ನ್ಯಾಯ ಕೊಡಲು ನಿರ್ಲಕ್ಷ್ಯ ಧೋರಣೆ ಏಕೆ..!

bkt-16-5 a
ಕೃಷ್ಣಾ ಮೇಲ್ದಂಡೆ ಯೋಜನೆ ಬಾಽತ ಸಂತ್ರಸ್ತರ ಹೋರಾಟ ಸಮಿತಿಗೆ ಬಾಗಲಕೋಟೆ ತಾಲೂಕಿನ ಗೋವಿಂದಕೊಪ್ಪ ಗ್ರಾಮದ ಸಂತ್ರಸ್ತರು ೫೦ ಸಾವಿರ ರೂ.ದೇಣಿಗೆ ನೀಡಿದರು
Published on

ಬಾಗಲಕೋಟೆ: ಕೃಷ್ಣಾ ಮೇಲ್ದಂಡೆ ವಿಚಾರದಲ್ಲಿ ಎಲ್ಲ ಸರ್ಕಾರಗಳು ನಿರ್ಲಕ್ಷ್ಯ ಧೋರಣೆ ವಹಿಸಿವೆ. ದಶಕಗಳು ಕಳೆದರು ಯುಕೆಪಿ ಪೂರ್ಣಗೊಳ್ಳುತ್ತಿಲ್ಲ. ಹೀಗೆ ಆದರೇ ತ್ಯಾಗ ಜೀವಿಗಳಿಗೆ ನ್ಯಾಯ ದೊರೆಯುವದಿಲ್ಲ. ನ್ಯಾಯ ಕೊಡಲು ನಿರ್ಲಕ್ಷ್ಯ ಧೋರಣೆ ಏಕೇ..?

ಬಾಗಲಕೋಟೆ ನಗರದ ಡಿಸಿ ಕಚೇರಿ ಎದುರು ಕೃಷ್ಣಾ ಮೇಲ್ದಂಡೆ ಯೋಜನೆ ಬಾಽತ ಸಂತ್ರಸ್ತರು ಹಮ್ಮಿಕೊಂಡಿರುವ ಹೋರಾಟದಲ್ಲಿ ಸೋಮವಾರ ಭಾಗವಹಿಸಿದ ವಿವಿಧ ಸಂಘಟನೆ, ಸಂಘ, ಸಂಸ್ಥೆಗಳ ಮುಖಂಡರು ಆಕ್ರೋಶ ವ್ಯಕ್ತಪಡಿಸಿದರು.

ಮುಳಗಡೆ ಎಂದಾಕ್ಷಣ ಪರಿಹಾರ ಬಂದು ರೈತರು ಶ್ರೀಮಂತರಾಗುತ್ತಾರೆ ಭಾವನೆ ಇದೆ. ಇದು ಸರಿಯಲ್ಲ. ಕಳೆದುಕೊಳ್ಳುವ ಸಂಗತಿಗಳೇ ಜಾಸ್ತಿ ಇದೆ. ಅದನ್ನು ಸರ್ಕಾರಗಳು ಅರ್ಥ ಮಾಡಿಕೊಳ್ಳಬೇಕು. ನೀರಾವರಿ ಕ್ಷೇತ್ರ ಹೆಚ್ಚಳದಿಂದ ಸರ್ಕಾರಕ್ಕೆ ಆದಾಯ ಹೆಚ್ಚಳವಾಗುತ್ತದೆ. ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಬೆಳವಣಿಗೆ ಆಗುತ್ತದೆ ಎಂದು ಹೇಳಿದರು.

ರಸಗೊಬ್ಬರಗಳ ಮಾರಾಟಗಾರರ ಸಂಘ, ಮುಧೋಳ-ಲೋಕಾಪುರ ಟ್ಯಾಕ್ಸಿ ಚಾಲಕರ ಸಂಘದ ಪದಾಽಕಾರಿಗಳು, ಬೆಳಗಾವಿ ಜಿಲ್ಲೆಯ ಅಥಣಿ, ಜಿಲ್ಲೆಯ ಜಮಖಂಡಿ ತಾಲೂಕಿನ ನೂರಾರು ಸಂತ್ರಸ್ತರು ಭಾಗವಹಿಸಿ ಬೆಂಬಲ ವ್ಯಕ್ತಪಡಿಸಿದರು.

ಮಾಜಿ ಶಾಸಕರಾದ ಆನಂದ ನ್ಯಾಮಗೌಡ, ಶ್ರೀಕಾಂತ ಕುಲಕರ್ಣಿ, ಸಂತೋಷ ಬಗಲಿದೇಸಾಯಿ, ಸುಶೀಲಕುಮಾರ ಬೆಳಗಲಿ ಸೇರಿದಂತೆ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net