ಪಂಚಮಸಾಲಿ ಜಗದ್ಗುರು ಆಸ್ಪತ್ರೆಯಿಂದ ಬಿಡುಗಡೆ

bkt-20-4
ಬಾಗಲಕೋಟೆ ನಗರದ ಖಾಸಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿ ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಕೂಡಲಸಂಗಮದತ್ತ ಪ್ರಯಾಣ ಬೆಳೆದರು.
Published on

ಬಾಗಲಕೋಟೆ: ಅನಾರೋಗ್ಯ ಹಿನ್ನಲೆಯಲ್ಲಿ ಇಲ್ಲಿನ ಕೆರೂಡಿ ಆಸ್ಪತ್ರೆಗೆ ದಾಖಲಾಗಿರುವ ಕೂಡಲಸಂಗಮದ ಲಿಂಗಾಯತ ಪಂಚಮಸಾಲಿ ಜಗದ್ಗುರು ಪೀಠದ ಪೀಠಾಽಪತಿ ಶ್ರೀ ಬಸವಜಯ ಮೃತ್ಯುಂಜಯ ಸ್ವಾಮೀಜಿ ಭಾನುವಾರ ಸಂಜೆ ಆಸ್ಪತ್ರೆಯಿಂದ ಬಿಡುಗಡೆಯಾದರು.

ಆರೋಗ್ಯದಲ್ಲಿ ಚೇತರಿಕೆ ಆಗಿದ್ದರಿಂದ ಶ್ರೀಗಳು ಭಕ್ತರೊಂದಿಗೆ ತಮ್ಮ ಕಾರಿನಲ್ಲಿ ಕೂಡಲಸಂಗಮದತ್ತ ಹೊರಟರು. ಈ ಸಂದರ್ಭದಲ್ಲಿ ಮಾತನಾಡಿದ ಬಸವಜಯ ಮೃತ್ಯುಂಜಯ ಸ್ವಾಮೀಜಿ, ಸಂಗಮನಾಥನ ಕೃಪೆ, ಬಸವಣ್ಣನ ಕೃಪೆ, ಸಮಾಜದ ಬಾಂಧವರ ಪ್ರಾರ್ಥನೆಯಿಂದ ಆರೋಗ್ಯ ಸುಧಾರಿಸಿದೆ.್ನ ಎದೆ ನೋವು ಕಾಣಿಸಿಕೊಂಡಿತು, ಬಾಗಲಕೋಟೆ ನಗರದ ವೈದ್ಯರನ್ನ ಸಂಪರ್ಕ ಮಾಡಿದೆವು. ವೈದ್ಯರು ಆಸ್ಪತ್ರೆಗೆ ಬರಲು ಸೂಚಿಸಿದರು. ಹೀಗಾಗಿ ಆಸ್ಪತ್ರೆ ಬಂದಿದ್ದೆ. ಈಗ ವೈದ್ಯರ ಸಲಹೆ ಮೇರೆಗೆ ಬಿಡುಗಡೆಯಾಗಿದ್ದು, ಇಲ್ಲಿಂದ ನೇರವಾಗಿ ಕೂಡಲಸಂಗಮದ ಪೀಠಕ್ಕೆ ತೆರಳಿ ವಿಶ್ರಾಂತಿ ಪಡೆಯುವೆ ಎಂದರು.

ಬೆಳಗ್ಗೆಯಿಂದ ಸಂಜೆ ವರೆಗೂ ವಿಧಾನ ಸಭೆ ವಿರೋಧ ಪಕ್ಷದ ನಾಯಕ ಅರವಿಂದ ಬೆಲ್ಲದ, ಮಾಜಿ ಸಚಿವ ಶಾಸಕ ಸಿ.ಸಿ.ಪಾಟೀಲ, ಸಂಸದ ಪಿ.ಸಿ.ಗದ್ದಿಗೌಡರ, ಮಾಜಿ ಶಾಸಕ ಡಾ.ವೀರಣ್ಣ ಚರಂತಿಮಠ, ವಿ.ಪ ಸದಸ್ಯ ಪಿ.ಎಚ್.ಪೂಜಾರ, ಬಿಜೆಪಿ ಜಿಲ್ಲಾಧ್ಯಕ್ಷ ಶಾಂತಗೌಡ ಪಾಟೀಲ ಸೇರಿದಂತೆ ಬಿಜೆಪಿ ನಾಯಕರು ಪ್ರತ್ಯೇಕವಾಗಿ ಸ್ವಾಮೀಜಿ ಅವರನ್ನು ಭೇಟಿ ಆಗಿ ಆರೋಗ್ಯ ವಿಚಾರಿಸಿದರು. ಮಾಜಿ ಸಚಿವ ಸಿ.ಸಿ.ಪಾಟೀಲ ಶ್ರೀಗಳೊಂದಿಗೆ ಗೌಪ್ಯವಾಗಿ ಮಾತುಕತೆ ನಡೆಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net