ನೋಟಿಸ್ ಕ್ರಮ ಕೈಬಿಟ್ಟು ಪ್ರಕರಣ ಮುಕ್ತಾಯಗೊಳಿಸಿ

02M.D.R.1
Published on

ಮದ್ದೂರು: ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಶ್ರೀಚಂದ್ರಶೇಖರನಾಥ ಸ್ವಾಮೀಜಿ ಅವರ ವಿರುದ್ಧ ಪ್ರಕರಣ ದಾಖಲಿಸಿ ವಿಚಾರಣಾ ನೋಟಿಸ್ ಕೊಟ್ಟಿರುವ ಕ್ರಮ ಕೈಬಿಟ್ಟು ಪ್ರಕರಣ ಮುಕ್ತಾಯಗೊಳಿಸಬೇಕೆಂದು ಅಖಿಲ ಕರ್ನಾಟಕ ಒಕ್ಕಲಿಗ ಸಂಘದ ಮದ್ದೂರು ತಾಲೂಕು ಅಧ್ಯಕ್ಷ ಚಂದೂಪುರ ಶಿವಲಿಂಗೇಗೌಡ ರಾಜ್ಯ ಸರ್ಕಾರವನ್ನು ಆಗ್ರಹಿಸಿದರು.

ಸ್ವಾಮೀಜಿ ಬಾಯಿತಪ್ಪಿನಿಂದ ಮತದ ಹಕ್ಕು ಕುರಿತು ಮಾತನಾಡಿದ್ದಾಗಿ ಹೇಳಿ ತಮ್ಮ ಹೇಳಿಕೆ ಕುರಿತು ವಿಷಾದಿಸಿದ್ದಾರೆ. ಸಾಂವಿಧಾನಿಕ ಹಕ್ಕುಗಳು ಎಲ್ಲ ಜನರಿಗೂ ದಕ್ಕುವುದು ನ್ಯಾಯಸಮ್ಮತ ಎಂದು ಪ್ರತಿಪಾದಿಸಿದ್ದಾರೆ. ಸ್ಪಷ್ಟೀಕರಣದ ನಂತರವೂ ಪೊಲೀಸರು ದೂರು ದಾಖಲಿಸಿಕೊಂಡು ಸ್ವಾಮೀಜಿ ಅವರಿಗೆ ನೋಟಿಸ್ ಕೊಟ್ಟಿರುವ ಕ್ರಮ ಸರಿಯಲ್ಲ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಅಭಿಪ್ರಾಯಪಟ್ಟರು.

ಸ್ವಾಮೀಜಿ ಅವರ ಹಿನ್ನೆಲೆ, ಅವರ ಆಧ್ಯಾತ್ಮಿಕ ಚಟುವಟಿಕೆ, ಸೇವಾಪರತೆ, ಎಲ್ಲ ಧರ್ಮಿಯರನ್ನು ಪ್ರೀತಿಸುತ್ತಿರುವುದನ್ನು ಪರಿಗಣಿಸಿ ಜತೆಗೆ ಅವರ ವಯಸ್ಸು ಮತ್ತು ವಯೋಮಾನಕ್ಕನುಗುಣವಾಗಿ ರಾಜ್ಯ ಸರ್ಕಾರ ಮಧ್ಯಪ್ರವೇಶಿಸಿ ಶ್ರೀಗಳ ವಿರುದ್ಧದ ಪ್ರಕರಣ ಮುಕ್ತಾಯಗೊಳಿಸಲು ಪೊಲೀಸರಿಗೆ ಸೂಚನೆ ನೀಡಬೇಕೆಂದು ಒತ್ತಾಯಿಸಿದರು.

ಟಿ.ಎಮ್‌ಗೊಪಾಲ್, ಮರಿಸ್ವಾಮಿ ಸುದ್ದಿಗೋಷ್ಠಿಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net