ಪಕ್ಷ ಬಯಸಿದರೇ ಲೋಕಸಭೆಗೆ ಸ್ಪರ್ಧೆ

bkt-12-1
ಬಾಗಲಕೋಟೆ ನಗರದ ಬಸವೇಶ್ವರ ಬ್ಯಾಂಕ್ ಪ್ರಧಾನ ಕಚೇರಿಯಲ್ಲಿ ಬ್ಯಾಂಕಿನ ಅಧ್ಯಕ್ಷ ಪ್ರಕಾಶ ತಪಶೆಟ್ಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
Published on

ಬಾಗಲಕೋಟೆ: ನಾನು ಮೂರು ದಶಕಗಳಿಂದ ರಾಜಕೀಯದಲ್ಲಿ ಇದ್ದೇನೆ. ಅನೇಕ ಸಾರಿ ಟೆಕೆಟ್ ಕೇಳಿದ್ದರು ಅವಕಾಶ ನೀಡಿಲ್ಲ. ಈ ಸಾರಿ ಪಕ್ಷದ ವರಿಷ್ಠರು ಬಯಸಿದರೇ ಖಂಡಿತವಾಗಿಯೂ ಬಾಗಲಕೋಟೆ ಲೋಕಸಭಾ ಮತಕ್ಷೇತ್ರಕ್ಕೆ ಸ್ಪರ್ಧೆ ಮಾಡುತ್ತೇನೆ ಎಂದು ಬಸವೇಶ್ವರ ಬ್ಯಾಂಕಿನ ಅಧ್ಯಕ್ಷ ಪ್ರಕಾಶ ತಪಶೆಟ್ಟಿ ಹೇಳಿದರು.

ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜಕೀಯದಲ್ಲಿ ಇದ್ದು ಬಹಳ ವರ್ಷವಾಯಿತು. ಪಕ್ಷದಿಂದ ಟಿಕೆಟ್ ಪಡೆದು ಚುನಾವಣೆಗೆ ನಿಲ್ಲಬೇಕು ಎನ್ನುವ ಕಾರಣಕ್ಕೆ ಸಾಕಷ್ಟು ಸಾರಿ ಪ್ರಯತ್ನ ಮಾಡಿದ್ದೇನೆ. ಅವಕಾಶ ಸಿಕ್ಕರೇ ಸ್ಪರ್ಧೆ ಮಾಡುತ್ತೇನೆ. ಈ ಸರ್ಕಾರ ಅವಧಿಯಲ್ಲಿ ನಿಗಮ ಮಂಡಳಿ ಆಯ್ಕೆ ವಿಷಯದಲ್ಲಿಯೂ ಆಕಾಂಕ್ಷಿಯಾಗಿದ್ದೇನೆ. ಮುಖ್ಯವಾಗಿ ಬಾಗಲಕೋಟೆ ಪಟ್ಟಣ ಅಭಿವೃದ್ಧಿ ಪ್ರಾಽಕಾರದ ಅಧ್ಯಕ್ಷ ಹುದ್ದೆಗೆ ಆಕಾಂಕ್ಷಿಯಾಗಿದ್ದೇನೆ. ಪಕ್ಷದ ವರಿಷ್ಠರು, ನಾಯಕರು ಮನ್ನಣೆ ನೀಡುವ ವಿಶ್ವಾಸವಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net