ಶೃಂಗೇರಿಗೆ ಭಕ್ತರ ದಂಡು

srigeri
ಶೃಂಗೇರಿ ಶ್ರೀ ಶಾರದಾಪೀಠಕ್ಕೆ ಪೂಜೆ ಸಲ್ಲಿಸಲು ಬಂದಿರುವ ಭಕ್ತರ ದಂಡು.
Published on

ಶೃಂಗೇರಿ: ತಾಲೂಕಿನಲ್ಲಿ ಮಂಗಳವಾರ ಮುಂಗಾರು ಮಳೆ ಕೊಂಚ ಬಿಡುವು ನೀಡಿದ್ದರೂ ತುಂಗಾನದಿಯ ನೀರಿನ ಪ್ರಮಾಣ ಹೆಚ್ಚಳವಾಗಿದೆ. ಆನೆಗುಂದ ರಾಷ್ಟ್ರೀಯ ಹೆದ್ದಾರಿ-169ರ ಸಮೀಪ ಹಾಗೂ ನೇರಳಕೊಡಿಯಲ್ಲಿ ಭೂಕುಸಿತವಾಗಿದೆ.

ಮಳೆ ಲೆಕ್ಕಿಸದೆ ಮಂಗಳವಾರ ಕೋಲಾರ, ಬೆಂಗಳೂರು, ಮೈಸೂರು, ತುಮಕೂರು ಕಡೆಯಿಂದ ಬಂದ ಮಹಿಳೆಯರ ಸಂಖ್ಯೆ ಹೆಚ್ಚಾಗಿತ್ತು. ಪ್ರತಿನಿತ್ಯ ಶ್ರೀಮಠಕ್ಕೆ ಬರುವ ಪ್ರವಾಸಿಗರ ಸಂಖ್ಯೆ ಪ್ರಸ್ತುತ ಸಾಲಿನಲ್ಲಿ ಅಧಿಕವಾಗಿದೆ. ಶ್ರೀಮಠದ ಎಲ್ಲಾ ದೇವಾಲಯಗಳಿಗೆ ಹೋಗಿ ಜಗದ್ಗುರುಗಳ ಆಶೀರ್ವಾದ ಪಡೆದು ಬಸ್ ನಿಲ್ದಾಣದಲ್ಲಿ ಸರ್ಕಾರಿ ಬಸ್‌ಗಳಿಗೆ ಮಹಿಳೆಯರು ಕಾದು ಕುಳಿತಿದ್ದ ದೃಶ್ಯ ಸಾಮಾನ್ಯವಾಗಿತ್ತು.
ಶೃಂಗೇರಿ ಕ್ಷೇತ್ರದಿಂದ ಹೊರನಾಡು, ಬಾಳೆಹೊನ್ನೂರು ಶ್ರೀ ರಂಭಾಪುರಿ ಮಠ, ಉಡುಪಿ ಶ್ರೀಕೃಷ್ಣಮಠ, ಕೊಲ್ಲೂರು ಮೂಕಾಂಬಿಕಾ ಮತ್ತಿತರ ಕ್ಷೇತ್ರಗಳಿಗೆ ಮಹಿಳೆಯರು ಹೆಚ್ಚಾಗಿ ಸರ್ಕಾರಿ ಬಸ್‌ಗಳಲ್ಲೇ ತೆರಳುತ್ತಿದ್ದಾರೆ. ಶೃಂಗೇರಿ ಶ್ರೀಮಠದಲ್ಲಿ ವಾಸ್ತವ್ಯ ಹಾಗೂ ಭೋಜನ ವ್ಯವಸ್ಥೆ ಕೂಡಾ ಇದ್ದು ಚಾತುರ್ಮಾಸ್ಯ ಹಿನ್ನೆಲೆಯಲ್ಲಿ ಪ್ರತಿನಿತ್ಯ ಪ್ರವಾಸಿಗರ ಸಂಖ್ಯೆ ಹೆಚ್ಚಾಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net