ನ್ಯಾಯಾಲಯದ ನಿರ್ದೇಶನ ತಿರುಚುವುದು ಸಲ್ಲ

bkt-4-8
ಬಾಗಲಕೋಟೆ ನಗರದ ಪ್ರೆಸ್‌ಕ್ಲಬ್‌ನಲ್ಲಿ ರಾಜ್ಯ ತಳವಾರ ಮಹಾಸಭಾದ ಜಿಲ್ಲಾಧ್ಯಕ್ಷ ಚಿಣ್ಣಪ್ಪ ಎಸ್. ಅಂಬಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಭೀಮಸಿ ತಳವಾರ, ಪ್ರಭು ಗಸ್ತಿ, ಭೀಮಸಿ ಹುನ್ನೂ, ಬಸವರಾಜ ಸೋಮಾಪುರ, ಭೀಮು ದೇಶನೂರ, ಉಮೇಶ ಗಸ್ತಿ ಇತರರು ಇದ್ದರು.
Published on

ಬಾಗಲಕೋಟೆ: ತಳವಾರ ಸಮುದಾಯದ ಮೀಸಲಾತಿ ಕುರಿತಂತೆ ನ್ಯಾಯಾಲಯದ ನಿರ್ದೇಶನ ತಿರುಚಿ ಹೇಳಿಕೆ ನೀಡುತ್ತಿರುವ ಮಾರಪ್ಪ ನಾಯಕ ಹಾಗೂ ಬಾಗಲಕೋಟೆ ಜಿಲ್ಲಾ ವಾಲ್ಮೀಕಿ ಮಹಾಸಭಾ ಅಧ್ಯಕ್ಷ ದ್ಯಾಮಣ್ಣ ಗಾಳಿ ಹಾಗೂ ರಾಜು ನಾಯ್ಕರ್ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ತಳವಾರ ಮಹಾಸಭಾದ ಜಿಲ್ಲಾಧ್ಯಕ್ಷ ಚಿಣ್ಣಪ್ಪ ಎಸ್. ಅಂಬಿ ಆಗ್ರಹಿಸಿದರು.

ನಗರದ ಪ್ರೆಸ್‌ಕ್ಲಬ್‌ನಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿನ ತಳವಾರ ಹಾಗೂ ಪರಿವಾರ ಸಮುದಾಯ ಕಳೆದ ಹತ್ತಾರು ವರ್ಷಗಳಿಂದ ಪರಿ ಶಿಷ್ಟ ಪಂಗಡದ ಮೀಸಲು ಸೌಲಭ್ಯಕ್ಕೆ ಆಗ್ರಹಿಸಿ ಹೋರಾಟ ಮಾಡುತ್ತಾ ಬಂದಿದೆ. ಪರಿಣಾಮವಾಗಿ ಸರ್ಕಾರ ಈ ಎರಡು ಸಮುದಾಯಗಳ ಕುಲಶಾಸ್ತ್ರಿ ಅಧ್ಯಯನ ನಡೆಸಿದ ಬಳಿಕವೇ ಪರಿಶಿಷ್ಟ ಪಂಗಡ ವರ್ಗಕ್ಕೆ ಸೇರ್ಪಡೆ ಮಾಡಿದೆ. ಹಾಗಾಗಿ ತಳವಾರ ಸಮುದಾಯದವರು ನ್ಯಾಯೋಚಿತವಾಗಿ ಹಾಗೂ ಸಂವಿಧಾನ ಬದ್ದವಾಗಿ ಮೀಸಲು ಸೌಲಭ್ಯ ಪಡೆದುಕೊ ಳ್ಳುತ್ತಿದ್ದಾರೆ ಎಂದರು.

ವಾಲ್ಮೀಕಿ ಸಮುದಾಯದ ಮುಖಂಡರು ಅನಗತ್ಯವಾಗಿ ತಳವಾರ ಸಮುದಾಯದ ಮೀಸಲು ವಿಷಯದಲ್ಲಿ ಗೊಂದಲ ಮೂಡಿ ಸುತ್ತಿದ್ದಾರೆ. ಅಽಕಾರಿಗಳ ದಾರಿ ತಪ್ಪ್ಪಿಸುತ್ತಿದ್ದಾರೆ. ಅಽಕಾರಿಗಳು ಸಂವಿಧಾನದ ಪ್ರಕಾರ ಯಾರು ಅರ್ಹರರು ಇದ್ದಾರೋ ಅವರಿಗೆ ಜಾತಿ ಪ್ರಮಾಣ ಪತ್ರ ನೀಡುತ್ತಿದ್ದಾರೆ. ಇಂತಹ ಸನ್ನಿವೇಶದಲ್ಲಿ ಅನವಶ್ಯಕವಾಗಿ ತಳವಾರ ಸಮುದಾಯದ ಬಗ್ಗೆ ಮಾತನಾಡುವುದು ಸರಿಯಲ್ಲ ಎಂದ ಅವರು, ತಳವಾರ ಸಮುದಾಯ ರಾಜ್ಯದ ಬಹುತೇಕ ಎಲ್ಲ ಕಡೆಗಳಲ್ಲಿ ಇದ್ದು, ಈ ಸಮುದಾಯ ಮೊದಲ ಪ್ರವರ್ಗ-೧ ರಲ್ಲಿ ಇತ್ತು. ಹೋರಾಟದ ಬಳಿಕ ಪರಿಶಿಷ್ಟ ಪಂಗಡ ವರ್ಗಕ್ಕೆ ಸೇರ್ಪಡೆಯಾಗಿದೆ. ಹಾಗಾಗಿ ಮೊದಲಿನ ಜಾತಿ ಪ್ರಮಾಣ ಪತ್ರದಲ್ಲಿ ಹಿಂದು ತಳವಾರ ಇದೆ ಎಂದು ವಿವರಿಸಿದರು.

ವಾಲ್ಮೀಕಿ, ನಾಯಕ, ತಳವಾರ ಸಮುದಾಯದವರು ಸಹೋದರರಂತೆ ಜೀವನ ನಡೆಸುತ್ತಿದ್ದಾರೆ. ಅನಗತ್ಯ ಹೇಳಿಕೆಗಳನ್ನು ನೀಡುವ ಮೂಲಕ ಗೊಂದಲ ಸೃಷ್ಠಿಸಿ ಹುಳಿ ಹಿಂಡುವ ಕೆಲಸ ಮಾಡಬೇಡಿ ಎಂದು ಮನವಿ ಮಾಡಿದ ಅವರು, ನಿಜ ತಳವಾರ ಅವರನ್ನು ಹೊರತು ಪಡಿಸಿ ಇತರೆ ಸಮುದಾಯದವರಿಗೆ ತಳವಾರ ಎಂದು ಗುರುತಿಸಿ ಪರಿಶಿಷ್ಟ ಪಂಗಡದ ಜಾತಿ ಪ್ರಮಾಣ ಪತ್ರ ನೀಡುವುದನ್ನು ನಾವು ವಿರೋಧಿಸುತ್ತೇವೆ ಅಂತಹ ಪ್ರಸಂಗಗಳು ಕಂಡು ಬಂದಲ್ಲಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಮುಖಂಡರಾದ ಭೀಮಸಿ ತಳವಾರ, ಪ್ರಭು ಗಸ್ತಿ, ಭೀಮಸಿ ಹುನ್ನೂ, ಬಸವರಾಜ ಸೋಮಾಪುರ, ಭೀಮು ದೇಶನೂರ, ಉಮೇಶ ಗಸ್ತಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net