ನೇತ್ರ ತಪಾಸಣೆ ಶಿಬಿರದ ಉಪಯೋಗ ಪಡೆದುಕೊಳ್ಳಿ

IMG-20250703-WA0648
Published on

ಅರಸೀಕೆರೆ ಗ್ರಾಮಾಂತರ: ಮನುಷ್ಯನ ಪ್ರಮುಖ ಅಂಗ ಕಣ್ಣು, ಅದನ್ನು ಸಂರಕ್ಷಿಸಿಕೊಳ್ಳುವ ದೃಷ್ಟಿಯಿಂದ ಸಾರ್ವಜನಿಕರು ಶಿಬಿರದ ಉಪಯೋಗ ಪಡೆದುಕೊಳ್ಳಬೇಕು ಎಂದು ಡಾ.ಸುಮಂಗಲಾ ಸಲಹೆ ನೀಡಿದರು.

ತಾಲೂಕಿನ ಕಣಕಟ್ಟೆ ಹೋಬಳಿಯ ಜಯಚಾಮರಾಜಪುರ ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಆಯೋಜಿಸಿದ್ದ ಆಶಾಕಿರಣ ದೃಷ್ಟಿಕೇಂದ್ರ ಲೋಕಾರ್ಪಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಸಾರ್ವಜನಿಕರಿಗೆ ತುಂಬಾ ಉಪಯುಕ್ತವಾಗಲಿದೆ ಎಂದು ಹೇಳಿದರು.

ನೇತ್ರತಜ್ಞ ಡಾ.ಹೇಮಂತ್ ಮಾತನಾಡಿ, ನಲವತ್ತು ವಯಸ್ಸಿನಿಂದ ಅರವತ್ತು ವಯಸ್ಸಿನ ವ್ಯಕ್ತಿಗಳು ದೃಷ್ಟಿ ದೋಷದಿಂದ ಮುಕ್ತರಾಗಲು ನಮ್ಮ ಈ ಆಶಾಕಿರಣ ಕೆಂದ್ರದಲ್ಲಿ ಉಚಿತವಾಗಿ ನೇತ್ರ ಶಸ್ರಚಿಕಿತ್ಸೆ ಹಾಗೂ ಉಚಿತವಾಗಿ ಕನ್ನಡಕ ನೀಡಲಾಗುವುದು ಎಂದು ಹೇಳಿದರು.

ಡಾ.ದಿವ್ಯಾ, ರಮೀತ್, ಸಂಜಯ್, ಪಲ್ಲವಿ, ಸಿಬ್ಬಂದಿ ವಿನಯ್, ಲತಾ, ಯಶೋದಮ್ಮ, ತಾರಿಣಿ, ಪಾರ್ವತಿ ಹಾಗೂ ಗ್ರಾಮಸ್ಥರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net