ನೋಡ ನೋಡುತ್ತಲೇ ತೇಲಿ ಹೋದ ಲಾರಿ

IMG-20220824-WA0025.jpg
Published on

ಯಲ್ಲಾಪುರ:(ಉತ್ತರ ಕನ್ನಡ)
ತಾಲೂಕಿನ ಅರಬೈಲ್ ಸಮೀಪದ ಫಣಸಗುಳಿ ಬಳಿ ಗಂಗಾವಳಿ ನದಿಗೆ ನಿರ್ಮಿಸಲಾದ ತಾತ್ಕಾಲಿಕ ಸೇತುವೆ ದಾಟಲು ಹೋಗಿ ಲಾರಿಯೊಂದು ನದಿಯಲ್ಲಿ ಬಿದ್ದಿದೆ.
ಲಾರಿಯಲ್ಲಿ 6 ಜನರಿದ್ದು, ಅವರಲ್ಲಿ ಐವರನ್ನು ರಕ್ಷಿಸಲಾಗಿದೆ. ಒನ್ನೊಬ್ಬ ಲಾರಿಯಲ್ಲೇ ಸಿಲುಕಿರುವುದಾಗಿ ಹೇಳಲಾಗಿದ್ದು, ಪೊಲೀಸರು, ಅಗ್ನಿಶಾಮಕ ದಳದವರು ಶೋಧ ನಡೆಸುತ್ತಿದ್ದಾರೆ. ಲಾರಿಯಲ್ಲಿದ್ದವರು ಬಂಕಿಕೊಡ್ಲ ಹಾಗೂ ಹಿಲ್ಲೂರಿನವರಾಗಿದ್ದಾರೆ.
ಸೇತುವೆಯ ಮೇಲೆ ನೀರು ಹರಿಯುತ್ತಿದ್ದರೂ, ಚಾಲಕನ ನಿರ್ಲಕ್ಷ್ಯತನದಿಂದ ಸೇತುವೆ ದಾಟಲು ಮುಂದಾಗಿದ್ದಾನೆ. ಆ ವೇಳೆ ಇನ್ನೊಂದು ದಡದಲ್ಲಿದ್ದ ಜನರು ಸೇತುವೆ ಮೇಲೆ ಬಾರದಂತೆ ಕೂಗಿ ಹೇಳುತ್ತಲೇ ಇದ್ದರೂ ಹಿಂದಕ್ಕೆ ಹೋಗದೇ ಸೇತುವೆ ಮೇಲೆ ಲಾರಿ ಚಲಾಯಿಸಿದ್ದು, ಲಾರಿ ನದಿಯಲ್ಲಿ ಬಿದ್ದಿದೆ. ಚಾಲಕನ ಹುಚ್ಚುತನವೇ ಈ ಅವಘಡಕ್ಕೆ ಕಾರಣವಾಗಿದೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net