

ಬೆಳಗಾವಿ: ಬೇಸಿಗೆ ಹಿನ್ನೆಲೆಯಲ್ಲಿ ಕೆರೆ, ಬಾವಿ, ಬೋರ್‌ವೆಲ್‌ಗಳು ಬತ್ತಿ ಹೋಗಿವೆ. ಜನ-ಜಾನುವಾರುಗಳಿಗೆ ಕುಡಿಯುವ ನೀರಿಗೆ ತೊಂದರೆಯಾಗಿದೆ. ಘಟಪ್ರಭಾ ಎಡದಂಡೆ ಮತ್ತು ಬಲದಂಡೆ ಕಾಲುವೆಗೆ ನೀರು ಹರಿಸಬೇಕು ಎಂದು ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯಿಂದ ಗುರುವಾರ ನಗರದಲ್ಲಿ ಪ್ರತಿಭಟನೆ ನಡೆಯಿತು.
ಕನ್ನಡ ಸಾಹಿತ್ಯ ಭವನದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಪ್ರತಿಭಟನಾ ರ‌್ಯಾಲಿ ನಡೆಸಿದರು. ಹುಕ್ಕೇರಿ ತಾಲೂಕು ಕೊಟಬಾಗಿ ಏತ ನೀರು ನೀರು ಹರಿಸಬೇಕು. ದನಕರುಗಳಿಗೆ ಕುಡಿಯುವ ನೀರು ಕಲ್ಪಿಸಿ ರಕ್ಷಿಸಬೇಕು. ಒಂದೂವರೆ ತಿಂಗಳ ಹಿಂದೆ ನೀರು ಬಿಟ್ಟಿದ್ದನ್ನು ಹೊರತುಪಡಿಸಿದರೆ ಮತ್ತೆ ನೀರು ಬಿಟ್ಟಿಲ್ಲ. ಸಮಸ್ಯೆಯ ಗಂಭೀರತೆ ಅರಿತು ಕ್ರಮಗಳನ್ನು ಕೈಗೊಳ್ಳಬೇಕು ಎಂದು ಜಿಲ್ಲಾಡಳಿತ, ಪ್ರಾದೇಶಿಕ ಆಯುಕ್ತರ ಕಚೇರಿಗೆ ಮನವಿ ಸಲ್ಲಿಸಿದರು.
ಚೂನಪ್ಪ ಪೂಜಾರಿ, ಶಶಿಕಾಂತ ಗುರೂಜಿ, ಸುರೇಶ ಪರಗಣ್ಣವರ, ನಿಂಗಪ್ಪ ಪಂಕಂಟಿ, ಭೀಮಸಿ ಕಲ್ಲಟ್ಟಿ, ಕಲ್ಯಾಣಿ ಮಗದುಮ್, ಆಸ್ಮಾ ಜೂಟದಾರ, ಮಲ್ಲಪ್ಪ ಅಂಗಡಿ, ಪ್ರಕಾಶ ನಾಯಕ, ಜಾವೀದ್ ಮುಲ್ಲಾ ಇತರರಿದ್ದರು.