ಪಡಿತರ ಪರಿಶೀಲಿಸಿದ ಸಚಿವ ಹೆಬ್ಬಾರ

19KWR7-Hebbar, Mundgod
Published on

ಮುಂಡಗೋಡ: ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ ಅವರು ಪಟ್ಟಣದ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಗೆ ಬುಧವಾರ ಭೇಟಿ ನೀಡಿ ಪಡಿತರ ಪೂರೈಕೆ ಪರಿಶೀಲಿಸಿದರು. ಲಭ್ಯವಿರುವ ವೈದ್ಯಕೀಯ ಸೌಕರ್ಯ, ಚಿಕಿತ್ಸೆ ಪ್ರಕ್ರಿಯೆಗಳ ಕುರಿತು ಮಾಹಿತಿ ಪಡೆದು, ಕೋವಿಡ್ ಲಸಿಕೆ ನೀಡಲು ನಿಗದಿಪಡಿಸಿರುವ ಸ್ಥಳದ ಪರಿಶೀಲನೆ ನಡೆಸಿ ಅಧಿಕಾರಿಗಳಿಗೆ ಅಗತ್ಯ ಸಲಹೆ- ಸೂಚನೆ ನೀಡಿದರು. ನಂತರ ಪಟ್ಟಣದ ನ್ಯಾಯಬೆಲೆ ಅಂಗಡಿಗೆ ಭೇಟಿ ನೀಡಿ ಸಾರ್ವಜನಿಕರಿಗೆ ತೊಂದರೆ ಆಗದಂತೆ ಸಾಮಾಜಿಕ ಅಂತರ ಕಾಯ್ದುಕೊಂಡು, ಮಾಸ್ಕ್ ಧರಿಸಿ ಪಡಿತರ ಪೂರೈಸುವಂತೆ ಸೂಚಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net