

ಬಾಗಲಕೋಟೆ: 12 ಶತಮಾನದಲ್ಲಿದ್ದ ಕಾಯಕನಿಷ್ಠ ಯೋಗಿ ಹಾಗೂ ನಿಜಾನುಭಾವಿ ಶರಣ ನುಲಿಯ ಚಂದಯ್ಯನವರು. ತಮ್ಮ ವಚನಗಳ ಮೂಲಕ ಕಾಯಕ ಕಡ್ಡಾಯ ಎಂಬ ಆಶಯ ಸಾರಿದ್ದಾರೆ. ಗುರು, ಲಿಂಗ, ಚಂಗಮ ತತ್ವವನ್ನು ಜಗತ್ತಿಗೆ ಪಸರಿಸಿ, ನುಡಿದಂತೆ ನಡೆದ ಶ್ರೇಷ್ಠ ವಚನಕಾರ ನುಲಿಯ ಚಂದಯ್ಯನವರು ಎಂದು ಕೊರಮ ಸಮಾಜದ ಉಪಾಧ್ಯಕ್ಷ ಗದ್ದೆಪ್ಪ ಭಜಂತ್ರಿ ಹೇಳಿದರು.
ಗುಡೂರ ಎಸ್ ಸಿ ಗ್ರಾಮದ ಕೊರಮ ( ಭಜಂತ್ರಿ ) ಸಮಾಜದ ವತಿಯಿಂದ ಆಯೋಜಿಸಿದ ನೂಲಿಯ ಚಂದಯ್ಯನವರ ಜಯಂತೋತ್ಸವದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಬಸವಣ್ಣನವರ ಸಾಮಾಜಿಕ ಸಮಾನತೆಯ ವಿಚಾರ ಧಾರೆ, ಚಿಂತನೆಗೆ ಆಕರ್ಷಿತರಾಗಿ ಕಲ್ಯಾಣಕ್ಕೆ ತೆರಳಿ ಕಾಯಕ ಜೀವಿಯಾಗಿ, ದಾಸೋಹ ಮಾಡುತ್ತ ಬದುಕಿದರು. ನುಲಿಯ ಚಂದಯ್ಯ ದಲಿತ ವರ್ಗದ ಹೆಮ್ಮೆಯ ವಚನಕಾರ ಎಂದು ಹೇಳಿದರು.
ನೂಲಿಯ ಚಂದಯ್ಯ ಜಯಂತಿ ಅಂಗವಾಗಿ ಭಾವಚಿತ್ರ ಮೆರವಣಿಗೆ ಗ್ರಾಮದ ಪ್ರಮುಖ ರಸ್ತೆಗಳಲ್ಲಿ ಜರುಗಿತು. ಮೆರವಣಿಗೆ ನಂತರ ಅನ್ನ ಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು. ಕಾರ್ಯಕ್ರಮದಲ್ಲಿ ಅನ್ನಪೂರ್ಣ ಭಜಂತ್ರಿ., ಹನಮಂತ ಭಜಂತ್ರಿ., ಶಿವಾನಂದ ಭಜಂತ್ರಿ. ಶಶಿಕಾಂತ್ ಭಜಂತ್ರಿ.,ಮಾರುತಿ ಭಜಂತ್ರಿ., ಯಮನೂರ ಭಜಂತ್ರಿ ಇದ್ದರು.