ನೈರ್ಮಲ್ಯ ಕಾಪಾಡುವ ಹೊಣೆ ನಮ್ಮೆಲ್ಲರದು

06arsph2ep
ಕಸ ಸಂಗ್ರಹಣೆಗೆ ಅಗತ್ಯವಿರುವ ಆಟೋ ಹಾಗೂ ಡಬ್ಬಿಗಳನ್ನು ಸಿ.ಗಿರೀಶ್ ಪೌರಕಾರ್ಮಿಕರಿಗೆ ಹಸ್ತಾಂತರಿಸಿದರು. ಕಾಂತೇಶ್, ಕೇಶವ ಚೌಗುಲೆ, ವೆಂಕಟಮುನಿ, ಜಿ.ಟಿ.ಗಣೇಶ್ ಇತರರಿದ್ದರು.
Published on

ಅರಸೀಕೆರೆ: ನಗರ ನೈರ್ಮಲ್ಯ ಕಾಪಾಡುವ ಗುರುತರ ಹೊಣೆಗಾರಿಕೆ ನಮ್ಮೆಲ್ಲರ ಮೇಲಿದೆ ಎಂದು ನಗರಸಭೆ ಅಧ್ಯಕ್ಷ ಸಿ.ಗಿರೀಶ್ ಹೇಳಿದರು.

ನಗರಸಭೆ ವತಿಯಿಂದ ಕಸ ಸಂಗ್ರಹಣೆಗೆ ಅಗತ್ಯವಿರುವ ಆಟೋ ಹಾಗೂ ಡಬ್ಬಿಗಳನ್ನು ಸೋಮವಾರ ಕಚೇರಿ ಆವರಣದಲ್ಲಿ ಹಸ್ತಾಂತರಿಸಿ ಮಾತನಾಡಿದರು. ಬಡಾವಣೆಗಳ ವ್ಯಾಪ್ತಿ ವಿಸ್ತಾರವಾದಂತೆ ಸ್ವಚ್ಛತೆ ಕಾಪಾಡುವುದು ಸವಾಲಿನ ಕೆಲಸವಾಗಿದೆ. ಸಮಸ್ಯೆಯ ಗಂಭೀರತೆಯನ್ನು ಮನಗಂಡು ನಗರಸಭೆ ವತಿಯಿಂದ ಹೊಸ ಕಸ ಸಂಗ್ರಹ ಮಾಡುವ ಆಟೋಗಳು ಹಾಗೂ ಆಯಕಟ್ಟಿನ ಜಾಗಗಳಲ್ಲಿರಿಸುವ ಕಸದ ಡಬ್ಬಿಗಳನ್ನು ನೀಡಲಾಗುತ್ತಿದೆ.ನಗರದ ನೈರ್ಮಲ್ಯ ತೊಡೆದು ಹಾಕುವ ಕೆಲಸ ಪೌರ ಕಾರ್ಮಿಕರಿಗೆ ಸೇರಿದ್ದು ಎನ್ನುವ ಭಾವನೆಯಿಂದ ಹೊರಬಂದು ಚುನಾಯಿತ ಜನಪ್ರತಿನಿಧಿಗಳು, ನಗರಸಭೆ ಅಧಿಕಾರಿಗಳು ಒಗ್ಗೂಡಿ ಕೆಲಸ ಮಾಡಿದರೆ ಮಾತ್ರವೇ ಒಳ್ಳೆಯ ಹೆಸರು ಪಡೆಯಲು ಸಾಧ್ಯ ಎಂದು ಹೇಳಿದರು.

ಪೌರಾಯುಕ್ತ ಕೇಶವ ಚೌಗುಲೆ, ಉಪಾಧ್ಯಕ್ಷ ಕಾಂತೇಶ್, ಸದಸ್ಯರಾದ ವೆಂಕಟಮುನಿ, ಜಿ.ಟಿ.ಗಣೇಶ್, ಮುಖಂಡರಾದ ರಮೇಶ್, ಮಲ್ಲಿಕಾರ್ಜುನ್, ಉಮೇಶ್ ಹಾಗೂ ಸಿಬ್ಬಂದಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net