ನೌಕರರ ಅರ್ಜಿಗಳು ನಾಪತ್ತೆ

oppo_2
oppo_2
Published on

ಕಲಬುರಗಿ: ಜಿಲ್ಲೆಯ ಸಮಾಜ ಕಲ್ಯಾಣ ಇಲಾಖೆಯ ವಸತಿ ನಿಲಯಗಳ ಹೊರಗುತ್ತಿಗೆ ನೌಕರರಿಗೆ ವೇತನ ಪಾವತಿಯಲ್ಲಿ ನಡೆಯುತ್ತಿರುವ ಅವ್ಯವಹಾರದ ಕುರಿತು ೨೦೨೨ರಲ್ಲಿ ೧೦೦ ಕಾರ್ಮಿಕರು ಸಲ್ಲಿಸಿದ ಅರ್ಜಿಗಳು ನಾಪತ್ತೆಯಾಗಿವೆ ಎಂದು ಸರ್ಕಾರಿ ಹಾಸ್ಟೆಲ್ ಮತ್ತು ವಸತಿ ಶಾಲೆ ಹೊರಗುತ್ತಿಗೆ ನೌಕರರ ಸಂಘದ ಜಿಲ್ಲಾಧ್ಯಕ್ಷ ಭೀಮಶೆಟ್ಟಿ ಯಂಪಳ್ಳಿ ಆರೋಪಿಸಿದರು.
ವೇತನ ಸರಿಯಾಗಿ ಬಂದಿಲ್ಲ ಎಂದು ೨೦೨೪ರಲ್ಲೂ ೨೦೦ ನೌಕರರು ಬ್ಯಾಂಕ್ ಸ್ಟೇಟ್ಮೆಂಟ್ ಸಮೇತ ಸಲ್ಲಿಸಿದ ದೂರು ಅರ್ಜಿಗಳನ್ನೂ ಸಹ ನಾಪತ್ತೆ ಮಾಡಲಾಗಿದೆ. ಪ್ರಶ್ನಿಸಿದರೆ ಬೇರೆ ಕಚೇರಿಗಳಿಗೆ ಪರಿಶೀಲನೆಗೆ ಕಳುಹಿಸಲಾಗಿದೆ ಎಂದು ಸುಳ್ಳು ಹೇಳುತ್ತಿದ್ದಾರೆ. ಈ ಕುರಿತು ತನಿಖೆ ನಡೆಸಿ, ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.
ಹೊರಗುತ್ತಿಗೆ ನೌಕರರಿಗೆ ಮ್ಯಾನ್ ಪವರ್ ಏಜೆನ್ಸಿಯೂ ಪೂರ್ಣ ವೇತನ ನೀಡದೆ ಬೇಕಾಬಿಟ್ಟಿಯಾಗಿ ಬಾಕಿ ಉಳಿಸಿಕೊಂಡಿದೆ. ೨೦೨೨ರ ಲೆಕ್ಕವನ್ನು ನೀಡಿದ್ದರ ಪ್ರಕಾರ ೩೫.೯೮ ಲಕ್ಷ ನೀಡಬೇಕಿದ್ದ ವೇತನದಲ್ಲಿ ೬.೫೬ ಲಕ್ಷ ರೂ. ಬಾಕಿ ಉಳಿಸಿಕೊಂಡಿದ್ದಾರೆ. ೨೦೨೨ರ ನಂತರ ಇದುವರೆಗೆ ನಿರಂತರವಾಗಿ ವೇತನದಲ್ಲಿ ಕಡಿತ ಮಾಡಿಯೇ ನೀಡುತ್ತಿದ್ದು, ಪೂರ್ಣ ವೇತನ ನೀಡಬೇಕು ಎಂದು ಆಗ್ರಹಿಸಿದರು.
ಕಾಶಿನಾಥ ಬಂಡಿ, ಮೇಘರಾಜ ಕಠಾರೆ, ಜ್ಯೋತಿ ದೊಡ್ಡಮನಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net