ನೂತನ ವಿದ್ಯುತ್ ಯೋಜನೆಗೆ ವಿರೋಧ

29bannu2
Published on

ಬನ್ನೂರು: ರಾಜ್ಯ ಸರ್ಕಾರ ನೂತನವಾಗಿ ರೂಪಿಸಲು ಹೊರಟಿರುವ ಕರೆನ್ಸಿ ರೂಪದ ವಿದ್ಯುತ್ ಸೌಲಭ್ಯಕ್ಕೆ ರೈತ ಸಮುದಾಯ, ಸಾರ್ವಜನಿಕರು, ಸಂಘ, ಸಂಸ್ಥೆಗಳ ತೀವ್ರ ವಿರೋಧವಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಬನ್ನೂರು ನಾರಾಯಣ್ ತಿಳಿಸಿದರು.

ಪಟ್ಟಣದ ಸೆಸ್ಕ್ ಕಚೇರಿ ಆವರಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಉಪವಿಭಾಗ ಮಟ್ಟದ ಜನಸಂಪರ್ಕ ಸಭೆಯಲ್ಲಿ ಮಾತನಾಡಿದರು. ಸರ್ಕಾರ ಉಚಿತವಾಗಿ ವಿದ್ಯುತ್ ನೀಡುವ ಭರವಸೆಯನ್ನು ನೀಡಿ ಹಿಂಬಾಗಿಲಿನಿಂದ ಕರೆನ್ಸಿ ರೂಪದ ವಿದ್ಯುತ್ ವಿತರಣೆಗೆ ಯೋಜನೆ ಸಿದ್ಧಪಡಿಸುತ್ತಿರುವುದು ಸರಿಯಲ್ಲ. ಇದರಿಂದ ಬಹಳಷ್ಟು ಅನನುಕೂಲವಾಗುತ್ತದೆ. ಜಂಗಲ್ ಕಟ್ಟಿಂಗ್ ವೇಳೆ ಮರಗಳನ್ನು ಕಡಿದು ರಸ್ತೆಯ ಒಂದು ಭಾಗಕ್ಕೆ ಬಿಟ್ಟು ಜನರ ಓಡಾಟಕ್ಕೆ ತೊಂದರೆ ಉಂಟು ಮಾಡುತ್ತಿದ್ದಾರೆ. ಕಟ್ಟಿಂಗ್ ಮಾಡುವವರಿಗೆ ಸೂಕ್ತ ಮಾರ್ಗದರ್ಶನ ನೀಡಬೇಕು. ಹಾಗೆಯೇ ಅರಣ್ಯ ಇಲಾಖೆಯವರು ಇಂತಹ ಸಭೆಯಲ್ಲಿ ಪಾಲ್ಗೊಂಡು ರಸ್ತೆ ಬದಿ ಗಿಡಗಳನ್ನು ನೆಡುವಾಗ ಸೂಕ್ತ ನಿಯಮ ಅನುಸರಿಸಲು ಸಲಹೆ ನೀಡುವಂತೆ ಕೋರಿದರು.

ಮುಖ್ಯ ಕಾರ್ಯನಿರ್ವಹಣಾಧಿಕಾರಿ ಆನಂದ್ ಮಾತನಾಡಿ, ಜನರ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಅಧಿಕಾರಿಗಳು ಕಾರ್ಯನಿರ್ವಹಿಸುತ್ತೇವೆ ಎಂದರು.

ಬನ್ನೂರು ಶಾಖಾಧಿಕಾರಿ ಸಂದೇಶ್, ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಎಂ.ಹರ್ಷನ್, ಆರ್.ಸುಮತಿ, ಶಾಖಾಧಿಕಾರಿ ಸಂದೇಶ್, ಶ್ರೀನಿವಾಸ್, ಎಸ್.ರಜತ್, ಗಿರೀಶ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net