

ದಾಂಡೇಲಿ: ಪಕ್ಷ ಸಂಘಟನೆಗೆ ಪಕ್ಷದ ಪ್ರಮುಖರು, ಕಾರ್ಯಕರ್ತರು ಹೆಚ್ಚಿನ ಗಮನ ಹರಿಸಬೇಕು. ಸಾರ್ವಜನಿಕರಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾದ ಜನಪರ ಯೋಜನೆಗಳು ಮತ್ತು ಕಾರ್ಯಕ್ರಮಗಳ ಬಗ್ಗೆ ಮನವರಿಕೆ ಮಾಡಿಕೊಡಬೇಕು ಎಂದು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ವೆಂಕಟೇಶ ನಾಯ್ಕ ಹೇಳಿದರು.
ನಗರದ ಸಿಂಪಿ ಸಮಾಜದ ಸಭಾಭವನದಲ್ಲಿ ಜೊಯಿಡಾ - ದಾಂಡೇಲಿ ತಾಲೂಕಿನ ಕಾರ್ಯಕರ್ತರಿಗಾಗಿ ಆಯೋಜಿಸಿದ್ದ ಎರಡು ದಿನಗಳ ಪ್ರಶಿಕ್ಷಣ ವರ್ಗವನ್ನು ಶನಿವಾರ ಉದ್ಘಾಟಿಸಿ ಅವರು ಮಾತನಾಡಿದರು.
ಬರಲಿರುವ ತಾಪಂ ಮತ್ತು ಜಿಪಂ ಚುನಾವಣೆಯಲ್ಲಿ ಪಕ್ಷದ ಹೆಚ್ಚಿನ ಅಭ್ಯರ್ಥಿಗಳನ್ನು ಗೆಲ್ಲಿಸಲು ಜನರ ಬಳಿ ತೆರಳಿ ಪಕ್ಷದ ಉತ್ತಮ ಗುರಿ ಉದ್ದೇಶಿತ ಕಾರ್ಯಯೋಜನೆಗಳ ಬಗ್ಗೆ ಮಾಹಿತಿ ನೀಡಬೇಕು ಎಂದರು.
ಸಂಪನ್ಮೂಲ ವ್ಯಕ್ತಿಗಳಾಗಿ ವಿಧಾನ ಪರಿಷತ್ತಿನ ಸದಸ್ಯ ಶಾಂತಾರಾಮ ಸಿದ್ದಿ, ವಿನೋದ ಪ್ರಭು, ಗುರುಪ್ರಸಾದ ಹೆಗಡೆ, ಡಾ. ರವಿ ಭಟ್, ಡಾ. ಜಿ.ಜಿ. ಹೆಗಡೆ ಪಾಲ್ಗೊಂಡಿದ್ದರು.
ಪಕ್ಷದ ಜಿಲ್ಲಾ ಸಹಪ್ರಭಾರಿ ಪ್ರಸನ್ನ ಕೆರಕೈ, ಪ್ರಶಿಕ್ಷಣ ಪ್ರಕೋಷ್ಟದ ಜಿಲ್ಲಾ ಸಂಚಲಕ ಗಣಪತಿ ಮಾನಿಗದ್ದೆ, ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎನ್.ಎಸ್. ಹೆಗಡೆ, ಗೋವಿಂದ ನಾಯ್ಕ, ದಾಂಡೇಲಿ ಘಟಕದ ಅಧ್ಯಕ್ಷ ಚಂದ್ರಕಾಂತ ಕ್ಷೀರಸಾಗರ, ಪ್ರಧಾನ ಕಾರ್ಯದರ್ಶಿ ಗುರು ಮಠಪತಿ, ಜಿಲ್ಲಾ ಕಾರ್ಯದರ್ಶಿ ಬಸವರಾಜ ಕಲಶೆಟ್ಟಿ, ಜೊಯಿಡಾ ತಾಲೂಕು ಘಟಕ ಅಧ್ಯಕ್ಷ ಸಂತೋಷ ರೇಡಕರ, ಪ್ರಧಾನ ಕಾರ್ಯದರ್ಶಿ ಸುಭಾಷ ಮಾಂಜ್ರೆಕರ, ದಾಂಡೇಲಿ ನಗರ ಸಭೆ ಸದಸ್ಯರು, ಅಂಬಿಕಾನಗರ ಗ್ರಾಮ ಪಂಚಾಯಿತಿಯ ಸದಸ್ಯರು ಉಪಸ್ಥಿತರಿದ್ದರು.