

ಬಾಗಲಕೋಟೆ: ಸಂಘದಲ್ಲಿ ಕಾರ್ಯ ನಿರ್ವಹಿಸುತ್ತಿರುವ ನೌಕರರು, ಕೆಲಸಗಾರರ ಸೇವೆ ಜೊತೆಗೆ ಅವರ ಕುಟುಂಬ ಭದ್ರತೆಯು ನಮಗೆ ಅಷ್ಟೆ ಮುಖ್ಯ ಎಂದು ಮಾಜಿ ಶಾಸಕ, ಬಿವಿವಿ ಸಂಘದ ಕಾರ್ಯಾಧ್ಯಕ್ಷ ಡಾ.ವೀರಣ್ಣ ಚರಂತಿಮಠ ಹೇಳಿದರು.
ನಗರದ ಬವಿವಿ ಸಂಘದ ಬಸವೇಶ್ವರ ವೀರಶೈವ ವಿದ್ಯಾವರ್ಧಕ ಸಂಘದ ಕಚೇರಿಯಲ್ಲಿ ಸೋಮವಾರ ಭಾರತ ಕಾರ್ಮಿಕ ಹಾಗೂ ಉದ್ಯೋಗ ಮಂತ್ರಾಲಯದ ಸಮಾಜಿಕ ಸುರಕ್ಷೇಯ ಇಎಸ್‌ಐ ಇಲಾಖೆಯಿಂದ ಫಲಾನುಭವಿ ಕುಟುಂಬಕ್ಕೆ ಪಿಂಚಣಿಯ ಮೊದಲ ಚೆಕ್ ವಿತರಿಸಿ ಮಾತನಾಡಿದರು.
ಸಂಘದಲ್ಲಿ ಕಾರ್ಯನಿರ್ವಯಿಸುತ್ತಿರುವ ಎಲ್ಲ ನೌಕರರ ಹಾಗೂ ಕೆಲಸಗಾರರ ಸೇವೆಯ ಜೊತೆಗೆ ಅವರಿಗೆ ಸಿಗಬೇಕಾದ ಸರ್ಕಾರದ ಸೌಲಭ್ಯಗಳನ್ನು ಒದಗಿಸುವ ಕಾರ್ಯ ಮೊದಲನಿಂದಲೂ ಜಾರಿಯಲ್ಲಿವೆ. ಆಕಸ್ಮಿಕ ಹಾಗೂ ಅಪಘಾತದಲ್ಲಿ ಮೃತ ಪಟ್ಟ ನೌಕರರ ಕುಟುಂಬಗಳಿಗೆ ಸರ್ಕಾರದ ಸೌಲಭ್ಯ ದೊರಕಿಸಿ ಕೊಡುವುದು ಅಲ್ಲದೆ ಸಂಘದಿಂದಲೂ ಸಹಾಯ ಮಾಡಿದ ಸಾಕಷ್ಟು ಉದಾರಣೆಗಳಿವೆ ಎಂದರು.
ಈ ಸಂದರ್ಭದಲ್ಲಿ ಭಾರತ ಸರ್ಕಾರ ಕಾರ್ಮಿಕ ಹಾಗೂ ಉದ್ಯೋಗ (ಇಎಸ್‌ಐ)ಇಲಾಖೆಯ ಪ್ರಭಂದಕರಾದ ಮಂಜುನಾಥ ಬಡಿಗೇರ, ಸಂಘದ ಆಡಳಿತಾಧಿಕಾರಿ ವಿ..ಆರ್ ಶಿರೋಳ, ಬಿವಿವಿ ಸಂಘದ ಆಯುರ್ವೇದ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ಮಹಾಂತೇಶ ಸಾಲಿಮಠ, ಬಿವಿವಿ ಸಂಘದ ನೌಕರರ ಕ್ಷೇಮಾಭಿವೃದ್ಧಿ ಅಧಿಕಾರಿ ಎಚ್.ಎಚ್.ಯಾದವಾಡ ಸೇರಿದಂತೆ ಇತರರು ಇದ್ದರು.