ಪತ್ನಿ ಸಾವು ಪತಿಗೆ ೧ ವರ್ಷ ಶಿಕ್ಷೆ !

Published on

ಬಾಗಲಕೋಟೆ: ಬೇರೆ ಮಹಿಳೆಯೊಂದಿಗೆ ಅನೈತಿಕ ಸಂಬಂಧವಿಟ್ಟುಕೊಂಡು ಪತ್ನಿಗೆ ಹೊಡಿ, ಬಡಿ ಮಾಡಿ ಆತ್ಮಹತ್ಯೆ ಮಾಡಿಕೊಳ್ಳುವಂತೆ ಮಾಡಿದ ಪತಿಗೆ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ನ್ಯಾಯಾಽÃಶ ಎನ್.ವಿ.ವಿಜಯ ೧ ವರ್ಷ ಕಾರಾಗೃಹ ಶಿಕ್ಷೆ, ೫ ಸಾವಿರ ದಂಡ ವಿಽಸಿ ತೀರ್ಪು ನೀಡಿದ್ದಾರೆ.

ಭೀಮಪ್ಪ ರಾಯಪ್ಪ ವಡ್ಡರ ಶಿಕ್ಷೆಗೆ ಗುರಿಯಾದ ಅಪರಾಽ. ಮೆಟಗುಡ್ಡ ನಿವಾಸಿಯಾದ ಈತ ಪತ್ನಿ ತಾಯವ್ವಳಿಗೆ ಕಿರುಕುಳ ನೀಡುತ್ತಿದ್ದನು. ಅನೈತಿಕ ಸಂಬಂಧ ಹೊಂದಿದ್ದನು. ಇದರಿಂದ ನೊಂದ ತಾಯವ್ವ ತವರು ಮನೆ ಇನಾಂ ಯರಗೊಪ್ಪ ಗ್ರಾಮಕ್ಕೆ ಬಂದು ವಾಸವಾಗಿದ್ದಳು. ಪತಿಯ ಮಾನಸಿಕ ಹಿಂಸೆಗೆ ಬೇಸತ್ತು ಮೈ ಮೇಲೆ ಸೀಮೆ ಎಣ್ಣೆ ಹಾಕಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಳು. ಜಿಲ್ಲಾ ಆಸ್ಪತ್ರೆಗೆ ದಾಖಲು ಆಗಿದ್ದಾಗ ಚಿಕಿತ್ಸೆ -Àಲಕಾರಿಯಾಗದೇ ಮೃತಪಟ್ಟಿದ್ದಳು.

ಈ ಕುರಿತು ಕೆರೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣದ ವಿಚಾರಣೆ ನಡೆಸಿದ ಜಿಲ್ಲಾ ನ್ಯಾಯಾಽÃಶರಾದ ಎನ್.ವಿ.ವಿಜಯ ಅಪರಾಽ ಭೀಮಪ್ಪ ವಡ್ಡರ ಅವರಿಗೆ ೧ ವರ್ಷ ಕಾರಾಗೃಹ ವಾಸ ಹಾಗೂ ೫ ಸಾವಿರ ದಂಡ ವಿಽಸಿ ತೀರ್ಪು ನೀಡಿದ್ದಾರೆ. ಸರ್ಕಾರದ ಪರವಾಗಿ ವಿ.ಜಿ.ಹೆಬಸೂರ ವಾದ ಮಂಡಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net