ನೇಕಾರ ಉದ್ಯಮಕ್ಕೆ ಅಗತ್ಯ ಸಹಕಾರ

28Kush01
Published on

ಕುಶಾಲನಗರ: ತರಬೇತಿ ನಿರತರು ಶ್ರದ್ಧೆಯಿಂದ ಉದ್ಯಮ ಕಲಿಯಲು ಪ್ರಯತ್ನಿಸಬೇಕು ಎಂದು ಜವಳಿ ಮತ್ತು ಕೈಮಗ್ಗ ಇಲಾಖೆ ಜಿಲ್ಲಾ ಸಹಾಯಕ ನಿರ್ದೇಶಕ ಜಿ.ಎಸ್.ಗುರುಸ್ವಾಮಿ ಹೇಳಿದರು.


ಜವಳಿ ಸಚಿವಾಲಯ ಹಾಗೂ ಬೆಂಗಳೂರಿನ ನೇಕಾರರ ಸೇವಾ ಕೇಂದ್ರದ ಆಶ್ರಯದಲ್ಲಿ ಸಮರ್ಥ್ ಯೋಜನೆ ಅಡಿಯಲ್ಲಿ ಹೆಬ್ಬಾಲೆಯ ಕೈಮಗ್ಗ ನೇಕಾರರ ಮತ್ತು ಸಿದ್ಧ ಉಡುಪು ಉತ್ಪಾದನೆ ಮತ್ತು ಮಾರಾಟ ಸಹಕಾರ ಸಂಘದ ನೇತೃತ್ವದಲ್ಲಿ ಸೋಮವಾರ ಹೆಬ್ಬಾಲೆ ಹಾಲು ಉತ್ಪಾದಕರ ಸಹಕಾರ ಸಂಘದ ಸಭಾಂಗಣದಲ್ಲಿ ಕೈಮಗ್ಗ ನೇಕಾರರಿಗೆ ಹಮ್ಮಿಕೊಂಡಿದ್ದ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.


ನೇಕಾರ ಉದ್ಯಮ ಕೈಗೊಳ್ಳಲು ಇಲಾಖೆಯಿಂದ ಅಗತ್ಯ ಸೌಲಭ್ಯಗಳನ್ನು ಒದಗಿಸುವುದಾಗಿ ಭರವಸೆ ನೀಡಿದರು.


ನೇಕಾರರ ಸೇವಾ ಕೇಂದ್ರದ ಹಿರಿಯ ಅಧಿಕಾರಿ ಎಸ್.ಮಾರಿಮುತ್ತು, ತಾಂತ್ರಿಕ ಅಧಿಕಾರಿ ಎ.ತುಳಸಿ ರಾಮನ್, ಜವಳಿ ಯೋಜನೆ ಮತ್ತು ಉದ್ಯಮದ ಬಗ್ಗೆ ವಿವರಿಸಿದರು.


ಹೆಬ್ಬಾಲೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಎಚ್.ಪಿ. ಅರುಣಾಕುಮಾರಿ, ಸಂಘದ ನಿರ್ದೇಶಕ ವೆಂಕಟೇಶ್, ಕಾರ್ಯದರ್ಶಿ ಸವಿತ, ಜಿಲ್ಲಾ ನೇಕಾರ ಒಕ್ಕೂಟದ ನಿರ್ದೇಶಕ ಕೆ.ಕೆ. ನಾಗರಾಜಶೆಟ್ಟಿ, ತರಬೇತುದಾರ ಪಿ.ನಾಗರಾಜ್, ಬೊಮ್ಮಣ್ಣ, ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net