ಸಾಂಸ್ಕೃತಿಕ ಮತ್ತು ಕ್ರೀಡಾ ಚಟುವಟಿಕೆಗಳ ಸಮಾರೋಪ ಆಹಾರ ಇಲಾಖೆ ಜಂಟಿ ನಿರ್ದೇಶಕ ಶ್ರೀಶೈಲ ಕಂಕನವಾಡಿ ಮಾತನಾಡಿದರು.
Published on

ಬಾಗಲಕೋಟೆ: ಪರಿಶ್ರಮದ ಅಧ್ಯಯನದಿಂದ ಯಶಸ್ಸು ಪಡೆಯಲು ಸಾಧ್ಯವಿದೆ ಎಂದು ಆಹಾರ ಇಲಾಖೆ ಜಂಟಿ ನಿರ್ದೇಶಕ ಶ್ರೀಶೈಲ ಕಂಕನವಾಡಿ ಹೇಳಿದರು.

ನಗರದ ಬಿವಿವಿ ಸಂಘದ ಇಂಜಿನಿಯರಿ0ಗ್ ಕಾಲೇಜಿನ ಸಭಾಭವನದಲ್ಲಿ ವಿದ್ಯಾಗಿರಿಯ ಬಸವೇಶ್ವರ ಕಲಾ ವಿಜ್ಞಾನ, ವಾಣಿಜ್ಯ ಮತ್ತು ಸ್ವತಂತ್ರ ಪದವಿ ಪೂರ್ವ ಕಾಲೇಜಿನ ಸಾಂಸ್ಕೃತಿಕ ಮತ್ತು ಕ್ರೀಡಾ ಚಟುವಟಿಕೆಗಳ ಸಮಾರೋಪ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ವಿದ್ಯಾರ್ಥಿಗಳ ಜೀವನದಲ್ಲಿ ಪಿಯುಸಿ ಬಹಳ ಮಹತ್ವದ್ದು, ಈ ಎರಡು ವರ್ಷ ತಪ್ಪಿಸನಂತೆ ಅಧ್ಯಯನ ಮಾಡಬೇಕು. ಮೊಬೈಲ ಹಿತಮಿತವಾಗಿ ಬಳಕೆ ಮಾಡಿ ಅಧ್ಯಯನ ಶೀಲರಾಗಬೇಕು. ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಪಾಸು ಮಾಡಿ ಯಶಸ್ಸು ಸಾಽಸಿ ಕುಟುಂಬ, ಸಮಾಜಕ್ಕೆ ಕೀರ್ತಿ ತರುವ ಕೆಲಸ ಮಾಡಬೇಕು ಎಂದು ಕಿವಿಮಾತು ಹೇಳಿದರು.

ಬಿವಿವಿ ಸಂಘದ ಕಾಲೇಜುಗಳ ಆಡಳಿತ ಮಂಡಳಿಯ ಕಾರ್ಯಾಧ್ಯಕ್ಷ ಗುರುಬಸವ ಸೂಳಿಭಾವಿ ಮಾತನಾಡಿ, ಪ್ರತಿಯೊಬ್ಬ ವಿದ್ಯಾರ್ಥಿಯಲ್ಲಿ ತಮ್ಮದೆಯಾದ ವಿಶೇಷ ಪ್ರತಿಭೆಯಿದೆ. ಅದನ್ನು ಗುರುತಿಸಿ ಸ್ಪಷ್ಟವಾದ ದಿಕ್ಕಿನಲ್ಲಿ ಸಾಗುವಂತಾಗಬೇಕು. ಕಲಾ ವಿಜ್ಞಾನ ಹಾಗೂ ವಾಣಿಜ್ಯ ವಿಭಾಗಗಳು ಸರಿಸಮಾನಾದವುಗಳು. ಆಯಾ ವಿಭಾಗದಲ್ಲಿ ಅಧ್ಯಯನ ನಿರಂತರಾದವರು. ತಮ್ಮ ಸಂಪೂರ್ಣ ಸಾಮರ್ಥ್ಯ ಹಾಕಿ ಕೈಗಾರಿಕೋದ್ಯಮ, ವಿಶೇಷ ವಾಗ್ನಿ, ಆಡತಿಗಾರ ಸೇರಿದಂತೆ ವಿವಿಧ ಕ್ಷೇತ್ರದಲ್ಲಿ ತಮ್ಮನ್ನು ತಾವು ಗುರುತಿಸಿಕೊಳ್ಳಬೇಕು ಎಂದರು.

ಕಾರ್ಯಕ್ರಮದಲ್ಲಿ ಪಿಎಚ್‌ಡಿ ಪದವಿ ಪಡೆದ ಡಾ. ಪ್ರವೀನ ಚಿತ್ರಗಾರ ಅವರನ್ನು ಸನ್ಮಾನಿಸಲಾಯಿತು. ಪ್ರಾಚಾರ್ಯ ಎಸ್.ಎಚ್.ವಟವಟಿ, ಎ.ಎಂ.ಪಾಟೀಲ, ವೀಣಾ ಕುಂದರಗಿ, ಎಂ.ಎಚ್.ಕಟಗೇರಿ, ಆರ್.ಸಿ.ಚಿನ್ನಾಕರ ಉಪಸ್ಥಿತರಿದ್ದರು. ಡಾ. ಮಾರುತಿ.ಎ.ಪಾಟೋಳಿ ಪರಿಚಯಿಸಿದರು. ಸ್ನೇಹಾ.ಪಿ.ಬಂಗಿ ವರದಿ ವಾಚನ ಮಾಡಿದರು. ಬಿ.ಐ.ಬೋಡನಾಯಕದಿನ್ನಿ ವಂದಿಸಿದರು. ಎಸ್.ಆರ್.ಕುಲಕರ್ಣಿ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net