ಪತ್ರಿಕೆ ಓದಿ, ಅಪ್‌ಡೇಟ್ ಆಗಿ

CUK
Published on

ಕಲಬುರಗಿ: ಗುಣಮಟ್ಟದ ಸಂಶೋಧನಾ ಪ್ರಬಂಧ ಬರೆಯಲು, ಪ್ರಕಟಿಸಲು ಅಧ್ಯಾಪಕರು ಉನ್ನತ ಶ್ರೇಯಾಂಕದ ಮತ್ತು ಹೆಚ್ಚು ಪ್ರಭಾವವುಳ್ಳ ನಿಯತಕಾಲಿಕೆ ಓದಬೇಕು ಎಂದು ಕರ್ನಾಟಕ ಕೇಂದ್ರೀಯ ವಿವಿ ಕುಲಪತಿ ಪ್ರೊ.ಬಟ್ಟು ಸತ್ಯನಾರಾಯಣ ಸಲಹೆ ನೀಡಿದರು.
ಕೇಂದ್ರ ಗ್ರಂಥಾಲಯವು ಭಾರತೀಯ ಗ್ರಂಥಾಲಯ ಸಂಘದ ಸಹಯೋಗದಲ್ಲಿ ಶುಕ್ರವಾರ ಆಯೋಜಿಸಿದ್ದ ಗುಣಮಟ್ಟದ ಸಂಶೋಧನಾ ಲೇಖನಗಳ ಬರವಣಿಗೆ ಕುರಿತ ಒಂದು ದಿನದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಭಾರತದ ಗ್ರಂಥಾಲಯ ವಿಜ್ಞಾನದ ಪಿತಾಮಹ ಪದ್ಮಶ್ರೀ ಡಾ.ಎಸ್.ಆರ್.ರಂಗನಾಥನ್ ಅವರ ೧೩೧ನೇ ಜನ್ಮ ದಿನಾಚರಣೆಯ ಸ್ಮರಣಾರ್ಥ ರಾಷ್ಟಿçÃಯ ಗ್ರಂಥಪಾಲಕರ ದಿನಾಚರಣೆ ಅಂಗವಾಗಿ ಈ ಕಾರ್ಯಾಗಾರ ಆಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ ಗ್ರಂಥಾಲಯದಲ್ಲಿ ಜ್ಞಾನದ ಸಂಕೇತವಾಗಿ ಸರಸ್ವತಿ ದೇವಿ ಪ್ರತಿಮೆ ಅನಾವರಣಗೊಳಿಸಿದರು.
ನಿತ್ಯ ನಮ್ಮ ಜ್ಞಾನ ನವೀಕರಿಸಬೇಕು. ಲೇಖನಗಳನ್ನು ಪ್ರಕಟಿಸುವಲ್ಲಿ ಅತ್ಯಂತ ಪ್ರಾಮಾಣಿಕ ಮತ್ತು ನೈತಿಕವಾಗಿರಬೇಕು. ಸಿಯುಕೆ ಗ್ರಂಥಾಲಯವು ಬಹಳ ಮುಖ್ಯವಾದ ಸಾಫ್ಟ್ವೇರ್, ಡೇಟಾಬೇಸ್ ಮತ್ತು ಇ-ಸಂಪನ್ಮೂಲ ಹೊಂದಿದೆ, ಆದ್ದರಿಂದ ಗುಣಮಟ್ಟದ ಪೇಪರ್ ಪ್ರಕಟಿಸಲು ಅಧ್ಯಾಪಕರು ಇದನ್ನು ಬಳಸಿಕೊಳ್ಳಬೇಕು ಎಂದು ಹೇಳಿದರು.
ವಿವಿ ಕುಲಸಚಿವ ಪ್ರೊ.ಆರ್.ಆರ್.ಬಿರಾದಾರ್‌ಮಾತನಾಡಿ, ಪರಿಣಾಮಕಾರಿ ಸಂಶೋಧನೆಯೊAದಿಗೆ ಗುಣಾತ್ಮಕ ಸಂಶೋಧನೆಗೂ ಪ್ರಾಮುಖ್ಯತೆ ನೀಡಬೇಕು. ಸಂಶೋಧನೆಯು ಕಾರ್ಯಸಾಧ್ಯತೆ, ಆಸಕ್ತಿ, ಹೊಸತನದೊಂದಿಗೆ ಇರಬೇಕು. ಸಂಶೋಧನೆಯಲ್ಲಿ ನೈತಿಕತೆ ಬಹಳ ಪ್ರಮುಖ ಪಾತ್ರ ವಹಿಸುತ್ತದೆ. ಎಲ್ಲಾ ಸಂಶೋಧನೆಗಳು ಶೇ.೧೦೦ರಷ್ಟು ನೈತಿಕವಾಗಿರಬೇಕು ಎಂದು ನಿರೀಕ್ಷಿಸಲಾಗುತ್ತದೆ ಎಂದರು.
ಸ್ಕೂಲ್ ಆಫ್ ಇಂಜಿನಿಯರಿAಗ್ ಡೀನ್ ಡಾ.ಪರಮೇಶ್ ಮಾತನಾಡಿದರು. ವಿಶ್ವವಿದ್ಯಾನಿಲಯದ ಗ್ರಂಥಪಾಲಕ ಡಾ.ಪಿ.ಎಸ್. ಕಟ್ಟಿಮನಿ ಪ್ರಾಸ್ತಾವಿಕ ಮಾತನಾಡಿದರು. ಪ್ರೊ.ಶ್ರೀಕಂಠಯ್ಯ, ಪರೀಕ್ಷಾ ನಿಯಂತ್ರಕ ಕೋಟ್ ಸಾಯಿಕೃಷ್ಣ, ಡಾ.ಧನುಕುಮಾರ್ ಪಟ್ಟಣಶೆಟ್ಟಿ, ತೆಲಂಗಾಣ ರಾಜ್ಯ ಗ್ರಂಥಾಲಯ ವೃತ್ತಿಪರ ಸಂಘದ ಅಧ್ಯಕ್ಷ ಪ್ರೊ.ಎನ್.ಲಕ್ಷö್ಮಣರಾವ್, ಆಶಿಶ್ ದಾಸ್ ಇದ್ದರು. ಡಾ. ದೀಕ್ಷಿತ್ ನಿರೂಪಿಸಿದರು. ರಾಜಕುಮಾರ್ ಕಲ್ಯಾಣಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net