

ಬಾಗಲಕೋಟೆ: ಕೃಷಿ ಹಾಗೂ ತೋಟಗಾರಿಕೆಗೆ -Àಲವತ್ತಾದ ಭೂಮಿ ಹೊಂದಿದೆ ನಮ್ಮ ನೆಲ. ಅದರ ಸದುಪಯೋಗವಾಗಬೇಕು. ತೋಟಗಾರಿಕಾ ಕ್ಷೇತ್ರಕ್ಕೆ ಈ ಮೇಳವು ದಾರಿ ದೀಪವಾಗಬೇಕು ಎಂದು ಜಿಲ್ಲಾಽಕಾರಿ ಜಾನಕಿ ಕೆ.ಎಂ. ಹೇಳಿದರು.
ತೋವಿವಿಯ ಉದ್ಯಾನಗಿರಿಯಲ್ಲಿ ಸೋಮವಾರ ತೋಟಗಾರಿಕೆ ಮೇಳ ಹಾಗೂ ರಾಷ್ಟಿçÃಯ ರೈತ ದಿನಾಚರಣೆ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವರು, ದೇಶದಲ್ಲಿ ಕೈಗಾರಿಕಾ ಪ್ರಗತಿಗೆ ಜನಗತ್ತಿನ ನಾನಾ ಭಾಗದ ಕೈಗಾರಿಕಾ ಪ್ರತಿನಿಽಗಳನ್ನು ಆಹ್ವಾನಿಸಿ ಔದ್ಯೋಗಿಕ ಮೇಳ ಮಾಡಿದಂತೆ ಕೃಷಿ ಹಾಗೂ ತೋಟಗಾರಿಕೆಗೆ ಸಂಬAಽಸಿದAತೆ ಯುವ ರೈತರಿಗೆ ಆಕರ್ಷಿಸುವ ನಿಟ್ಟಿನಲ್ಲಿ ಮೇಳ ಆಯೋಜಿಸಬೇಕಾಗಿದೆ ಎಂದರು.
ಮೂರು ದಿನಗಳ ಕಾಲ ನಡೆಯುವ ಈ ಮೇಳದಲ್ಲಿ ಹೊಸದಾಗಿ ತೋಟಗಾರಿಕೆ ಮಾಡುವ ಯುವ ರೈತರಿಗೆ ಪ್ರತಿಯೊಂದು ಬೆಳೆಗಳಲ್ಲಿ ಕುತುಹಲ ಇರುವದರಿಂದ ಈ ಮೇಳಕ್ಕೆ ಆಗಮಿಸಿ ತಮಗೆ ಇಷ್ಟವಾದ ಹಣ್ಣು, ತರಕಾರಿ ಹಾಗೂ ಹೂವು ಬೆಳೆಗಳಿಗೆ ಸಂಬAಽಸಿದತೆ ಮಾಹಿತಿ ಪಡೆದುಕೊಳ್ಳಬಹುದಾಗಿದೆ. ಇಂತಹ ಸದಾವಕಾಶವನ್ನು ಯುವ ರೈತರು ಹಾಗೂ ಈ ಭಾಗದ ಕೃಷಿಕರು ಉಪಯೋಗಿಸಿಕೊಂಡು ಕೃಷಿ ಜೊತೆಗೆ ತೋಟಗಾರಿಕೆ ಬೆಳೆಗಳಲ್ಲಿ ಹೆಚ್ಚಿನ ಆಸಕ್ತಿ ತೋರಿ ಆರ್ಥಿಕವಾಗಿ ಪ್ರಗತಿ ಹೊಂದಬೇಕು ಎಂದು ತಿಳಿಸಿದರು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಽಕಾರಿ ಶಶಿಧರ ಕುರೇರ ಮಾತನಾಡಿ, ಮೇಳದಲ್ಲಿ ಕೃಷಿ ಯಂತ್ರೋಪಕರಣ, ವಿವಿಧ ಪ್ರಾತ್ಯಕ್ಷಿಕೆಗಳ ಮಾಹಿತಿ ಪಡೆದುಕೊಳ್ಳಲು ತೋಟಗಾರಿಕೆ ಮೇಳ ಸಹಕಾರಿಯಾಗಿದೆ. ಕಳೆದ ಬಾರಿಗಿಂತ ಎರಡು ಪಟ್ಟು ಆಕರ್ಷಣೀಯವಾಗಿದೆ. ಜಿಲ್ಲಾ ಪಂಚಾಯಿತಿ ವತಿಯಿಂದ ನರೇಗಾ ಯೋಜನೆಯ ಮೂಲಕ ರೈತರಿಗೆ ಅನುಕೂಲ ಮಾಡಿಕೊಡಲಾಗುತ್ತಿದೆ ಎಂದು ಹೇಳಿದರು.
ಬಿಟಿಡಿಎ ಅಧ್ಯಕ್ಷ, ಶಾಸಕ ಎಚ್.ವೈ.ಮೇಟಿ ಮಾತನಾಡಿ, ಇಂದಿನ ಆಧುನಿಕ ಮಾದರಿಯ ಜೊತೆಗೆ ಹಳೇ ಪದ್ದತಿಗಳನ್ನು ಕೃಷಿ ಹಾಗೂ ತೋಟಗಾರಿಕೆಯಲ್ಲಿ ಅಳವಡಿಸಿಕೊಳ್ಳಬೇಕು. ಸ್ನಾತಕೋತ್ತರ ಪದವಿ ಪಡೆದ ಯುವಕರು ಕೃಷಿ ಮತ್ತು ತೋಟಗಾರಿಕೆಯತ್ತ ಮುಖ ಮಾಡಲು ಮುಂದಾಗಬೇಕು ಎಂದರು.
ತೋವಿವಿಯ ಕುಲಪತಿ ಡಾ.ವಿಷ್ಣುವರ್ಧನ ಮಾತನಾಡಿ, ಡಿ.೨೩ ರಂದು ಚೌದರಿ ಚರಣಸಿಂಗ್ ಜನ್ಮ ದಿನಾಚರಣೆ ಅಂಗವಾಗಿ ಸುಸ್ಥಿರ ಕೃಷಿಗಾಗಿ ರೈತರನ್ನು ಸಬಲೀಕರಣಗೊಳಿಸುವುದು ಎಂಬ ದ್ಯೇಯ ವಾಕ್ಯದೊಂದಿಗೆ ಈ ವರ್ಷ ರಾಷ್ಟಿçÃಯ ರೈತ ದಿನ ಆಚರಿಸಲಾಗುತ್ತಿದೆ. ಪ್ರತಿಯೊಬ್ಬ ಮನುಷ್ಯನಿಗೂ ಆಹಾರ, ಆರೋಗ್ಯ ಹಾಗೂ ಆದಾಯ ಅವಶ್ಯವಾಗಿದ್ದು, ಈ ಮೂರು ಸಿಗುವಂತಹದ್ದು, ಜೊತೆಗೆ ಮಾನಸಿಕ ನೆಮ್ಮದಿ ಕೃಷಿ ಮತ್ತು ತೋಟಗಾರಿಕೆಯಿಂದ ಸಾಧ್ಯವಿದೆ ಎಂದರು ತಿಳಿಸಿದರು.
ರೈತರ ಕುಟುಂಬದ ಯುವಕರು ತಮ್ಮ ಹಿರಿಯರ ಜಮೀನನ್ನು ಬಿಟ್ಟು ಆಹಾರ ಆದಾಯ ಅರಿಸಿ ನಗರದತ್ತ ಗುಳೆ ಹೋಗುವದನ್ನು ಬಿಟ್ಟು, ಗೌರವಯುತವಾದ ಹಾಗೂ ಅನ್ನದಾತ ಎನಿಸಿಕೊಳ್ಳಲು ಕೃಷಿ ಹಾಗೂ ತೋಟಗಾರಿಕೆಯತ್ತ ಒಲವು ತೋರಬೇಕು ಎಂದರು.
ನಗರಸಭೆ ಅಧ್ಯಕ್ಷೆ ಸವಿತಾ ಲೆಂಕಣ್ಣವರ, ಜಿಲ್ಲಾ ಪೊಲೀಸ್ ವರಿಷ್ಠಾಽಕಾರಿ ಅಮರನಾಥ ರೆಡ್ಡಿ, ಯುಕೆಪಿ ಪ್ರಧಾನ ವ್ಯವಸ್ಥಾಪಕ ವಿಠಲರಾವ್, ನಬಾರ್ಡನ ಪ್ರಾದೇಶಿಕ ಕಚೇರಿಯ ಅಸಿಸ್ಟಂಟ್ ಮ್ಯಾನೇಜರ್ ಸುಪ್ರಿಯಾ ಮೋಹಿನಿ, ತೋವಿವಿಯ ಡೀನ್ ಲಕ್ಷಿ÷್ಮÃನಾರಾಯಣ, ಕುಲಸಚಿವ ಮಹಾದೇವ ಮುರಗಿ, ವಿಶ್ರಾಂತ ಕುಲಪತಿ ಡಾ.ಕೆ.ಎಂ.ಇAದಿರೇಶ, ವ್ಯವಸ್ಥಾಪನಾ ಮಂಡಳಿ ಸದಸ್ಯರಾದ ಡಾ.ಅನಿತಾ, ಡಾ.ಎನ್.ಕೆ.ಹೆಗಡೆ, ಡಾ.ತಮ್ಮಯ್ಯ, ಬಿಡಿಸಿಸಿ ಬ್ಯಾಂಕ್‌ನ ಅಧ್ಯಕ್ಷ ಅಜಯಕುಮಾರ ಸರನಾಯಕ ಸೇರಿದಂತೆ ಇತರರು ಉಪಸ್ಥಿತರಿದ್ದರು.