ನ್ಯಾಷನಲ್ ಗೇಮ್ ನಲ್ಲಿ ಮಿಂಚಲಿ

bkt-29-2 a
ಬಾಗಲಕೋಟೆ ನಗರದ ಬಸವೇಶ್ವರ ಪ್ರೌಢಶಾಲೆ ಮೈದಾನದಲ್ಲಿ ಭಾನುವಾರ ಮುಕ್ತಾಯಗೊಂಡ ಕಿವುಡರ ರಾಜ್ಯಮಟ್ಟದ ೧೪ನೇ ಕ್ರೀಡಾಕೂಟದಲ್ಲಿ ೧೦೩ ಅಂಕಗಳನ್ನು ಗಳಿಸಿದ ಬೆಂಗಳೂರು ತಂಡ ದ್ವಿತೀಯ ಸ್ಥಾನ ಪಡೆಯಿತು.
Published on

ಬಾಗಲಕೋಟೆ: ರಾಜ್ಯಮಟ್ಟದ ಕ್ರೀಡಾಕೂಟಗಳು ಸಾಮಾನ್ಯ ಮಕ್ಕಳಲ್ಲೂ ಉತ್ಸಾಹ ಮೂಡಿಸಿವೆ ಎಂದು ಉದ್ಯಮಿ ರಾಘವೇಂದ್ರ ಕಂದಕೂರ ಹೇಳಿದರು.
ನಗರದ ಬಸವೇಶ್ವರ ಪ್ರೌಢಶಾಲೆ ಮೈದಾನದಲ್ಲಿ ಭಾನುವಾರ ಮುಕ್ತಾಯಗೊಂಡ ಕಿವುಡರ ರಾಜ್ಯಮಟ್ಟದ ೧೪ನೇ ಕ್ರೀಡಾಕೂಟದಲ್ಲಿ ಮಾತನಾಡಿದರು.

ಇನ್ನರ್‌ವೀಲ್ ಕ್ಲಬ್ ಅಧ್ಯಕ್ಷೆ ಶ್ರೀಲತಾ ಹೆರಂಜಲ್ ಮಾತನಾಡಿ, ಎಲ್ಲ ಜಿಲ್ಲೆಯ ಮಕ್ಕಳು ಅತ್ಯಂತ ಉತ್ಸಾಹದಿಂದ ಆಟಗಳಲ್ಲಿ ಭಾಗವಹಿಸಿ ಕ್ರೀಡಾಮನೋಭಾವ ಮೆರೆದಿದ್ದಾರೆ. ಇಲ್ಲಿ ಗೆದ್ದ ಪ್ರತಿಭೆಗಳು ರಾಷ್ಟ್ರಮಟ್ಟದಲ್ಲೂ ಉತ್ತಮ ಪ್ರದರ್ಶನ ತೋರಿ ರಾಜ್ಯದ ಕೀರ್ತಿ ಬೆಳಗಲಿ ಎಂದು ಹಾರೈಸಿದರು.

ಉದ್ಯಮಿಗಳಾದ ವಿಶ್ವನಾಥ ಗುಳೇದ, ರಾಮಚಂದ್ರ ಚಾವಲಾ, ಕರ್ನಾಟಕ ಕಿವುಡರ ಕ್ರೀಡಾ ಒಕ್ಕೂಟದ ಉಪಾಧ್ಯಕ್ಷ ಕಾಡಪ್ಪ ಗುಡದಿನ್ನಿ ಕ್ರೀಡಾಪಟುಗಳಿಗೆ ಶುಭ ಕೋರಿದರು.

ಇನ್ನರ್‌ವೀಲ್ ಕ್ಲಬ್‌ನ ಸಂಧ್ಯಾ ಮಿಸ್ಕಿನ್, ಸುಮಂಗಲಾ ಹದ್ಲಿ, ವೀಣಾ ವಾಘ, ಜಯಲಕ್ಷ್ಮೀ ಪಾಟೀಲ, ಪೂರ್ಣಿಮಾ ಅಕ್ಕಿಮರಡಿ, ರಮೇಶ ಪಡಸಲಗಿ, ಬಾಗಲಕೋಟೆ ಜಿಲ್ಲಾ ಕಿವುಡರ ಸಂಘದ ಅಧ್ಯಕ್ಷ ಸುನೀಲ ಕಂದಕೂರ, ಕಾಯದರ್ಶಿ ರಾಘವೇಂದ್ರ ಜಾಧವ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net