

ಬಾಗಲಕೋಟೆ: ಕುಡಿಯುವ ನೀರಿನ ಪೂರೈಕೆಯಲ್ಲಿ ಯಾವುದೇ ರೀತಿಯಲ್ಲಿ ನೀರು ಪೋಲಾಗದಂತೆ ಕ್ರಮವಹಿಸಲು ಬೀಳಗಿ ಶಾಸಕ, ಹಟ್ಟಿ ಚಿನ್ನದ ಗಣಿ ನಿಯಮಿತದ ಅಧ್ಯಕ್ಷ ಜೆ.ಟಿ.ಪಾಟೀಲ ಅಽಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲಾ ಪಂಚಾಯಿತಿ ಸಭಾಭವನದಲ್ಲಿ ಸೋಮವಾರ ಬೀಳಗ ಮತಕ್ಷೇತ್ರದ ಕುಡಿಯುವ ನೀರಿನ ಸಮಸ್ಯೆ ಪರಿಹರಿಸುವ ಕುರಿತು ಹಮ್ಮಿಕೊಂಡಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕುಡಿಯುವ ನೀರಿನ ನಿರ್ವಹಣೆ ಬಹಳ ಮುಖ್ಯವಾಗಿದ್ದು, ಮೊದಲು ಪೋಲ್ ಆಗುವ ನೀರನ್ನು ತಡೆದರೆ ಕುಡಿಯುವ ನೀರು ಕೊಡುವಲ್ಲಿ ತೊಂದರೆಯಾಗುವದನ್ನು ಕಡಿಮೆ ಮಾಡಬಹುದಾಗಿದೆ. ಕೆಲವೊಂದು ನಲ್ಲಿಗಳಿಗೆ ವಾಲ್‌ಕೂಡಾ ಇರುವದಿಲ್ಲ. ನೀರು ಸಾಕಾದರೂ ಬಂದ್ ಆಗದೇ ನೀರು ಪೋಲಾಗುತ್ತಿವೆ ಇದನ್ನು ಪರಿಶೀಲಿಸಿ ಕ್ರಮ ಕೈಗೊಳ್ಳಲು ತಿಳಿಸಿದರು.
ಕೆಲವೊಬ್ಬರು ನಳದ ಟ್ಯಾಪ್ ಚಾಲು ಇಟ್ಟುಕೊಂಡೇ ಬಟ್ಟೆ ಒಗೆಯುತ್ತಿರುತ್ತಾರೆ. ಇದರಿಂದ ಹೆಚ್ಚಿನ ಪ್ರಮಾಣದಲ್ಲಿ ನೀರು ಪೋಲು ಆಗುತ್ತಿದೆ. ಈ ರೀತಿ ಕಂಡುಬ0ದಲ್ಲಿ ಅಂತವರಿಗೆ ತಿಳಿವಳಿಕೆ ನೀಡಿ, ಮತ್ತೆ ಅದೇ ರೀತಿಯ ಮಾಡುವುದು ಕಂಡುಬAದಲ್ಲಿ ನೀರಿನ ಕರದ ಎರಡು ಪಟ್ಟು ವಸೂಲಿ ಮಾಡಲಾಗುವುದೆಂದು ಗ್ರಾಮಗಳಲ್ಲಿ ಡಂಗೂರ ಸಾರಲು ಅಽಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು. ಇಂದಿನಿAದಲೇ ನೀರು ಪೋಲಾಗುವದನ್ನು ತಡೆದು ವರದಿ ಸಲ್ಲಿಸುವಂತೆ ಸಂಬAಽಸಿದ ಅಽಕಾರಿಗಳಿಗೆ ಸೂಚನೆ ನೀಡಿದರು.
ಬೀಳಗಿ ಮತಕ್ಷೇತ್ರದಲ್ಲಿ ಬೀಳಗಿ, ಬಾಗಲಕೋಟೆ ಹಾಗೂ ಬಾದಾಮಿ ತಾಲೂಕಿನ ಗ್ರಾಮಗಳು ಸೇರ್ಪಡೆಗೊಂಡಿದ್ದು, ವ್ಯಾಪ್ತಿಯ ಪ್ರತಿಯೊಂದು ಗ್ರಾಮಗಳ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಽಕಾರಿಗಳ ಮೂಲಕ ಅಲ್ಲಿಯ ಕುಡಿಯುವ ನೀರಿನ ವಸ್ತುಸ್ಥಿತಿಯ ಬಗ್ಗೆ ಮಾಹಿತಿ ಪಡೆದುಕೊಂಡರು. ಪ್ರತಿ ಗ್ರಾಮಗಳಲ್ಲಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಹಾಗೂ ಬೋರವೆಲ್ ಮೂಲಕ ಪೂರೈಸುವ ಗ್ರಾಮಗಳ ಮಾಹಿತಿ ಪಡೆದ ಅವರು ಸಮಸ್ಯಾತ್ಮಕ ಗ್ರಾಮಗಳಲ್ಲಿ ಖಾಸಗಿ ಬೋರವೆಲ್ ಮೂಲಕ ನೀರು ಪೂರೈಸಲು ಕ್ರಮವಹಿಸಬೇಕು. ಮತಕ್ಷೇತ್ರದ ಗ್ರಾಮಗಳಲ್ಲಿ ನೀರು ಬರದಿದ್ದರೆ ಜನಪ್ರತಿನಿಽಗಳಿಗೆ ಮೊಬೈಲ ಕರೆಗಳು ಬರುತ್ತಿವೆ. ಇದನ್ನು ಗಂಭೀರವಾಗಿ ಪರಿಗಣಿಸಿ ಕ್ರಮ ಕೈಗೊಳ್ಳಲು ಮುಂದಾಗಬೇಕು ಎಂದರು.
ಬಹುಗ್ರಾಮ ಕುಟಿಯುವ ನೀರಿನ ಯೋಜನೆಗಳು ಸರಿಯಾಗಿ ನಿರ್ವಹಣೆ ಆಗುತ್ತಿಲ್ಲ. ಮುಂಡಗನೂರು, ಚಿಕ್ಕಹಂಚಿನಾಳ ಗ್ರಾಮಗಳಲ್ಲಿ ನೀರಿನ ಸಮಸ್ಯೆ ಇರುವ ಬಗ್ಗೆ ಕಂಡುಬ0ದಿದ್ದು, ಅಽಕಾರಿಗಳು ಜವಾಬ್ದಾರಿ ಅರಿತು ನೀರು ಪೂರೈಸಲು ಕ್ರಮವಹಿಸಬೇಕು. ಅಽಕಾರಿ ಕುಡಿಯುವ ನೀರಿನ ವಿಷಯದಲ್ಲಿ ಬೇಜವಾಬ್ದಾರಿ ತೋರುವಂಗಿಲ್ಲ. ವ್ಯಾಪ್ತಿಯ ಪ್ರತಿಯೊಂದು ಗ್ರಾಮಗಳ ಕುಡಿಯುವ ನೀರಿನ ವಸ್ತುಸ್ಥಿತಿ ಅರಿತು ನೀರಿನಿ ಸಮಸ್ಯೆಯಾಗದಂತೆ ಕ್ರಮ ಕೈಗೊಳ್ಳಲು ತಿಳಿಸಿದರು.
ಬಾಗಲಕೋಟೆ ತಾಲೂಕಿನಲ್ಲಿ ಬೀಳಗಿ ಕ್ಷೇತ್ರಕ್ಕೆ ೧೦ ಗ್ರಾಮ ಪಂಚಾಯಿತಿಗಳು ಬರಲಿದ್ದು, ೧೪೭ ಬೋರವೆಲ್‌ಗಳಲ್ಲಿ ೧೨೦ ಬೋರವೆಲ್‌ಗಳು ಚಾಲು ಇವೆ. ಬಾಕಿ ೨೯ ಬೋರವೆಲ್‌ಗಳು ಕಳೆದ ೪ ತಿಂಗಳಿನಿAದ ಬಂದ್ ಆಗಿರುವುದಾಗಿ ವ್ಯಾಪ್ತಿಯ ಅಭಿಯಂತರರು ಸಭೆಗೆ ಮಾಹಿತಿ ನೀಡಿದರು. ಬಾದಾಮಿ ತಾಲೂಕಿನಲ್ಲಿ ಕಂಕಣಬೂದಿಹಾಳ ಮತ್ತು ಕೈನಕಟ್ಟಿ ಗ್ರಾಮಗಳಲ್ಲಿ ನೀರಿನ ಸಮಸ್ಯೆ ಇದ್ದು, ತುರ್ತು ಕ್ರಮ ಕೈಗೊಳ್ಳಲು ಅಭಿಯಂತರರು ಹಾಗೂ ಪಂಚಾಯಿತಿ ಅಭಿವೃದ್ಧಿ ಅಽಕಾರಿಗಳಿಗೆ ಸೂಚನೆ ನೀಡಿದರು. ಕಗಲಗೊಂಬ ಗ್ರಾಮಗಳಲ್ಲಿ ಪರಿಶಿಷ್ಠ ಕಾಲೋನಿಯ ನೀರಿನ ಸಮಸ್ಯೆಯನ್ನು ಕಾರ್ಯನಿರ್ವಾಹಕ ಅಽಕಾರಿ, ಸಹಾಯಕ ಅಭಿಯಂತರ ಹಾಗೂ ಅಲ್ಲಿಯ ಪಂಚಾಯಿತಿ ಅಭಿವೃದ್ಧಿ ಅಽಕಾರಿಗಳು ಕೂಡಿ ಬಗೆಹರಿಸುವ ಕೆಲಸ ಮಾಡಲು ತಿಳಿಸಿದರು.
ಸಭೆಯಲ್ಲಿ ಜಿಲ್ಲಾಽಕಾರಿ ಜಾನಕಿ ಕೆ.ಎಂ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಽಕಾರಿ ಶಶಿಧರ ಕುರೇರ, ಗ್ರಾಮೀಣ ಕುಡಿಯುವ ನೀರಿನ ಯೋಜನೆ ಮುಖ್ಯ ಅಭಿಯಂತರ ಆಕಾಶ ನಾಯಕ ಸೇರಿದಂತೆ ಬೀಳಗಿ, ಬಾಗಲಕೋಟೆ ಹಾಗೂ ಬಾದಾಮಿ ತಹಸೀಲ್ದಾರರು, ಸಹಾಯಕ ಅಭಿಯಂತರರು, ಪಂಚಾಯಿತಿ ಅಭಿವೃದ್ಧಿ ಅಽಕಾರಿಗಳು ಉಪಸ್ಥಿತರಿದ್ದರು.