

ಕಾರವಾರ: ನಗರದಲ್ಲಿ ರ್ಪಾಂಗ್ ವ್ಯವಸ್ಥೆಯ ನೂತನ ಕರಡನ್ನು ಸಿದ್ಧಪಡಿಸಲಾಗಿದ್ದು, ಆಕ್ಷೇಪಣೆ ಸಲ್ಲಿಸಲು ಏಳು ದಿನದವರೆಗೆ ಅವಕಾಶವಿದೆ ಎಂದು ಪ್ರಭಾರ ಪೌರಾಯುಕ್ತೆ ಪ್ರಿಯಾಂಗಾ ಎಂ.ತಿಳಿಸಿದ್ದಾರೆ.
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕರಡು ನೀಲಿನಕ್ಷೆ ಸಿದ್ಧ ಮಾಡಿ ನಗರಸಭೆಯ ಕಚೇರಿಯಲ್ಲಿ ಇಡಲಾಗಿದೆ. ಅಲ್ಲದೆ, ವೆಬ್ಸೈಟ್ನಲ್ಲೂ ಪ್ರಕಟಿಸಲಾಗಿದೆ. ನಾಗರಿಕರು ಗಮನಿಸಿ, ಬದಲಾವಣೆ ಬೇಕಿದ್ದಲ್ಲಿ ಸಲಹೆ ನೀಡಬಹುದು. ನಂತರ ಜಿಲ್ಲಾಧಿಕಾರಿ ಅನುಮತಿ ಪಡೆದು ರ್ಪಾಂಗ್ ವ್ಯವಸ್ಥೆ ಜಾರಿಗೆ ತರಲಾಗುವುದು ಎಂದರು.
2500ರಷ್ಟು ಬೈಕ್ಗಳನ್ನು ವಿವಿಧೆಡೆ ನಿಲ್ಲಿಸಲು ವ್ಯವಸ್ಥೆ ಮಾಡಲಾಗಿದೆ. ಇನ್ನು ನಗರದ ಮುಖ್ಯ ಭಾಗದಲ್ಲಿ 280ರಷ್ಟು ನಾಲ್ಕು ಚಕ್ರದ ವಾಹನ ನಿಲ್ಲಿಸಲು ವ್ಯವಸ್ಥೆ ಮಾಡಲಾಗಿದೆ. ಬಸ್, ಕಾರು ಹಾಗೂ ಆಟೋಗಳಿಗೆ ಪ್ರತ್ಯೇಕ ಸ್ಥಳ ನಿಗದಿ ಮಾಡಲಾಗಿದೆ.
ಗೀತಾಂಜಲಿ ಟಾಕೀಸ್ನಿಂದ ಗಣಪತಿ ದೇವಸ್ಥಾನದವರೆಗೆ ಭಾರಿ ವಾಹನಗಳಿಗೆ ಮಾತ್ರ ದ್ವಿಮುಖ ಸಂಚಾರಕ್ಕೆ ನಿಷೇಧ ಹೇರಲಾಗಿದೆ. ಸಣ್ಣ ರಸ್ತೆಗಳಲ್ಲಿ ಒಂದೊಂದು ದಿನ ಒಂದೊಂದು ಕಡೆ ವಾಹನ ನಿಲುಗಡೆಗೆ ವ್ಯವಸ್ಥೆ ಮಾಡಲಾಗಿದೆ ಎಂದು ವಿವರಿಸಿದರು. ಎಇಇ ಆರ್.ಪಿ.ನಾಯ್ಕ, ರವಿ ಇದ್ದರು.
ನೋ ರ್ಪಾಂಗ್ ಪ್ರದೇಶ: ಕಾರವಾರ ಇಳಕಲ್ ರಸ್ತೆಯಲ್ಲಿ ಸುಭಾಷ್ ವೃತ್ತದಿಂದ ಜನತಾ ಬಜಾರ್ವರೆಗೆ, ಜನತಾ ಬಜಾರ್ನಿಂದ ಸ್ಟ್ರೀಟ್ ಲಿಂಕ್ ರಸ್ತೆ. ಹೈಚರ್ಚ್ ರಸ್ತೆಯಲ್ಲಿ ಧೋಬಿಘಾಟ್ನಿಂದ ಕಾರವಾರ ಇಳಕಲ್ ರಸ್ತೆಯವರೆಗೆ. ಕಾರವಾರ-ಕೋಡಿಬಾಗ ರಸ್ತೆಯಿಂದ ಗೀತಾಂಜಲಿ ಥಿಯೇಟರ್ವರೆಗೆ. ಕಮಲಾಕರ ರಸ್ತೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಸರ್ವೀಸ್ ರಸ್ತೆಯಿಂದ ಎಂಜಿ ರಸ್ತೆಯವರೆಗೆ. ಪಿಕಳೆ ರಸ್ತೆಯಲ್ಲಿ ರಾಷ್ಟ್ರೀಯ ಹೆದ್ದಾರಿಯಿಂದ ಎಂಜಿ ರಸ್ತೆಯವರೆಗೆ, ಸಿವಿಲ್ ಕೋರ್ಟ್ ರಸ್ತೆಯಲ್ಲಿ ಗ್ರೀನ್ ಸ್ಟ್ರೀಟ್ನಿಂದ ಕಾರವಾರ-ಕೋಡಿಬಾಗ ರಸ್ತೆಯವರೆಗೆ. ಗ್ರೀನ್ ಸ್ಟ್ರೀಟ್ನಲ್ಲಿ ಟೌನ್ ಪೊಲೀಸ್ ಠಾಣೆಯಿಂದ ಹೊಸ ಮೀನು ಮಾರುಕಟ್ಟೆಯವರೆಗೆ, ಕಾರವಾರ-ಕೋಡಿಬಾಗ ರಸ್ತೆಯಲ್ಲಿ ಸವಿತಾ ಹೋಟೆಲ್ನಿಂದ ಧೋಬಿಘಾಟ್ ರಸ್ತೆಯವರೆಗೆ. ಎಂಜಿ ರಸ್ತೆಯಲ್ಲಿ ಲೈಬ್ರರಿ ರಸ್ತೆಯಿಂದ ಕಾರವಾರ ಇಳಕಲ್ ರಸ್ತೆಯವರೆಗೆ ಯಾವುದೇ ವಾಹನ ನಿಲುಗಡೆ ನಿಷೇಧಿಸಲಾಗಿದೆ ಎಂದು ವಿವರಿಸಿದರು.
ಪೊಲೀಸ್, ಅಗ್ನಿಶಾಮಕ ಹಾಗೂ ಆರ್ಟಿಒ ಅಧಿಕಾರಿಗಳ ಜತೆ ರ್ಚಚಿಸಿ ಕರಡು ರೂಪಿಸಲಾಗಿದೆ. ವ್ಯವಸ್ಥಿತ ಸಂಚಾರ ಹಾಗೂ ರ್ಪಾಂಗ್ ನಿಯಮಾವಳಿ ಜಾರಿಗೆ ಜನರ ಸಹಕಾರ ಬೇಕಿದೆ. ಪ್ರಿಯಾಂಗಾ ಎಂ., ಪ್ರಭಾರ ಪೌರಾಯುಕ್ತೆ