

ಕಾರವಾರ: ಇಲ್ಲಿನ ಸೀಬರ್ಡ್ ನೌಕಾ ಯೋಜನೆಯ ಕದಂಬ ನೌಕಾನೆಲೆಯಲ್ಲಿ ಸೆಟಲೈಟ್ ಆಧಾರಿದ ಸಂಪರ್ಕ ವ್ಯವಸ್ಥೆಯನ್ನು ಆರಂಭಿಸಲಾಗಿದೆ.
ನೇವಲ್ ಕಮ್ಯುನಿಕೇಶನ್ ನೆಟ್ವರ್ಕ್ (ಎನ್.ಸಿ.ಎನ್.) ಹೆಸರಿನ ಈ ವ್ಯವಸ್ಥೆಯ ಮೂಲಕ ಹೈ ರೆಸಲ್ಯೂಶನ್ ವಿಡಿಯೋ ಹಾಗೂ ಆಡಿಯೋ ಕಾಲ್ ಮಾಡಬಹುದು. ಈಗಾಗಲೇ ನವದೆಹಲಿ, ಕೊಚ್ಚಿಯಲ್ಲಿ ಈ ವ್ಯವಸ್ಥೆ ಇದೆ.
ಎನ್.ಸಿ.ಎನ್. ವ್ಯವಸ್ಥೆಯನ್ನು ಪಶ್ಚಿಮ ನೌಕಾ ಪ್ರದೇಶದ ಮುಖ್ಯಸ್ಥ ವೈಸ್ ಅಡ್ಮಿರಲ್ ಅಜೇಂದ್ರ ಬಹಾದ್ದೂರ್ ಸಿಂಗ್ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಅವರು ಕಾರವಾರದಲ್ಲಿರುವ ಯುದ್ಧ ನೌಕೆ ಹಾಗೂ ಜಲಾಂತರ್ಗಾಮಿಗಳ ಕಾರ್ಯನಿರ್ವಹಣೆಯ ಬಗ್ಗೆ ಮಾಹಿತಿ ಪಡೆದರು. ಸೀಬರ್ಡ್ ನೌಕಾ ಯೋಜನೆಯ ಎರಡನೇ ಹಂತದ ಕಾಮಗಾರಿ ಪರಿಶೀಲಿಸಿದರು. ಕರ್ನಾಟಕ ನೌಕಾ ವಲಯ ಮುಖ್ಯಸ್ಥ ರಿಯರ್ ಅಡ್ಮಿರಲ್ ಅತುಲ್ ಆನಂದ್ ಇದ್ದರು.