

ಬಾಗಲಕೋಟೆ: ಖಾಸಗಿ ಶಾಲೆಗಳಿಗೆ ಹೋಲಿಕೆ ಮಾಡಿದರೇ ಸರ್ಕಾರಿ ಶಾಲೆಗಳು ಪರಿಸ್ಥಿತಿ ದೇವರೆ ಬಲ್ಲ. ಮಳೆ, ಬಿಸಿಲು ಏನೇ ಇದ್ದರು ಸರ್ಕಾರಿ ಶಾಲೆಗಳ ಸ್ಥಿತಿ ಅಯೋಮಯ. ಆದರೇ ಇಲ್ಲೊಬ್ಬ ಕವಿ, ನಾಟಕಕಾರ ಸರ್ಕಾರಿ ಶಾಲೆಯ ದಿಕ್ಕು ಬದಲಿಸಿದ್ದಾರೆ. ಖಾಸಗಿ ಶಾಲೆಗಳು ನಾಚಿಸುವಂತೆ ಶಾಲೆಯ ಮೆರಗು ಹೆಚ್ಚಿಸುವ ಮೂಲಕ ಮೆಚ್ಚುಗೆಗೆ ಪಾತ್ರರಾಗಿದಾರೆ.
ಬಾಗಲಕೋಟೆ ತಾಲೂಕಿನ ಶಿಗಿಕೇರಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹೊಸ ಸ್ಪರ್ಶ ಸಿಕ್ಕಿದೆ. ನವ ವಧುವಿನಂತೆ ಶೃಂಗಾರಗೊಂಡಿದೆ. ಮಕ್ಕಳು, ಪಾಲಕರ ಗಮನ ಸೆಳೆಯುತ್ತಿದ್ದು, ಇದೇ ಗ್ರಾಮದ ಕವಿ, ನಾಟಕಗಾರ ಎಚ್.ಎಚ್.ಶೇಬನ್ನವರ ತಮ್ಮ ೪೩ನೇ ಜನುಮ ಹಿನ್ನಲೆಯಲ್ಲಿ ಮಾಡಿದ ಸೇವಾ ಕಾರ್ಯಕ್ಕೆ ಗ್ರಾಮವೇ ಸಂತಸಗೊಂಡಿದೆ. ಕವಿ ತಾವು ಮಾಡಿದ ಸೇವಾ ಕಾರ್ಯ ಹೇಳಿಕೊಂಡಿಲ್ಲ. ನವೀಕರಣಗೊಂಡ ಸರ್ಕಾರಿ ಶಾಲೆ ಹಸ್ತಾಂತರ ಕಾರ್ಯಕ್ರಮದಲ್ಲಿಯೂ ಭಾಗವಹಿಸಿಲ್ಲ. ಸೇವಾಗುಣದಿಂದಲೇ ಇತರರಿಗೆ ಮಾದರಿಯಾಗಿದ್ದಾರೆ.
ಬದಲಾದ ಶಾಲೆಯ ವಾತಾವರಣ:
ಗ್ರಾಮೀಣ ಪ್ರದೇಶದ ಶಾಲೆಗಳು ಒಂದಿಲ್ಲೊಂದು ಸಮಸ್ಯೆಗಳ ಸುಳಿಗೆ ಸಿಲುಕಿ ಒದ್ದಾಡುತ್ತೀವೆ. ಸರ್ಕಾರದ ಅನುದಾನ ಖರ್ಚು ಮಾಡಿದರೇ ಶಾಲೆಗಳ ಸುಧಾರಣೆ ಕನಸಿನ ಮಾತಾಗಿ ಉಳಿದಿದೆ. ಆದರೇ ಕವಿ ಎಚ್.ಎನ್.ಶೇಬನ್ನವರ ತಮ್ಮ ವೈಯಕ್ತಿ ೫ ಲಕ್ಷ ರೂ. ಖರ್ಚು ಮಾಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಅನೇಕ ಬದಲಾವಣೆ ತಂದಿದ್ದಾರೆ. ಈ ಶಾಲೆಯ ಸುತ್ತಮುತ್ತಲೀನ ಆವರಣ ಗಲೀಜು ತುಂಬಿಕೊಂಡಿತ್ತು. ಗಬ್ಬೆದ್ದ ವಾತಾವರಣದಲ್ಲಿಯೇ ಮಕ್ಕಳು ಓದುವಂತಾಗಿತ್ತು. ಅಲ್ಲದೆ ಶಾಲೆಯ ವಾತಾವರಣದಲ್ಲಿರುವ ಕೊಕಟನೂರ ಯಲ್ಲಮ್ಮದೇವಿ ದೇವಸ್ಥಾನ ಸುತ್ತಲು ಕಸ ತುಂಬಿಕೊಂಡಿತ್ತು. ೧೫ ಟ್ಯಾಕ್ಟರ್ ನಷ್ಟು ಕಸದ ರಾಶಿ ತೆಗೆದು ಹಾಕಿದ್ದಾರೆ. ಅಲ್ಲದೆ ಶಾಲೆಯ ಸುತ್ತಲು ಹೊಸದಾಗಿ ಕಪೌಂಡ್ ನಿರ್ಮಿಸಿದ್ದಾರೆ. ದೇವಸ್ಥಾನಕ್ಕೂ ಹೊಸದಾಗಿ ಛತ್ರ ನಿರ್ಮಿಸಿದ್ದಾರೆ. ಶಾಲೆಯ ಮುಖ್ಯದ್ವಾರ ಸೇರಿದಂತೆ ವಿವಿಧ ಭಾಗದಲ್ಲಿ ಸುಣ್ಣ-ಬಣ್ಣ ಬಳೆದಿದ್ದಾರೆ.
ದಾರ್ಶನಿಕರ ಭಾವಚಿತ್ರ
ಶಾಲೆಯ ಕಂಪೌಂಡ್, ದೇವಾಲಯದ ಗೋಡೆಗೆ ನಾಡಿನ ಶ್ರೇಷ್ಠ ಸಂತ, ಸಂಗೀತಗಾರರ ಭಾವಚಿತ್ರ ಬಿಡಿಸಲಾಗಿದೆ. ಮುಖ್ಯವಾಗಿ ಗದಗಿನ ಪಟ್ಟರಾಜ ಗವಾಯಿಗಳು, ಜ್ಞಾನ ಯೋಗಾಶ್ರಮದ ಸಿದ್ದೇಶ್ವರ ಶ್ರೀಗಳು ಸೇರಿದಂತೆ ವಿವಿಧ ದಾರ್ಶನಿಕರ ಚಿತ್ರ ಬಿಡಿಸಲಾಗಿದೆ. ಅಲ್ಲದೆ ಗ್ರಾಮೀಣ ಕ್ರೀಡೆಗಳು ನೆನಪಿಸುವ ಚಿತ್ರಗಳು, ಮಕ್ಕಳ ಕಲಿಕೆಗೆ ಪೂರಕವಾಗುವ ವಿವಿಧ ಚಿತ್ರಗಳನ್ನು ಬಿಡಿಸಲಾಗಿದ್ದು, ಗಮನ ಸೆಳೆಯುತ್ತೀವೆ.