ಪತಿಯ ಸಾವಿನಿಂದ ಮನನೊಂದು ಪತ್ನಿ ಆತ್ಮಹತ್ಯೆ

Published on

ಗುಂಡ್ಲುಪೇಟೆ: ಪತಿಯ ಸಾವಿನಿಂದ ಮನನೊಂದ ಪತ್ನಿ ನೇಣಿಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ತಾಲೂಕಿನ ಕೊಡಸೋಗೆ ಗ್ರಾಮದ ಸಿದ್ದರಾಜು ಅವರ ಪತ್ನಿ ಬಸಮ್ಮಣ್ಣಿ (35) ಆತ್ಮಹತ್ಯೆ ಮಾಡಿಕೊಂಡವರು. ಸಿದ್ದರಾಜು ಶನಿವಾರ ಮೃತಪಟ್ಟಿದ್ದರು. ಆತನ ಸಾವಿಗೆ ಪತ್ನಿ ಬಸಮ್ಮಣ್ಣಿ ಕಾರಣ ಎಂದು ಮೃತನ ಸಹೋದರಿ ಪುಟ್ಟಮ್ಮ ತೆರಕಣಾಂಬಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಕೂಡಲೇ ಸ್ಥಳಕ್ಕೆ ತೆರಳಿದ ಪೊಲೀಸರು ಮೃತದೇಹವನ್ನು ಆಸ್ಪತ್ರೆಗೆ ಕೊಂಡೊಯ್ದು ಮರಣೋತ್ತರ ಪರೀಕ್ಷೆ ನಡೆಸಿದಾಗ ಸಹಜ ಸಾವಾಗಿರುವುದು ತಿಳಿದು ಬಂದಿದೆ. ಆದರೆ, ಪತಿಯ ಸಾವಿನಿಂದ ಬೇಸತ್ತ ಬಸಮ್ಮಣ್ಣಿ ಭಾನುವಾರ ಬೆಳಗ್ಗೆ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ತೆರಕಣಾಂಬಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net