ಪಡ್ಡ್ಯಾರಬೆಟ್ಟ ಕೊಡಮಣಿತ್ತಾಯ ದೈವದ ನೇಮೋತ್ಸವ

7
Published on

ಬೆಳ್ತಂಗಡಿ: ಶ್ರೀ ಕ್ಷೇತ್ರ ಪಡ್ಡ್ಯಾರಬೆಟ್ಟ ಕೊಡಮಣಿತ್ತಾಯ ದೈವದ ವರ್ಷಾವಧಿ ಜಾತ್ರೆಯ ಅಂಗವಾಗಿ ಮಾರೂರು ಖಂಡಿಗ ರಾಮದಾಸ ಆಸ್ರಣ್ಣರ ಪೌರೋಹಿತ್ಯದಲ್ಲಿ ಮಹಾಪೂಜೆ, ರಥೋತ್ಸವ, ಹೂವಿನ ಪೂಜೆ, ಮಹಾ ಅನ್ನಸಂತರ್ಪಣೆ ಹಾಗೂ ರಾತ್ರಿ ಕೊಡಮಣಿತ್ತಾಯ ದೈವದ ನೇಮೋತ್ಸವ ನಡೆಯಿತು.

ಮಂಗಳವಾರ ಧ್ವಜಾವರೋಹಣ, ಸಂಪ್ರೋಕ್ಷಣೆ, ಪಡ್ಯೋಡಿ ಗುತ್ತಿಗೆ ಭಂಡಾರ ಹಿಂದಿರುಗುವ ಕಾರ್ಯಕ್ರಮಗಳು ನಡೆದವು. ಬುಧವಾರ ಸಂಜೆ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಲಾಪಗಳು, ಹೂವಿನ ಪೂಜೆ, ಕೊಡಮಣಿತ್ತಾಯ ದೈವದ ಕುರುತಂಬಿಲ ನೇಮ, ತುಲಾಭಾರ ಕಾರ್ಯಕ್ರಮಗಳು ನಡೆದವು.

ಶ್ರೀ ಕ್ಷೇತ್ರ ಪಡ್ಡಾೃರಬೆಟ್ಟದ ಆನುವಂಶೀಯ ಆಡಳಿತದಾರ ಜೀವಂಧರ ಕುಮಾರ್ ಯಾನೆ ಕಂಚಿ ಪೂವಣಿ ಪಡ್ಡೊೃೀಡಿಗುತ್ತು, ವಿಕಾಸ್ ಜೈನ್, ವಿಶ್ವಾಸ್ ಜೈನ್ ಹಾಗೂ ಭಕ್ತರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net