ನ್ಯಾಯ ಒದಗಿಸುವುದೇ ಧ್ಯೇಯ

5 hbd 01
Published on

ಹುಮನಾಬಾದ್: ಜನರ ಧ್ವನಿ ಸಂಘಟನೆಯು ಶೋಷಿತರ ಹಾಗೂ ಅನ್ಯಾಯಕ್ಕೆ ಒಳಗಾದವರಿಗೆ ನ್ಯಾಯ ಒದಗಿಸುವ ಕೆಲಸ ಮಾಡಬೇಕು ಎಂದು ಅಧ್ಯಕ್ಷ ಅಂಕುಶ ಗೋಖಲೆ ಹೇಳಿದರು.

ಪಟ್ಟಣದಲ್ಲಿ ಭಾನುವಾರ ಜನರ ಧ್ವನಿ ಸಂಘಟನೆಯ ತಾಲೂಕು ಸಮಿತಿ ಪದಾಧಿಕಾರಿಗಳ ಆಯ್ಕೆ ಸಭೆಯಲ್ಲಿ ಮಾತನಾಡಿ, ಸಾಮಾಜಿಕ ಸಂಘಟನೆಯ ಹೋರಾಟದ ಜತೆಗೆ ಭವಿಷ್ಯದಲ್ಲಿ ರಾಜಕೀಯ ಅಧಿಕಾರ ಮಾಡುವತ್ತ ದೂರದೃಷ್ಟಿ ಇರಬೇಕು. ಈ ನಿಟ್ಟಿನಲ್ಲಿ ಸಂಘಟನೆ ಬಲ ಪಡಿಸಬೇಕು ಎಂದರು.

ಜಿಲ್ಲಾಧ್ಯಕ್ಷ ರಾಜಕುಮಾರ ಸಿಂಧೆ ಮಾಡನಾಡಿ, ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿ ಸಮಿತಿಗಳನ್ನು ರಚಿಸಲಾಗುತ್ತಿದೆ. ಸಂವಿಧಾನದ ಆಶಯದಂತೆ ಸರ್ವರಿಗೂ ಸಮಬಾಳು ಸರ್ವರಿಗೂ ಸಮಪಾಲು ಜಾರಿಗೆ ಬರಲು ಸಂಘಟನೆ ಹೋರಾಡಲಿದೆ. ಎಲ್ಲ ಸಮುದಾಯದವರಿಗೆ ಅನ್ಯಾಯವಾದರೆ ನ್ಯಾಯ ಒದಗಿಸಿಕೊಡುವ ಕೆಲಸ ಮಾಡಲಾಗುವುದು ಎಂದರು.

ಮುಖಂಡ ತಿಪ್ಪಣ್ಣ ವಾಲಿ, ಜಿಲ್ಲಾ ಉಪಾಧ್ಯಕ್ಷ ಆರವಿಂದ ಮಾಶೆಟ್ಟಿ, ಮುಖಂಡರಾದ ದತ್ತಪ್ಪ ವರವಟ್ಟಿ, ಪ್ರಮುಖರಾದ ಮಾರುತಿ ಕಾಂಬಳೆ, ಭರತ ಮೋಳಕೇರಿ, ಗೌತಮ ಉಡಬಾಳ, ತುಕಾರಾಮ ತ್ಯಾಗಿ ಇತರರಿದ್ದರು.

ತಾಲೂಕು ಪದಾಧಿಕಾರಿಗಳು: ಶಿವರಾಜ ಮೋಳಕೇರಿ (ಅಧ್ಯಕ್ಷ), ಪ್ರಭು (ಪ್ರಧಾನ ಕಾರ್ಯದರ್ಶಿ), ಅಶೋಕ ಪಾಂಡೆ (ಖಜಾಂಚಿ), ಸಂದೀಪ, ಸುನೀಲ (ಕಾರ್ಯದರ್ಶಿ) ಅವರನ್ನು ಆಯ್ಕೆ ಮಾಡಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net