ನೇತ್ರಾವತಿ ಮೇಘರಾಜ್ ಹೆಬ್ಬಸಾಲೆ ಗ್ರಾಪಂ ಅಧ್ಯಕ್ಷೆ

5skpp1 hebbasale president
Published on

ಸಕಲೇಶಪುರ: ತಾಲೂಕಿನ ಹೆಬ್ಬಸಾಲೆ ಗ್ರಾಮ ಪಂಚಾಯಿತಿ ನೂತನ ಅಧ್ಯಕ್ಷರಾಗಿ ಬಿಜೆಪಿ ಬೆಂಬಲಿತ ನೇತ್ರಾವತಿ ಮೇಘರಾಜ್ ಅವಿರೋಧ ಆಯ್ಕೆಯಾಗಿದ್ದಾರೆ.

ಶಿವಕುಮಾರಿ ಅವರ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಮಂಗಳವಾರ ಚುನಾವಣೆ ನಿಗದಿಯಾಗಿತ್ತು. ಒಟ್ಟು 14 ಸದಸ್ಯ ಬಲದ ಗ್ರಾಪಂನಲ್ಲಿ ಬಿಜೆಪಿ ಬೆಂಬಲಿತರು ಹೆಚ್ಚಿನ ಸಂಖ್ಯೆಯಲ್ಲಿದ್ದು, ನೇತ್ರಾವತಿ ಹೊರತುಪಡಿಸಿ ಬೇರ‌್ಯಾರೂ ನಾಮಪತ್ರ ಸಲ್ಲಿಸದ ಕಾರಣ ಚುನಾವಣಾಧಿಕಾರಿ ಅವಿರೋಧ ಆಯ್ಕೆ ಘೋಷಿಸಿದರು.

ಸದಸ್ಯರಾದ ದಯಾನಂದ್, ಮಹೇಶ್, ರಘುನಂದನ್, ಕಾರ್ತಿಕ್, ಮಂಜುನಾಥ್, ಭಾಗ್ಯಾ, ಮಣಿಕುಮಾರಿ, ರೇಣುಕಾ, ಜ್ಯೋತಿ, ನಾಗೇಶ್, ಬಿಜೆಪಿ ಪ್ರಧಾನ ಕಾರ್ಯದರ್ಶಿ ಮಧು ಬೊಮ್ಮನಕೆರೆ, ಅಗ್ನಿ ಸೋಮಶೇಖರ್, ಶಾಸಕ ಸಿಮೆಂಟ್ ಮಂಜು ಪತ್ನಿ ಪ್ರತಿಭಾ ಮಂಜುನಾಥ್, ಪಕ್ಷದ ಮುಖಂಡರಾದ ರಾಜ್‌ಕುಮಾರ್, ಯೋಗೇಶ್, ಮೇಘರಾಜ್, ಜಯಶಂಕರ್, ಸಚ್ಚಿನ್, ಲೋಕೇಶ್, ಇಂದನ್, ಗುರುಪ್ರಶಾಂತ್, ಭೂಮೇಶ್, ನವೀನ್ ಶೆಟ್ಟಿ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net