ನೆರೆ ರಾಜ್ಯಗಳಿಗಿಂತ ರಾಜ್ಯದಲ್ಲಿ ಮದ್ಯದ ಬೆಲೆ ಕಡಿಮೆ

download
Published on

ಬಾಗಲಕೋಟೆ: ನೆರೆ ಹೊರೆ ಹಾಗೂ ಬೇರೆ ರಾಜ್ಯಗಳಿಗೆ ಹೋಲಿಕೆ ಮಾಡಿದರೆ ನಮ್ಮ ರಾಜ್ಯದಲ್ಲಿ ಮದ್ಯದ ಬೆಲೆ ಕಡಿಮೆ ಇದೆ. ಇದೀಗ -ೆÇÃರ್ಥ್ ಸ್ಲಾಬ್‌ವರೆಗೆ ಸ್ವಲ್ಪ ಪ್ರಮಾಣದಲ್ಲಿ ಬೆಲೆ ಹೆಚ್ಚಳ ಮಾಡಲಾಗಿದೆ. ಆದರೆ, ಪ್ರೀಮಿಯಂ ಬ್ರ‍್ಯಾಂಡ್ ಗಳ ಬೆಲೆ ಹೆಚ್ಚಳ ಮಾಡಿಲ್ಲ ಎಂದು ಅಬಕಾರಿ ಸಚಿವ ಆರ್.ಬಿ.ತಿಮ್ಮಾಪುರ ಹೇಳಿದರು.

ಬಾಗಲಕೋಟೆಯಲ್ಲಿ ಭಾನುವಾರ ಸುದ್ದಿಗಾರರ ಜೊತೆ ಮಾತನಾಡಿದ ಸಚಿವರು, ಬಿಯರ್ ಬೆಲೆ ೧೦ ರೂ. ಹೆಚ್ಚಳ ಮಾಡಿದ್ದೇವೆ. ಯಾವುದೇ ಸರ್ಕಾರ ಇದ್ದರೂ ಮದ್ಯದ ಬೆಲೆ ಹೆಚ್ಚಳ ನಿರಂತರವಾಗಿ ನಡೆಯುವ ಪ್ರಕ್ರಿಯೆಯಾಗಿದೆ. ಬೇರೆ ಬೇರೆ ರಾಜ್ಯಗಳನ್ನು ನೋಡಿಕೊಂಡು ನಾವು ದರ ಹೆಚ್ಚು, ಕಡಿಮೆ ಮಾಡುವುದು ನಡೆಯುತ್ತದೆ. ನಾನು ಅಬಕಾರಿ ಸಚಿವನಾದ ಬಳಿಕ ಪ್ರೀಮಿಯಂ ಗಳ ಬೆಲೆ ಕಡಿಮೆ ಮಾಡಿದ್ದೆ ಎಂದರು.

ಮದ್ಯದ ದರ ಹೆಚ್ಚಳದಿಂದ ಮದ್ಯ ಮಾರಾಟ ಮತ್ತು ಕುಡಿಯುವವರ ಸಂಖ್ಯೆ ಕಡಿಮೆಯಾದರೆ ಒಳ್ಳೆಯದೇ ಅಲ್ವಾ? ಮದ್ಯ ಮರಾಟ ಸಂಪೂರ್ಣ ಮಾಡುವುದರಿಂದ ಅಕ್ರಮ ದಂಧೆ, ಕಳ್ಳಭಟ್ಟಿ, ಡ್ರಗ್ಸ್ ದಂಧೆ ನಡೆಯುತ್ತದೆ. ಈಗ ಆಗುವ ಅನಾಹುತಗಳಿಗಿಂತ ಮದ್ಯ ಬಂದ್ ಮಾಡಿದರೆ ಆಗುವ ಅನಾಹುತಗಳು ಹೆಚ್ಚು ಎಂದು ಸಚಿವರು ಅಭಿಪ್ರಾಯಪಟ್ಟರು.

ಹಿಂದೆ ಕೆಲ ರಾಜ್ಯಗಳು ಮದ್ಯ ಮಾರಾಟ ಬಂದ್ ಮಾಡಿ ಕೈಸುಟ್ಟುಕೊಂಡು ಮತ್ತೆ ಆರಂಭ ಮಾಡಿವೆ. ಹೀಗಾಗಿ ನಾವು ಮದ್ಯ ಮಾರಾಟ ಬಂದ್ ಮಾಡದೆ ಗುಣಮಟ್ಟದ ಮದ್ಯ ಕೊಡೋಣ ಎಂದು ಮಾಡಿದ್ದೇವೆ. ಪಕ್ಕದ ತಮಿಳುನಾಡಿ, ಆಂಧ್ರ ರಾಜ್ಯಗಳನ್ನು ನೋಡಿದರೆ ನಮ್ಮಲ್ಲಿ -ÉÇÃರ್ಥ್ ಸ್ಲಾಬ್ ನಮ್ಮದು ಕ್ವಾಲಿಟಿ ಅವರಿಗಿಂತ ಚನ್ನಾಗಿದೆ. ಹೀಗಾಗಿ ಜಾಸ್ತಿ ಎಕ್ಸಪೋರ್ಟ್ ಆಗುತ್ತದೆ ಎಂದರು.

ಗ್ಯಾರ0ಟಿಗಳಿ0ದಾಗಿ ಮದ್ಯದ ದರ ಹೆಚ್ಚಿಗೆ ಮಾಡುತ್ತಿದೆಯಾ ಸರ್ಕಾರ ಎನ್ನುವ ಪ್ರಶ್ನೆಗೆ, ಹಿಂದಿನ ಸರ್ಕಾರಗಳು ಮದ್ಯದ ದರ ಹೆಚ್ಚಿಸಿದ್ದು ಯಾಕೆ? ಪ್ರತಿ ವರ್ಷವೂ ಪ್ರತಿ ಸರ್ಕಾರಗಳು ಮದ್ಯದ ದರ ಹೆಚ್ಚು ಮಾಡುತ್ತಲೇ ಬಂದಿವೆ. ಬೆಲೆ ಹೆಚ್ಚಳದಿಂದ ಜನರು ಕಳ್ಳಭಟ್ಟಿ, ಡ್ರಗ್ಸ್ ಕಡೆಗೆ ಹೋಗದಂತೆ ಅದನ್ನು ತಡೆಯೋಣ. ರಾಜ್ಯದಲ್ಲಿ ಶೇ.೯೯ ರಷ್ಟು ಕಳ್ಳಭಟ್ಟಿ ಕಡಿಮೆಯಾಗಿದೆ. ಡ್ರಗ್ಸ್ ಹಾವಳಿ ಸ್ವಲ್ಪ ಇದ್ದು, ಅದನ್ನು ಕಂಟೋಲ್ ಮಾಡಲಾಗುವುದು. ರಾಜ್ಯದಲ್ಲಿ ನಕಲಿ ಮದ್ಯ ಬರಲ್ಲ. ಬಂದರೆ ಗೋವಾದಿಂದ ಬರುತ್ತದೆ. ಹುಬ್ಬಳ್ಳಿ ಕಮರಿಪೇಟೆ ಸರಾಯಿ ಬಂದ್ ಆಗಿದೆ ಎಂದು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net