

ಬಾಗಲಕೋಟೆ: ಪತಂಜಲಿ ಯೋಗ ಸಮಿತಿಯು ವಿಜಯವಾಣಿ ಮಾಧ್ಯಮ ಸಯೋಗದಲ್ಲಿ ವಿದ್ಯಾಗಿರಿ ಬಡಾವಣೆಯಲ್ಲಿರುವ ಸಾಯಿ ಮಂದಿರ ಆವರಣದಲ್ಲಿ ವಿಶ್ವ ಯೋಗ ದಿನಾಚರಣೆ ಅಂಗವಾಗಿ ವಿವಿಧ ಆಸನಗಳನ್ನು ಪ್ರದರ್ಶಿಸಲಾಯಿತು.
ವೃಕ್ಷಾಸನ, ಪಾದ ಹಸ್ತಾಸನ, ಅರ್ಧ ಚಕ್ರಾಸನ, ದಂಡಾಸನ, ಭದ್ರಸಾನ, ವಜ್ರಾಸನ,ಉತ್ಥಾಸನಮಂಡೊಕಾಸನ, ವಕ್ರಾಸನ, ಭುಜಂಗಾಸನ, ಶಲಭಾಸನ, ಸೇತುಬಂಧಾಸನ, ಉತ್ಥಾನಪಾದಾಸನ, ಶವಾಸನ, ಓಂಕಾರ, ಕಪಾಲಬಾತಿ, ಶವಾಸನ, ಶಲಬಾಸನ, ಪ್ರಾಣಾಯಾಮ, ಪವನ ಮುಕ್ತಾಸನ ಪ್ರಾಣಯಾಮ ಸೇರಿದಂತೆ ವಿವಿಧ ಆಸನಗಳನ್ನು ೪೫ ನಿಮಿಷಗಳ ಕಾಲ ಸಾಮೂಹಿಕವಾಗಿ ಪ್ರಸ್ತುತ ಪಡಿಸಲಾಯಿತು.
ಬಿಟಿಡಿಎ ಮಾಜಿ ಅಧ್ಯಕ್ಷ ಜಿ.ಎನ್.ಪಾಟೀಲ ಮಾತನಾಡಿ, ಯೋಗದಿಂದ ರೋಗ ಮುಕ್ತಿಯಾಗುತ್ತದೆ. ಸಮಾಜದಲ್ಲಿ ಶಾಂತಿ, ನೆಮ್ಮದಿ ದೊರೆಯುತ್ತದೆ. ಯೋಗ ಎಲ್ಲ ವರ್ಗದ ಜನ ಮಾಡಬಹುದು. ಉತ್ಸಾಹದ ಜೀವನಕ್ಕೆ ಯೋಗ ಅಗತ್ಯ ಎಂದರು.
.ಅಶೋಕ ಡೊರ್ಲೆ, ಯೋಗ ಕ್ಷೇತ್ರಕ್ಕೆ ಪತಂಜಲಿ ಯೋಗ ಬಹಳಷ್ಟು ಕೊಡುಗೆ ನೀಡಿದೆ. ಭಾರತದಲ್ಲಿ ದೊಡ್ಡ ಕ್ರಾಂತಿ ಮಾಡಿದೆ. ವಿಶ್ವವು ಯೋಗದ ಬಗ್ಗೆ ನಿಬ್ಬೆರಗಾಗಿ ನೋಡುತ್ತಿದೆ. ವಿಜಯವಾಣಿ ಮಾಧ್ಯಮ ಸಹಯೋಗದಲ್ಲಿ ಯೋಗ ಹಮ್ಮಿಕೊಂಡಿರುವುದು ಸಂತೋಷದಾಯಕ ಎಂದರು.
ಈ ಸಂದರ್ಭದಲ್ಲಿ ಹಿರಿಯ ನಾಗರಿಕ ವೇದಿಕೆ ಅಧ್ಯಕ್ಷ ಸಿ.ಎಸ್.ಪಾಟೀಲ, ಪತಂಜಲಿ ಯೋಗ ಸಮಿತಿ ಜಿಲ್ಲಾ ಪ್ರಭಾರಿ ಎಚ್.ಎನ್.ಇನಾಂದಾರ, ಮಹಿಳಾ ಘಟಕದ ಪ್ರಭಾರಿ ಸೀಮಾ ಮಣ್ಣೂರ ಸೇರಿದಂತೆ ಇತರರು ಇದ್ದರು.