ಪರಮಾತ್ಮನ ಅನುಗ್ರಹವೇ ಪರಮ ಗುರಿಯಾಗಿರಲಿ

29 YLP 04
Published on

ಯಲ್ಲಾಪುರ: ಪರಮಾತ್ಮನ ಅನುಗ್ರಹ ಪಡೆಯುವುದು ನಮ್ಮ ಜೀವನದ ಪರಮ ಗುರಿ ಆಗಿರಬೇಕು. ಅದನ್ನು ಸಾಧಿಸಲು ಧಾರ್ವಿುಕ ಕಾರ್ಯಗಳು, ದೇವತಾರಾಧನೆ ಉತ್ತಮ ಮಾರ್ಗವಾಗಿದೆ ಎಂದು ವಿದ್ವಾಂಸ, ಕೀರ್ತನಕಾರ ವಿದ್ವಾನ್ ನೆವಣೆ ಗಣೇಶ ಭಟ್ಟ ಹೇಳಿದರು.

ತಾಲೂಕಿನ ಶಿವಗಂಗಾ ಗುಂಡ್ಕಲ್​ದಲ್ಲಿ ಹಮ್ಮಿಕೊಂಡಿದ್ದ ರುದ್ರಹವನ, ಮೃತ್ಯುಂಜಯ ಹವನ ಹಾಗೂ ಸನ್ಮಾನ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

ಹಿರಿಯ ವಿದ್ವಾಂಸ ವಿದ್ವಾನ್ ತಿಮ್ಮಣ್ಣ ಭಟ್ಟ ಬಾಲೀಗದ್ದೆ ಅವರನ್ನೂ ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ರುದ್ರನ ಆರಾಧನೆಯಿಂದ ರೋಗಗಳು ದೂರವಾಗುತ್ತದೆ. ಲೌಕಿಕ ರೋಗಗಳ ಜತೆಗೆ ಭವ ರೋಗದ ನಿವಾರಣೆಗೂ ಅದು ಸಹಕಾರಿ ಎಂದರು. ಭಗವದ್ಗೀತೆಯ ಎಲ್ಲ ಅಧ್ಯಾಯಗಳನ್ನು ಕಂಠಪಾಠ ಮಾಡಿ, ಶೃಂಗೇರಿ ಜಗದ್ಗುರುಗಳಿಂದ ಪುರಸ್ಕೃತರಾದ ಶ್ರೀನಿಧಿ ಭಟ್ಟ ಅವರನ್ನು ಗಣೇಶ ಭಟ್ಟ ಹಾಗೂ ತಿಮ್ಮಣ್ಣ ಭಟ್ಟ ಪುರಸ್ಕರಿಸಿದರು. ವೇ. ವಿಶ್ವನಾಥ ಭಟ್ಟ ಬೆಳಖಂಡ ಅಧ್ಯಕ್ಷತೆ ವಹಿಸಿದ್ದರು. ಕೀರ್ತನಕಾರ ಶಿವರಾಮ ಗಾಂವ್ಕಾರ ಕನಕನಹಳ್ಳಿ, ಅರ್ಥಧಾರಿ ಎಂ.ಎನ್. ಹೆಗಡೆ ಹಳವಳ್ಳಿ, ವಿದ್ವಾನ್ ಕೃಷ್ಣ ಭಟ್ಟ ಚಿಮನಳ್ಳಿ, ಸ್ವರ್ಣವಲ್ಲೀ ಪಾಠಶಾಲೆಯ ಅಧ್ಯಾಪಕ ಡಾ. ಶಂಕರ ಭಟ್ಟ ಬಾಲೀಗದ್ದೆ ಮಾತನಾಡಿದರು. ಮಂಜುನಾಥ ಭಟ್ಟ ಗುಂಡ್ಕಲ್, ಸುಮಂಗಲಾ ಭಟ್ಟ, ಹಿರಿಯರಾದ ಶಿವರಾಮ ಭಟ್ಟ, ಗಂಗಾ ಭಟ್ಟ ಉಪಸ್ಥಿತರಿದ್ದರು. ಸುಬ್ರಾಯ ಭಟ್ಟ, ಕೆ.ಟಿ. ಭಟ್ಟ, ಎಲ್.ಪಿ. ಭಟ್ಟ ನಿರ್ವಹಿಸಿದರು.

ಭಗವದ್ಗೀತೆಯಲ್ಲಿ ಸಮಾಜದ ಎಲ್ಲ ಸ್ಥರದ ಜನರು ಅನುಸರಿಸಬೇಕಾದ ಜೀವನ ಪಾಠವಿದೆ. ಸ್ವರ್ಗ, ನರಕ ನಮ್ಮೊಳಗೇ ಇದೆ. ಒಳ್ಳೆಯ ಕಾರ್ಯ ಮಾಡಿದರೆ ಅದು ನೀಡುವ ಸಂತಸವೇ ಸ್ವರ್ಗ, ಕೆಟ್ಟ ಕಾರ್ಯ ಮಾಡಿದಾಗ ಉಂಟಾಗುವ ದುಃಖವೇ ನರಕ. | ಪ್ರಮೋದ ಹೆಗಡೆ ಸಂಕಲ್ಪ ಸಂಸ್ಥೆ ಅಧ್ಯಕ್ಷ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net