ಪಠ್ಯ ಪುಸ್ತಕಕಷ್ಟೇ ಸೀಮಿತರಾದರೆ ಯಶಸ್ಸು ಅಸಾಧ್ಯ

Published on

ಹೊಳೆನರಸೀಪುರ: ವಿದ್ಯಾರ್ಥಿಗಳು ಪಠ್ಯ ಪುಸ್ತಕ, ವ್ಯಾಸಂಗಕ್ಕಷ್ಟೇ ಸೀಮಿತರಾದಲ್ಲಿ ಸ್ಪರ್ಧಾ ಯುಗದಲ್ಲಿ ಯಶಸ್ಸು ಕಾಣಲು ಸಾಧ್ಯವಿಲ್ಲ ಎಂದು ತಹಸೀಲ್ದಾರ್ ವೈ.ಎಂ.ರೇಣುಕುಮಾರ್ ತಿಳಿಸಿದರು.

ಪಟ್ಟಣದ ಸರ್ಕಾರಿ ಪಾಲಿಟೆಕ್ನಿಕ್ ಮಹಿಳಾ ಕಾಲೇಜಿನಲ್ಲಿ ಕಳೆದ 30 ದಿನಗಳು ಆಯೋಜಿಸಿದ್ದ ವಿದ್ಯಾರ್ಥಿಗಳ ಮೌಲ್ಯವರ್ಧಿತ ಕಾರ್ಯಾಗಾರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ಮಾತೃಭಾಷೆಯನ್ನು ಗೌರವಿಸುವುದರ ಜತೆಗೆ ಇಂಗ್ಲಿಷ್ ಕಲಿಕೆ ಅಪೇಕ್ಷಣೀಯ. ಅಂತೆಯೇ ಡಿಪ್ಲೊಮಾ ಪದವಿ ಪಡೆದ ವಿದ್ಯಾರ್ಥಿಗಳಿಗೆ ಉನ್ನತಿ ಸಂಸ್ಥೆ 30 ದಿನಗಳ ಉದ್ಯೋಗ ಮಾಹಿತಿ ನೀಡಿರುವುದು ಪ್ರಶಂಸನೀಯ. ವಿದ್ಯಾರ್ಥಿಗಳು ಕಾರ್ಯಾಗಾರಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಉನ್ನತಿ ಫೌಂಡೇಷನ್ ಸಂಸ್ಥೆಯ ತರಬೇತಿದಾರರಾದ ಕುಸುಮಾ ಕುಮಾರಿ ಮಾತನಾಡಿ, ವಿದ್ಯಾರ್ಥಿಗಳ ಉನ್ನತಿಯೇ ಸಂಸ್ಥೆಯ ಹೆಗ್ಗಳಿಕೆ. ಉಚಿತವಾಗಿ ತರಬೇತಿ ನೀಡುವ ಮೂಲಕ ಅವರ ಸಾಧನೆಗೆ ನಾಂದಿಯಾಗುತ್ತಿದೆ. ಸರ್ಕಾರಿ ಕಾಲೇಜುಗಳ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಿ ಕಲಿಕಾ ಮೌಲ್ಯ ಹೆಚ್ಚಿಸುವ ಗುರಿ ಹೊಂದಲಾಗಿದೆ ಎಂದರು.

ಉಪನ್ಯಾಸಕರಾದ ಆಶಾರಾಣಿ, ಸುಮತಿ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net