ನೌಕರಿ ನೀಡಿ ಇಲ್ಲವೇ ದಯಾ ಮರಣ ನೀಡಿ

bkt-20-3
ವಿಜಯಲಕ್ಷಿ÷್ಮÃ ಸರೂರ
Published on

ಬಾಗಲಕೋಟೆ: ಉಚ್ಛ ನ್ಯಾಯಾಲವು ನಿರ್ದೇನದಂತೆ ನನ್ನ ಮರಳಿ ನೌಕರಿಗೆ ತೆಗೆದುಕೊಳ್ಳಬೇಕು. ಇಲ್ಲವೇ ದಯಾಮರಣಕ್ಕೆ ಅವಕಾಶ ನೀಡಬೇಕು ಎಂದು ಜಿಲ್ಲಾ ಆಯುಷ್ ಆಸ್ಪತ್ರೆ ಗುತ್ತಿಗೆ ಸಿಬ್ಬಂದಿ ವಿಜಯಲಕ್ಷಿ÷್ಮÃ ಸರೂರ ಮನವಿ ಮಾಡಿದ್ದಾರೆ.

ನಗರದ ಪ್ರೆಸ್‌ಕ್ಲಬ್‌ನಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹುನಗುಂದದಲ್ಲಿ ಸ್ತಿçÃರೋಗ ಅಟೆಂಡರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ನಾನು, ೨೦೨೩ರ ವಿಧಾನಸಭಾ ಚುನಾವಣೆಯಲ್ಲಿ ಬಾಗಲಕೋಟೆ ಹಾಗೂ ಬೀಳಗಿ ವಿಧಾನಸಭಾ ಕ್ಷೇತ್ರದಿಂದ ಸ್ಪಽðಸುವ ಬಗ್ಗೆ ಹೇಳಿಕೆ ನೀಡಿದ್ದೆ. ಅದನ್ನು ಗಮನಿಸಿ ಅಂದಿನ ಜಿಲ್ಲಾಽಕಾರಿಗಳು ನನ್ನನ್ನು ಕೆಲಸದಿಂದ ವಜಾಗೊಳಿಸಿದ್ದರು. ಅದನ್ನು ಪ್ರಶ್ನಿಸಿ ನ್ಯಾಯಾಲಯಕ್ಕೆ ತೆರಳಿದ್ದೆ ಈಗ ನ್ಯಾಯಾಲಯದಲ್ಲಿ ನನ್ನನ್ನು ಕೆಲಸಕ್ಕೆ ಸೇರ್ಪಡೆ ಮಾಡಿಕೊಳ್ಳುವಂತೆ ಆದೇಶ ಮಾಡುವುದರೊಂದಿಗೆ ಬಾಕಿ ಶೇ.೫೦ ವೇತನ ಪಾವತಿಗೆ ನ್ಯಾಯಾಲಯ ಸೂಚಿಸಿದೆ.

ಉದ್ಯೋಗದಲ್ಲಿರಿಸಿಕೊಂಡೆ ಬೇಕಿದ್ದರೆ ಸರ್ಕಾರ ನನ್ನ ಮೇಲೆ ತನಿಖೆ ಕೈಗೊಳ್ಳಬಹುದು ಎಂದು ಸೂಚಿಸಿ ೨೦೨೫ ಜನವರಿ ತಿಂಗಳಲ್ಲೇ ನ್ಯಾಯಾಲಯ ಆದೇಶ ಹೊರಡಿಸಿದೆ. ಆದರೆ ಆದೇಶ ಪಾಲನೆಗೆ ಜಿಲ್ಲಾಽಕಾರಿಗಳು, ಜಿಲ್ಲಾ ಆಯುಷ್ ಅಽಕಾರಿಗಳು ಹಿಂದೇಟು ಹಾಕುತ್ತಿದ್ದಾರೆ. ಒಂದು ವಾರದೊಳಗಾಗಿ ನೌಕರಿಗೆ ಸೇರ್ಪಡೆ ಮಾಡಿಸಿಕೊಳ್ಳದಿದ್ದರೆ ಧರಣಿ ಕೂರುವೆ. ಜಿಲ್ಲಾಽಕಾರಿಗಳ ಮುಖಾಂತರ ರಾಷ್ಟçಪತಿಗಳಿಗೆ ದಯಾಮರಣಕ್ಕಾಗಿ ಅರ್ಜಿ ಸಲ್ಲಿಸಿರುವೆ ಎಂದು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net