ಪತ್ನಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ತಾನೂ ವಿಷ ಕುಡಿದ‌ ಪತಿ

images-13.jpeg
Published on

ಸಿದ್ದಾಪುರ(ಉತ್ತರ ಕನ್ನಡ): ಕುಡಿದ ಮತ್ತಿನಲ್ಲಿ ಪತ್ನಿಗೆ ಪೆಟ್ರೋಲ್‌ ಸುರಿದು ಬೆಂಕಿ ಹಚ್ಚಿದ ಪತಿ ತಾನೂ ವಿಷ ಕುಡಿದ ಘಟನೆ ತಾಲೂಕಿನ ಕಾನಗೋಡ ಗಣೇಶ ನಗರದಲ್ಲಿ ಶುಕ್ರವಾರ ನಡೆದಿದೆ.

ಗುತ್ಯಾ ಸಣ್ಣ ಹುಡುಗ ಚೆನ್ನಯ್ಯ(56) ತನ್ನ ಪತ್ನಿ ರೇಣುಕಾ ಗುತ್ಯಾ ಚೆನ್ನಯ್ಯ(45) ಎಂಬಾಕೆಯ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದ. ಎದೆ ಕಾಲಿನ ಭಾಗ ಸುಟ್ಟು ನರಳುತ್ತಿದ್ದ ಮಹಿಳೆಯನ್ನು ಅಕ್ಕಪಕ್ಕದ ಜನ ಬಂದು ಆಂಬುಲೆನ್ಸ್ ಮೂಲಕ‌ ಸಿದ್ದಾಪುರ ಸರ್ಕಾರಿ ಆಸ್ಪತ್ರೆಗೆ ಸಾಗಿಸಿದ್ದರು.ಪತ್ನಿ ಆಸ್ಪತ್ರೆಗೆ ಸಾಗಿಸಿದ ನಂತರ ಇತ್ತ ಗುತ್ಯಾ ಕೀಟ ನಾಶಕ ಸೇವಿಸಿದ್ದ.

ತೀವ್ರವಾಗಿ ಅಸ್ವಸ್ಥಗೊಂಡ‌ ಆತನನ್ನು ಖಾಸಗಿ ವಾಹನದ ಮೂಲಕ ಶಿವಮೊಗ್ಗ ಆಸ್ಪತ್ರೆಗೆ ಸಾಗಿಸಲಾಗಿದೆ. ಸಿದ್ದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net