ನೌಕರರ ಹಿತ ರಕ್ಷಣೆಗೆ ಸದಾಕಾಲ ಸಂಘ ಬದ್ಧ

bkt-8-7
ಬಾಗಲಕೋಟೆ ನಗರದ ಬಿವಿವಿ ಸಂಘದ ಆಡಳಿತ ಕಚೇರಿಯಲ್ಲಿ ಶುಕ್ರವಾರ ಸಂಘದ ಕಾರ್ಯಾಧ್ಯಕ್ಷ ವೀರಣ್ಣ ಚರಂತಿಮಠ ಭಾರತ ಸರ್ಕಾರ ಕಾರ್ಮಿಕ ಹಾಗೂ ಉದ್ಯೋಗ ಇಲಾಖೆಯ ನೌಕರರ ಭವಿಷ್ಯ ನಿಽಯಿಂದ ಪಿಂಚಣಿ ಪತ್ರವನ್ನು ಭಾರತಿ ಮಠ ಕುಟುಂಬಕ್ಕೆ ನೀಡಿದರು. ಸಂಘದ ಗೌರವ ಕಾರ್ಯದರ್ಶಿ ಮಹೇಶ ಅಥಣಿ, ಸಂಘದ ಆಡಳಿತಾಽಕಾರಿ ವಿ.ಆರ್.ಶಿರೋಳ, ಬಿ.ವಿ.ವಿ.ಸಂಘದ ನೌಕರರ ಕ್ಷೇಮಾಭಿವೃದ್ಧಿ ಅಽಕಾರಿ ಎಚ್.ಎನ್.ಯಾದವಾಡ ಇದ್ದರು.
Published on

ಬಾಗಲಕೋಟೆ: ಬಿವಿವಿ ಸಂಘದವು ತನ್ನ ಸಿಬ್ಬಂದಿಗಳ ಹಿತ ರಕ್ಷಣೆಗೆ ಜೊತೆಗೆ ಕ್ಷೇಮಾಭಿವೃದ್ಧಿಗೆ ಶ್ರಮಿಸುತ್ತಿದೆ. ಬದ್ಧತೆಯಿಂದ ಕೆಲಸ ಮಾಡುತ್ತಿದೆ ಎಂದು ಬಿವಿವಿ ಸಂಘದ ಕಾರ್ಯಾಧ್ಯಕ್ಷ ವೀರಣ್ಣ ಚರಂತಿಮಠ ಹೇಳಿದರು.

ನಗರದ ಬಿವಿವಿ ಸಂಘದ ಆಡಳಿತ ಕಚೇರಿಯಲ್ಲಿ ಶುಕ್ರವಾರ ಭಾರತಿ ಮಠ ಅವರಿಗೆ ಪಿಂಚಣಿ ಹಣದ ಚಕ್ ನೀಡಿ ಅವರು ಮಾತನಾಡಿದರು.

ಸಂಘದಲ್ಲಿ ಸೇವೆ ಸಲ್ಲಿಸಿದ ಹಾಗೂ ಸಲ್ಲಿಸುತ್ತಿರುವ ನೌಕರರಿಗೆ ಸದಾಕಾಲ ಬೆನ್ನೆಲುಬಾಗಿ ನಿಲ್ಲುವುದರ ಜೊತೆಗೆ ಅವರ ಹಿತರಕ್ಷಣೆ ಹಾಗೂ ಅವರ ಕ್ಷೇಮಾಭಿವೃದ್ಧಿಗೆ ಸದಾಕಾಲ ಸಂಘ ಶ್ರಮಿಸುತ್ತಿದೆ ಎಂದರು.

ಈ ಸಂದರ್ಭದಲ್ಲಿ ಸಂಘದ ಗೌರವ ಕಾರ್ಯದರ್ಶಿ ಮಹೇಶ ಅಥಣಿ, ಸಂಘದ ಆಡಳಿತಾಽಕಾರಿ ವಿ.ಆರ್.ಶಿರೋಳ, ಬಿ.ವಿ.ವಿ.ಸಂಘದ ನೌಕರರ ಕ್ಷೇಮಾಭಿವೃದ್ಧಿ ಅಽಕಾರಿ ಎಚ್.ಎನ್.ಯಾದವಾಡ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net