

ಬಾಗಲಕೋಟೆ:ಬೆಂಗಳೂರಿನ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ರೆಡ್ ಕ್ರಾಸ್ ಭವನದಲ್ಲಿ ಬುಧವಾರ ಬಾಗಲಕೋಟೆ ಜಿಲ್ಲೆಯ ನೂತನ ಶಾಸಕರಾದ ಎಚ್.ವೈ.ಮೇಟಿ, ಆರ್.ಬಿ.ತಿಮ್ಮಾಪುರ ಅವರನ್ನು ರೆಡ್ ಕ್ರಾಸ್ ಸಂಸ್ಥೆ ವತಿಯಿಂದ ರಾಜ್ಯ ಸಭಾಪತಿ ವಿಜಯಕುಮಾರ ಪಾಟೀಲ ಮತ್ತು ಉಪಸಭಾಪತಿ ಬಾಗಲಕೋಟೆಯ ಆನಂದ ಎಸ್. ಜಿಗಜಿನ್ನಿ ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಜಿಗಜಿನ್ನಿ ಮಾತನಾಡಿ, ವಿಶ್ವದಾದ್ಯಂತ ೧೬೮ ದೇಶಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ರೆಡ್ ಕ್ರಾಸ್ ಸಂಸ್ಥೆ ಸಾಮಾಜಿ, ಶೈಕ್ಷಣಿಕ, ಆರೋಗ್ಯ ಸೇವೆಯಲ್ಲಿ ಮುಂಚೂಣಿಯಲ್ಲಿದೆ ಎಂದು ಸಂಸ್ಥೆಯ ಕುರಿತು ಮಾಹಿತಿ ನೀಡಿದರು.
ಸಂಸ್ಥೆಯ ಕಾರ್ಯಗಳನ್ನ ಮೆಚ್ಚಿ ನೂತನ ಶಾಸಕರಾದ ಆರ್.ಬಿ.ತಿಮ್ಮಾಪುರ, ಎಚ್.ವೈ.ಮೇಟಿ ಮಾತನಾಡಿ, ಮುಂಬರುವ ದಿನಗಳಲ್ಲಿ ಎರಡು ಕ್ರಾಸ್ ಸಂಸ್ಥೆಗೆ ಸರ್ಕಾರದಿಂದ ಎಲ್ಲರ ರೀತಿಯ ಸಹಾಯ ಸರ್ಕಾರ ನೀಡುವ ಭರವಸೆಯನ್ನು ನೀಡಿದರು.
ಈ ಸಂದರ್ಭದಲ್ಲಿ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಬಾಲಸುಬ್ರಹ್ಮಣ್ಯ, ಮುಖಂಡರಾದ ಎಂ.ಬಿ.ಸೌದಾಗರ, ಬಸವಂತಪ್ಪ ಮೇಟಿ, ಸಂಗನಗೌಡ ಪಾಟೀಲ, ದ್ಯಾಮನ ಗಾಳಿ, ಕಾಶಿನಾಥ ಹುಡೇದ, ಎಸ್.ಎನ್.ರಾಂಪುರ ಉಪಸಿತರಿದ್ದರು.