

ಶಿರಸಿ: ತವರುಮನೆಗೆ ಹೋಗಿದ್ದ ಪತ್ನಿ ಮರಳಿ ಗಂಡನಮನೆಗೆ ಬರದ ಹಿನ್ನೆಲೆಯಲ್ಲಿ ಮನನೊಂದ ಗಂಡ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ಬನವಾಸಿಯ ಕಂತ್ರಾಜಿಯಲ್ಲಿ ಶುಕ್ರವಾರ ನಡೆದಿದೆ.
ಚನ್ನಬಸಪ್ಪ ಕಂತ್ರಾಜಿ (33) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ಈತನ ಪತ್ನಿ ಭೂಮಿ ಹುಣ್ಣಿಮೆ ದಿನ ತವರು ಮನೆಗೆ ಹೋದವಳು ವಾಪಸ್ ಗಂಡನ ಮನೆಗೆ ಬಂದಿರಲಿಲ್ಲ. ಈ ವಿಷಯವನ್ನೇ ಮನಸ್ಸಿಗೆ ಹಚ್ಚಿಕೊಂಡು ಮನೆಯಲ್ಲಿರುವ ಬಿದಿರು ಗಳಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಕುರಿತು ಬನವಾಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.