ಪಕ್ಷ ಸಂಘಟನೆಗಾಗಿ ಜೀವನ ಮುಡಿಪು

11 SARAG 1
Published on

ಸರಗೂರು: ಮಾಜಿ ಸಂಸದ ಆರ್.ಧ್ರುವನಾರಾಯಣ ಅವರು ಪಕ್ಷ ಸಂಘಟನೆಗಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟಿದ್ದರು ಎಂದು ಅಕ್ರಮ-ಸಕ್ರಮ ಸಮಿತಿ ಸದಸ್ಯ ಶಿವಶಂಕರ್ ತಿಳಿಸಿದರು.

ಪಟ್ಟಣದ ನಾಲ್ಕನೇ ವಾರ್ಡ್‌ನ ಡಾ.ಬಿ.ಆರ್.ಅಂಬೇಡ್ಕರ್ ಸಮುದಾಯ ಭವನ ಟ್ರಸ್ಟ್, ಆದಿಕರ್ನಾಟಕ ಸಮಾಜ ವತಿಯಿಂದ ಆಯೋಜಿಸಿದ್ದ ಆರ್.ಧ್ರುವನಾರಾಯಣ ಎರಡನೇ ವರ್ಷದ ಪುಣ್ಯ ಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ಧ್ರುವನಾರಾಯಣ ಅವರು ದೈಹಿಕವಾಗಿ ನಮ್ಮನ್ನು ಅಗಲಿರಬಹುದು. ಆದರೆ ಅವರು ಮಾಡಿರುವ ಕೆಲಸ-ಕಾರ್ಯಗಳು ನಮ್ಮ ಮುಂದೆ ಇದ್ದು ಸದಾ ಅವರನ್ನು ನೆನಪಿನಲ್ಲಿ ಇಟ್ಟಿವೆ ಎಂದರು.

ಅಂಬೇಡ್ಕರ್ ಟ್ರಸ್ಟ್ ಅಧ್ಯಕ್ಷ ಎಸ್.ಡಿ.ಸಣ್ಣಸ್ವಾಮಿ ಮಾತನಾಡಿ, ಶಾಸಕರಾಗಿ, ಸಂಸದರಾಗಿ ಧ್ರುವನಾರಾಯಣ ಅವರು ಮಾಡಿರುವ ಕಾರ್ಯ ಸ್ಮರಣೀಯ ಎಂದರು.

ರಂಗಯ್ಯ, ಕಾರಯ್ಯ, ಶಿವಶಂಕರ್, ಶಿವಣ್ಣ, ಭೀಮಯ್ಯ, ಮಹದೇವ, ಸಿದ್ದಲಿಂಗಪ್ಪ, ದೇವಯ್ಯ, ಜವರಯ್ಯ, ಭೀಮಯ್ಯ, ದೇವಪ್ಪ, ಜಯ, ನಂಜುಂಡಯ್ಯ, ಬಿಲ್ಲಯ್ಯ ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net