

ಕುದೂರು : ಮಕ್ಕಳ ನೆನಪಿನ ಶಕ್ತಿಗೆ ಕಲಿಕಾ ಚಟುವಟಿಕೆಗಳು ಅಗತ್ಯ ಎಂದು ಶ್ರೀಗಿರಿಪುರ ಕ್ಲಸ್ಟರ್‌ನ ಸಿಆರ್‌ಪಿ ಶಿವಕುಮಾರ್ ಹೇಳಿದರು.
ಶಾಲಾ ಶಿಕ್ಷಣ ಇಲಾಖೆಯಿಂದ ಹೋಬಳಿಯ ಶ್ರೀಗಿರಿಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಶ್ರೀಗಿರಿಪುರ ಕ್ಲಸ್ಟರ್‌ಹಂತದ ಎ್ಎಲ್ಎನ್ ಕಲಿಕಾಹಬ್ಬಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಕಲಿಕಾ ಚಟುವಟಿಕೆಗಳು ಮಕ್ಕಳ ಜ್ಞಾನ ಹೆಚ್ಚಿಸುವ ತೆಗೆ ಅಕ್ಷರ ಮತ್ತು ಸಂಖ್ಯಾಜ್ಞಾನ ಹಾಗೂ ನೆನಪಿನ ಶಕ್ತಿ ವೃದ್ಧಿಸುತ್ತವೆ. ಇದು ಗುಣಾತ್ಮಕ ಹಾಗೂ ಪರಿಪೂರ್ಣ ಕಲಿಕೆಗೆ ಸಹಕಾರಿಯಾಗಲಿದೆ ಎಂದರು.
ಮಾಗಡಿ ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ನಿಕಟ ಪೂರ್ವ ಅಧ್ಯಕ್ಷ ಬಾಲರಾಜು ಮಾತನಾಡಿ, ಶಾಲಾ ಮಕ್ಕಳು ವಯಸ್ಸಿಗೆ ಅನುಗುಣವಾಗಿ ನಿಗದಿಪಡಿಸಿದ ಕಲಿಕೆಯನ್ನು ಒತ್ತಡವಿಲ್ಲದೆ ಸಾಧಿಸಬೇಕೆನ್ನುವುದು ಶಾಲಾಶಿಕ್ಷಣ ಇಲಾಖೆ ಆಶಯ. ಈ ಹಿನ್ನೆಲೆಯಲ್ಲಿ ಓದು, ಬರಹ ಮತ್ತು ಸಂಖ್ಯಾಜ್ಞಾನದಲ್ಲಿ ಪ್ರಗತಿ ಸಾಧಿಸಿದ ಮಕ್ಕಳನ್ನು ಮುಖ್ಯವಾಹಿನಿಗೆ ತರಲು ಮತ್ತು ಸಂತಸದಾಯಕ ಹಾಗೂ ಅನುಭವಾತ್ಮಕ ಕಲಿಕೆಯ ವಾತಾವರಣವನ್ನು ಪ್ರೇರೇಪಿಸಲು ಶಿಕ್ಷಣ ಇಲಾಖೆ ಎ್ಎಲ್ಎನ್ ಕಲಿಕಾ ಹಬ್ಬ ರೂಪಿಸಿದೆ ಎಂದರು.
ಕ್ಲಸ್ಟರ್‌ಹಂತದ ಒಟ್ಟು ಎಂಟು ಶಾಲೆಗಳ ವಿದ್ಯಾರ್ಥಿಗಳು ಗಟ್ಟಿ ಓದು, ಶುದ್ಧ ಬರಹ, ಗಣಿತ, ರಸಪ್ರಶ್ನೆ, ಕಥೆ ಹೇಳುವುದು, ಜ್ಞಾಪಕ ಶಕ್ತಿ, ಸಮುದಾಯದೊಂದಿಗೆ ಸಂತಸದ ಚಟುವಟಿಕೆ ಸೇರಿ ವಿವಿಧ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದರು. ಕಲಿಕಾಹಬ್ಬದ ಪ್ರಯುಕ್ತ ಹಮ್ಮಿಕೊಂಡಿದ್ದ ವಿವಿಧ ಸ್ಪರ್ಧೆಗಳಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ನಗದು ಬಹುಮಾನ ಹಾಗೂ ಪ್ರಮಾಣ ಪತ್ರ ವಿತರಿಸಲಾಯಿತು.
ಶಾಲೆಯ ಎಸ್‌ಡಿಎಂಸಿ ಸದಸ್ಯೆ ಗಂಗಮ್ಮ, ಮುಖ್ಯಶಿಕ್ಷಕರಾದ ರಾಮಕೃಷ್ಣಯ್ಯ, ಲೋಕೇಶ್, ಬಾಲರಾಜು, ಶ್ರೀನಿವಾಸಮೂರ್ತಿ, ಮಲ್ಲಿಕಾರ್ಜುನ್, ಅರುಣ್ ಕುಮಾರ್, ರಘುಪತಿ, ಶಿಕ್ಷಕರಾದ ಹೊನ್ನರಾಜು, ಕೃಷ್ಣಪ್ಪ, ಹನುಮಂತಯ್ಯ, ಚೆನ್ನಮ್ಮ, ಸುಮಲತಾ ಹಾಗೂ ವಿವಿಧ ಶಾಲೆಗಳ ವಿದ್ಯಾರ್ಥಿಗಳು ಇದ್ದರು.