

ದಾಂಡೇಲಿ: ಪನ್ಸೊಲಿಯಲ್ಲಿ ಆನೆಗಳ ದಿನಾಚರಣೆಯ ಅಂಗವಾಗಿ ಹೆಣ್ಣಾನೆಗಳಾದ ಚಾಮುಂಡಿ, ಶಿವಾಂಗಿ, ಚಂಚಲ ಪೂಜೆ ಮಾಡಲಾಯಿತು.
ವನ್ಯಜೀವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ಕಾಳಿ ಹುಲಿ ಸಂರಕ್ಷಣಾಧಿಕಾರಿ ಮರಿಯ ಕ್ರಿಸ್ಟುರಾಜಾ ಡಿ. ಪೂಜೆ ಸಲ್ಲಿಸಿದರು. ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಕೆ.ಎಸ್. ಗೊರವರ, ಆರ್ಎಫ್ಒ ಸಂಗಮೇಶ ಪಾಟೀಲ, ಸಂತೋಷ ಚವ್ಹಾಣ, ಉಪ ವಲಯ ಅರಣ್ಯಾಧಿಕಾರಿಗಳಾದ ಅನ್ನಪ್ಪ ಮುದಕನ್ನವರ, ಎ.ಎಂ. ಕಾಂಬಳೆ ರಾಜಕುಮಾರ ಕಲಗಟಗಿ ಹಾಗೂ ಇತರ ಸಿಬ್ಬಂದಿ, ಮಾವುತರು ಇದ್ದರು.
ವಿಶ್ವ ಆನೆಗಳ ಕುರಿತು ವೆಬಿನಾರ್: ವಿಶ್ವ ಆನೆಗಳ ದಿನಾಚರಣೆಯ ಅಂಗವಾಗಿ ವೆಬಿನಾರ್(ಆನ್ಲೈನ್ ಸೆಮಿನಾರ್) ಕಾರ್ಯಕ್ರಮಕ್ಕೆ ಬೆಂಗಳೂರಿನ ಪ್ರಧಾನ ಮುಖ್ಯ ಸಂರಕ್ಷಣಾಧಿಕಾರಿ (ವನ್ಯಜೀವಿ) ವಿಭಾಗ ಅಜಯ ಮಿಶ್ರಾ ಚಾಲನೆ ನೀಡಿದರು. ಶಿರಸಿಯ ಅರಣ್ಯ ಕಾಲೇಜು ಪ್ರಾಧ್ಯಾಪಕರಾಗಿ ಶ್ರೀಧರ ಭಟ್ ಹಾಗೂ ಮೈಸೂರಿನ ಪಶು ವೈದ್ಯರಾದ ಡಾ. ನಾಗರಾಜ, ಕಾಡಾನೆಗಳ ಸಂರಕ್ಷಣೆ ಹಾಗೂ ಸಾಕಾನೆಗಳ ಲಾಲನೆ, ಪಾಲನೆ ಕುರಿತು ವಿವರವಾದ ಮಾಹಿತಿ ನೀಡಿದರು. ಸುಮಾರು 153 ಜನ ಈ ವೆಬಿನಾರ್ನಲ್ಲಿ ಪಾಲ್ಗೊಂಡಿದ್ದರು.