

ಬಾಗಲಕೋಟೆ: ಸಿಎಂ ಸಿದ್ದರಾಮಯ್ಯ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು, ರಾಜ್ಯಪಾಲರ ಬಗ್ಗೆ ತಪ್ಪು ಸಂದೇಶ, ಅವಹೇಳನಕಾರಿ ಹೇಳಿಕೆ ನೀಡುತ್ತಿರುವವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿ ಬಿಜೆಪಿ ಜಿಲ್ಲಾ ಘಟಕದ ನೇತೃತ್ವದಲ್ಲಿ ಗುರುವಾರ ಜಿಲ್ಲಾಡಳಿತ ಭವನ ವಿರುದ್ಧ ಪ್ರತಿಭಟನೆ ನಡೆಸಲಾಯಿತು.
ನವನಗರದ ಜಿಲ್ಲಾ ಬಿಜೆಪಿ ಕಚೇರಿಯಿಂದ ಆರಂಭವಾದ ಪ್ರತಿಭಟನಾ ಮೆರವಣಿಗೆಯೂ ಬಸ್‌ನಿಲ್ದಾಣ, ಪೊಲೀಸ್ ಪ್ಯಾಲೇಸ್ ಮೂಲಕ ಜಿಲ್ಲಾಡಳಿತ ಭವನ ಮುಖ್ಯದ್ವಾರ ತಲುಪಿತು. ನಂತರ ಅಪರ ಜಿಲ್ಲಾಽಕಾರಿ ಸಂತೋಷ ಜಗಲಾಸರ್ ಅವರ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಲಾಯಿತು.
ಬಿಜೆಪಿ ಕಚೇರಿಯಿಂದ ಪ್ರತಿಭಟನಾ ರ‍್ಯಾಲಿಯಲ್ಲಿ ಬಂದ ಮುಖಂಡರು, ರಾಜ್ಯ ಸರ್ಕಾರದ ವಾಲ್ಮೀಕಿ ಹಗರಣ, ಪರಿಶಿಷ್ಟ ಜÁತಿ, ಪಂಗಡದ ಹಣವನ್ನು ಗ್ಯಾರಂಟಿಗೆ ಬಳಸುತ್ತಿರುವುದು, ಮುಡಾದಲ್ಲಿ ನಿವೇಶನ ಪಡೆದು ಜನ ವಿರೋಽ ಆಡಳಿತ ನಡೆಸಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಂಸದ ಪಿ.ಸಿ. ಗದ್ದಿಗೌಡರ ಮಾತನಾಡಿ, ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣದಲ್ಲಿ ನೀವು ಭಾಗಿಯಾಗಿದ್ದೀರಿ. ಹಣಕಾಸು ಸಚಿವರಾದ ನಿಮಗೆ ಗೊತ್ತಿಲ್ಲದೇ ಅಷ್ಟು ಹಣ ವರ್ಗಾವಣೆ ಸಾಧ್ಯವಿಲ್ಲ. ಆದ್ದರಿಂದ ನೀವು ಆಗಲೇ ರಾಜೀನಾಮೆ ನೀಡಬೇಕಿತ್ತು. ನಿಮ್ಮ ಪತ್ನಿ ಖರೀದಿಸಿರುವ ಭೂಮಿ ಡಿನೋಟಿ-ೆÊ ಮಾಡುವಲ್ಲಿ ನಿಮ್ಮ ಪ್ರಭಾವ ಇದೆ. ಮನೆಯಲ್ಲಿ ಅಷ್ಟು ದೊಡ್ಡ ವ್ಯವಹಾರ ನಡೆದರೂ ನನಗೆ ಗೊತ್ತಿಲ್ಲ ಎನ್ನುವುದು ಹಾಸ್ಯಾಸ್ಪದ. ರಾಜೀನಾಮೆ ನೀಡಿ ಪಾರದರ್ಶಕ ತನಿಖೆಗೆ ಅವಕಾಶ ಮಾಡಿಕೊಡಬೇಕು. ವಿಳಂಬ ಧೋರಣೆ ಅನುಸರಿಸಿದಲ್ಲಿ ಉಗ್ರ ಹೋರಾಟ ಅನಿವಾರ್ಯ ಎಂದು ಎಚ್ಚರಿಕೆ ನೀಡಿದರು.
ರಾಜ್ಯಸಭೆ ಸದಸ್ಯ ನಾರಾಯಣ ಭಾಂಡಗೆ ಮಾತನಾಡಿ, ಸಿದ್ದರಾಮಯ್ಯ ತಮ್ಮ ವಿರುದ್ಧ ಒಂದೇ ಒಂದು ಕಪ್ಪು ಚುಕ್ಕೆ ಇಲ್ಲ ಎನ್ನುತ್ತಾರೆ. ಆದರೆ, ಮೈತುಂಬಾ ಕಪ್ಪು ಚುಕ್ಕೆಗಳಿವೆ. ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣದಲ್ಲಿ ಚುನಾವಣೆ ಮಾಡಿದ್ದೀರಿ. ಕಾಂಗ್ರೆಸ್‌ನಲ್ಲಿ ಜಾಮೀನಿನ ಮೇಲಿದ್ದವರೇ ಹೆಚ್ಚಿz್ದÁರೆ ಎಂದು ಟೀಕಿಸಿದರು.
ಮಾಜಿ ಶಾಸಕ ದೊಡ್ಡನಗೌಡ ಪಾಟೀಲ ಮಾತನಾಡಿ, ಬದಲಿ ನಿವೇಶನ ಕೋರಿ ಸಲ್ಲಿಸಿರುವ ಅರ್ಜಿಗೆ ವೈಟ್ನರ್ ಹಚ್ಚಿದ್ದೇಕೆ? ಅದನ್ನು ಹಚ್ಚಿದವರು ಯಾರು ಎಂದು ಪ್ರಶ್ನಿಸಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಶಾಂತಗೌಡ ಪಾಟೀಲ ಮಾತನಾಡಿ, ಮುಡಾ ಹಗರಣದಲ್ಲಿ ನೇರವಾಗಿ ನಿಮ್ಮ ಕುಟುಂಬವೇ ಭಾಗಿಯಾಗಿದ್ದು ನಿವೇಶನ ಹಂಚಿಕೆಯಲ್ಲಿ ನಿಮ್ಮದ್ದು ಪಾತ್ರವಿದೆ ಎನ್ನುವುದು ಮೇಲ್ನೋಟಕ್ಕೆ ಗೋಚರಿಸುತ್ತಿರುವ ಹಿನ್ನೆಲೆಯಲ್ಲಿ ಕೂಡಲೇ ತಾವು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಜು ನಾಯ್ಕರ, ಮುಖಂಡರಾದ ಎಂ.ಎಸ್.ದಡ್ಡೇನವರ, ಮಲ್ಲಯ್ಯ ಮೂಗನೂರಮಠ, ಬಸವರಾಜ ಯಂಕಂಚಿ, ಡಾ.ಶೇಖರ ಮಾನೆ, ಸತ್ಯನಾರಾಯಣ ಹೇಮಾದ್ರಿ, ಅರುಣ ಕಾರಜೋಳ, ಶಂಭುಗೌಡ ಪಾಟೀಲ, ಚಂದ್ರಕಾಂತ ಕೇಸನೂರ, ಶಿವಾನಂದ ಸುರಪುರ, ರಾಜು ನಾಯಕ, ಸತ್ಯನಾರಾಯಣ ಹೇಮಾದ್ರಿ, ಜ್ಯೋರ್ತಿ ಭಜಂತ್ರಿ, ಸವಿತಾ ಲೆಂಕೆನ್ನವರ, ಶೋಭಾರಾವ ಇತರರು ಇದ್ದರು.