ನೆಟ್​ ಪಾಸ್​ ಆಗಲು ನಿರಂತರ ಅಭ್ಯಾಸ ಬೇಕು

CUK
Published on

ಕಲಬುರಗಿ: ಯುಜಿಸಿ  ನೆಟ್​ನಲ್ಲಿ ಉತ್ತರ‍್ಣರಾಗಲು ಕೇಂದ್ರೀಕೃತ ಅಧ್ಯಯನ ಬಹಳ ಮುಖ್ಯ ಎಂದು ಕೇಂದ್ರೀಯ ವಿಶ್ವವಿದ್ಯಾಲಯದ ಶಿಕ್ಷಣ ನಿಕಾಯ ಡೀನ್​ ಪ್ರೊ.ಜಿ.ಆರ್​.ಅಂಗಡಿ ಹೇಳಿದರು.

ಕಡಗಂಚಿಯಲ್ಲಿನ ರ‍್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಸೋಮವಾರ ಆಯೋಜಿಸಿದ್ದ ಯುಜಿಸಿ& ಜೆಆರ್​ಎಫ್​/ ನೆಟ್​ ತರಬೇತಿ ಕರ‍್ಯಾಗಾರದಲ್ಲಿ ಮಾತನಾಡಿ, ಜೆಆರ್​ಎಫ್​/ನೆಟ್​ ಪರೀೆಯ ಸಿದ್ಧತೆಗೆ ನಿತ್ಯ ಕನಿಷ್ಟ ಎರಡು ಗಂಟೆ ನಿರಂತರ ಅಧ್ಯಯನ ಅಗತ್ಯ. ಹೀಗೆ ಒಂದು ತಿಂಗಳವರೆಗೆ ಅಭ್ಯಾಸದತ್ತ ಗಮನಹರಿಸಿದರೆ ಖಂಡಿತವಾಗಿ ನೆಟ್​ ಪರೀೆಯಲ್ಲಿ ಉತ್ತರ‍್ಣರಾಗುತ್ತೀರಿ. ಪ್ರತಿಯೊಬ್ಬ ವಿದ್ಯರ‍್ಥಿಯು ಪಿಜಿ ಪರ‍್ಣಗೊಳಿಸುವ ಮೊದಲು ಜೆಆರ್​ಎಫ್​/ನೆಟ್​ನಲ್ಲಿ ಉತ್ತರ‍್ಣರಾಗುವ ಗುರಿ ಹೊಂದಿರಬೇಕು. ಶಿಕ್ಷರಾಗಲು ಮತ್ತು ಪ್ರತಿಷ್ಠಿತ ಸಂಸ್ಥೆಗಳಲ್ಲಿ ಪಿಎಚ್​.ಡಿ ಮಾಡಲು ಬಯಸಿದರೆ ಹೆಚ್ಚಿನ ಶೇಕಡಾವಾರು ಪ್ರಮಾಣದಲ್ಲಿ ಜೆಆರ್​ಎಫ್​ನಲ್ಲಿ ಉತ್ತರ‍್ಣರಾಗಬೇಕು ಎಂದು ಹೇಳಿದರು.

ಶಿಕ್ಷಣ ವಿಭಾಗದ ಇಬ್ಬರು ಜೂನಿಯರ್​ ರಿರ‍್ಚ್​ ಫೆಲೋಗಳಾದ ದರ‍್ಗಾ ಪ್ರಸಾದ್​ ಮತ್ತು ಅಶ್ವಿನ್​, ಜೆಆರ್​ಎಫ್​/ ನೆಟ್​ ಪರೀೆಯ ತಮ್ಮ ಯಶಸ್ಸಿನ ಅನುಭವ ಹಂಚಿಕೊಂಡರು.

ಅಧ್ಯಾಪಕರಾದ ಡಾ.ಆಶಾಲತಾ, ಡಾ.ನಿಶಾ ಪ್ರಜಾಪತಿ, ಡಾ.ಶ್ರೀದೇವಿ, ಡಾ.ಸಿ.ಮಂಡಲ್​, ಡಾ.ಬಿ.ಪಿ.ರೆಡ್ಡಿ, ಜ್ಯೋತ್ಸಾ$್ನ, ಸಂತೋಷ ಇತರರಿದ್ದರು. ಸಂಯೋಜಕ ಡಾ.ಎನ್​.ಅಮರೇಶ್ವರನ್​ ಸ್ವಾಗತಿಸಿ, ನಿರೂಪಣೆ ಮಾಡಿದರು. ಡಾ.ಮಯೂರ್​ ಪೂಜಾರಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net