

ಅಳವಂಡಿ: ಜೀವನದಲ್ಲಿ ಒಳ್ಳೆಯ ಆಲೋಚನೆ, ಮಾನವೀಯ ಮೌಲ್ಯಗಳನ್ನು ರೂಢಿಸಿಕೊಳ್ಳಬೇಕು ಇದು ನಿಮ್ಮ ಮನಸ್ಸಿಗೆ ಶಾಂತಿ ನೀಡಲಿದೆ ಎಂದು ಸಿದ್ದೇಶ್ವರ ಮಠದ ಶ್ರೀಮರುಳಾರಾಧ್ಯ ಸ್ವಾಮೀಜಿ ತಿಳಿಸಿದರು.
ಗ್ರಾಮದ ಶ್ರೀಸಿದ್ದೇಶ್ವರ ಮಠದಲ್ಲಿ ಶ್ರಾವಣ ಮಾಸದ ಅಂಗವಾಗಿ ನಡೆಯುತ್ತಿರುವ ಶ್ರೀಶರಣಬಸವೇಶ್ವರರ ಪುರಾಣ ಪ್ರವಚನದ ಅಂಗವಾಗಿ ಶರಣ ಬಸವೇಶ್ವರರ ತೊಟ್ಟಿಲು ಕಾರ್ಯಕ್ರಮ ಉದ್ದೇಶಿಸಿ ಸೋಮವಾರ ಮಾತನಾಡಿದರು.
ಇದನ್ನೂ ಓದಿ: ‘ಶ್ರೀ ರೇಣುಕ ವಿಜಯ‘ ಪುರಾಣ ಪ್ರವಚನ ನಾಳೆಯಿಂದ
ಪುರಾಣ ಪ್ರವಚನಗಳಲ್ಲಿ ಬರುವ ನೀತಿಪಾಠ, ಆದರ್ಶ, ಚಿಂತನೆಗಳನ್ನು ಅಳವಡಿಸಿಕೊಂಡು ಎದುರಾಗುವ ಸಂಕಷ್ಟಗಳನ್ನು ನಿವಾರಿಸಿಕೊಳ್ಳಬೇಕು. ಬದುಕಿನ ಅರ್ಥ, ಸಾರ್ಥಕ ತಿಳಿದುಕೊಳ್ಳಲು, ದುಃಖ, ದುಮ್ಮಾನ ದೂರ ಮಾಡಲು ಪುರಾಣಗಳನ್ನು ಆಲಿಸಿ ನೆಮ್ಮದಿ ಕಂಡುಕೊಳ್ಳಿ ಎಂದರು.
ಪ್ರಮುಖರಾದ ಡಾ.ಸಿದ್ದಲಿಂಗಸ್ವಾಮಿ ಇನಾಮದಾರ, ವಿನೋದಾದೇವಿ ಇನಾಮದಾರ, ದೇವಪ್ಪ ಕಟ್ಟಿಮನಿ, ಭೀಮರಡ್ಡಿ ಗದ್ದಿಕೇರಿ, ಅನ್ವರ ಗಡಾದ, ನಾಗಪ್ಪ ಮಾಸ್ತರ, ಸರಮೇಶ ಭಾವಿಹಳ್ಳಿ, ಗಿರೀಶ ಕಣವಿ, ಬಸಯ್ಯ, ಅರವಿಂದ ಬಿರಾದಾರ, ಶ್ರೀಶೈಲಪ್ಪ ಹಕ್ಕಂಡಿ, ವಿರುಪಣ್ಣ ಹಕ್ಕಂಡಿ, ಬಸಣ್ಣ, ಈಶಪ್ಪ ಜೋಳದ, ಬಾಳಪ್ಪ, ಚಂದ್ರಪ್ಪ ಜಂತ್ಲಿ, ಎ.ಟಿ.ಕಲ್ಮಠ, ಅಶೋಕ ಬಂಡಿ, ಮಂಜಪ್ಪ ತುಪ್ಪದಮಠ, ಮಲ್ಲಪ್ಪ ಜೋಗಿನ, ಜಗನ್ನಾಥರಡ್ಡಿ, ಅನ್ವರ ಗಡಾದ, ನಜರುದ್ದೀನ ಇತರರಿದ್ದರು.