ನೀರಾವರಿ ಅಭಿವೃದ್ಧಿಗೆ ವಿವಿಧ ಯೋಜನೆ ಪಟ್ಟಿ ಸಲ್ಲಿಕೆ

6-kollegalphoto-1,,,,
filter: 0; fileterIntensity: 0.0; filterMask: 0; captureOrientation: 0; algolist: 0; multi-frame: 0; brp_mask:0; brp_del_th:null; brp_del_sen:null; delta:null; module: photo;hw-remosaic: false;touch: (-1.0, -1.0);sceneMode: 2;cct_value: 0;AI_Scene: (-1, -1);aec_lux: 0.0;aec_lux_index: 0;albedo: ;confidence: ;motionLevel: -1;weatherinfo: weather?null, icon:null, weatherInfo:100;temperature: 47;
Published on

ಕೊಳ್ಳೇಗಾಲ: ಹನೂರು ವಿಧಾನ ಕ್ಷೇತ್ರದ ವ್ಯಾಪ್ತಿಯಲ್ಲಿ ನೀರಾವರಿ ಅಭಿವೃದ್ಧಿಗೆ 1440 ಕೋಟಿ ರೂ. ವೆಚ್ಚದ ವಿವಿಧ ಯೋಜನೆಗಳ ಪಟ್ಟಿಯನ್ನು ಸಲ್ಲಿಸಿದ್ದೇನೆ. ಮಹದೇಶ್ವರ ಬೆಟ್ಟದಲ್ಲಿ ನಡೆಯುವ ಕ್ಯಾಬಿನೆಟ್‌ನಲ್ಲಿ ಅನುಮೋದನೆ ದೊರೆತರೆ ಕ್ಷೇತ್ರದಲ್ಲಿ 40 ಸಾವಿರ ಎಕರೆಗೆ ಕೃಷಿ ಭೂಮಿಗೆ ನೀರು ನೀಡಬಹುದು ಎಂದು ಮಾಜಿ ಶಾಸಕ ಆರ್.ನರೇಂದ್ರ ತಿಳಿಸಿದರು.

ತಾಲೂಕಿನ ಗುಂಡಾಲ್ ಜಲಾಶಯ ಗುರುವಾರ ಪೂಜೆ ಸಲ್ಲಿಸಿ, ಬಾಗಿನ ಅರ್ಪಿಸಿ ಮಾತನಾಡಿದರು. ನೀರಾವರಿ ಪ್ರದೇಶದ ಅಭಿವೃದ್ಧಿ ಆದರೆ ರೈತರಿಗೆ ಒಳಿತಾಗುತ್ತದೆ. ಹಿಂದಿನಿಂದಲೂ ಅದಕ್ಕಾಗಿ ಹೋರಾಟ ಮಾಡಿದ್ದೇನೆ. ಹಿಂದೆ ಸಿದ್ದರಾಮಯ್ಯ ಹಾಗೂ ಮಹದೇವ ಪ್ರಸಾದ್ ಅವರ ನೀರಾವರಿಗೆ ಸಬಂಧಿಸಿದಂತೆ ಹೋರಾಟದ ಫಲವಾಗಿ ಸಿದ್ದರಾಮಯ್ಯ ಆಡಳಿತದ ಹಿಂದಿನ ಸರ್ಕಾರದಲ್ಲಿ 127 ಕೋಟಿ ರೂ. ಅನುದಾನದಲ್ಲಿ ಗುಂಡಾಲ್, ಹುಬ್ಬೆಹುಣಸೆ, ರಾಮನಗುಡ್ಡ ಜಲಾಶಯಕ್ಕೆ ನೀರು ತುಂಬಿಸುವ ಯೋಜನೆ, 128 ಕೋಟಿ ರೂ. ಅನುದಾನದಲ್ಲಿ ಮೊದಲ ಹಂತದಲ್ಲಿ ಹನೂರಿನ 100 ಹಳ್ಳಿಗಳಿಗೆ ನೀರು ಸರಬರಾಜು ಯೋಜನೆ ಕ್ಷೇತ್ರಕ್ಕೆ ದೊರೆಯಿತು.

ಈ ಯೋಜನೆಗೆ ಕಳೆದ ಬಿಜೆಪಿ ಸರ್ಕಾರದ ಅವಧಿಯಲ್ಲಿ ಚಾಲನೆ ನೀಡಲು ರಾಮಗುಡ್ಡ ಬಳಿ ಸಿದ್ಧತೆ ನಡೆಸಿದ್ದೆ. ಆದರೆ, ಅಂದಿನ ಸಚಿವ ಈಶ್ವರಪ್ಪ, ಸುರೇಶ್‌ಕುಮಾರ್ ಬರಲಿಲ್ಲ. ಹಿಂದಿನ ಮರ್ಮ ಏನೆಂದು ತಿಳಿದಾಗ ನರೇಂದ್ರಗೆ ಹೆಸರು ಬರುತ್ತದೆ ಎಂದು ಸಚಿವರಿಬ್ಬರು ಬಂದಿಲ್ಲ ಎಂದು ತಿಳಿಯಿತು. ಅದನ್ನು ಲೆಕ್ಕಿಸದೆ ನಾನೊಬ್ಬನೆ ತೆರಳಿ ಪೂಜೆ ಕಾರ್ಯ ನೆರವೇರಿಸಿದೆ. ಇಂದು ಬೇಸಿಗೆ ಸಮಯದಲ್ಲಿ ಮೂರು ಜಲಾಶಯದಲ್ಲೂ ನೀರು ಸಿಗುತ್ತದೆ. ಈ ಕೆಲಸಕ್ಕೆ ಕೃತಜ್ಞತೆ ಸಲ್ಲಿಸಲು ಹನೂರು ಮುಖಂಡರು ಬಾಗಿನ ಅರ್ಪಣೆ ಕಾರ್ಯಕ್ರಮವನ್ನು ನನ್ನನ್ನು ಆಹ್ವಾನಿಸಿ ಮಾಡಿಸಿದ್ದಾರೆ ಎಂದರು.

ನೀರಾವರಿ ಅಭಿವೃದ್ಧಿಗೆ 1440 ಕೋಟಿ ರೂ. ವೆಚ್ಚದ ಪ್ರಸ್ತಾವನೆ ಸಲ್ಲಿಕೆ: ಕ್ಷೇತ್ರದಲ್ಲಿ ಗುಂಡಾಲ್, ಹುಬ್ಬೆಹುಣಸೆ, ರಾಮನಗುಡ್ಡ, ಹೂಗ್ಯಂ ಡ್ಯಾಂ, ಉಡುತರೆ, ಕಿರೆಪಾತೆ, ಕೌಳಿಕಟ್ಟೆ ಡ್ಯಾಂ, ಗೋಪಿನಾಥಂ ಡ್ಯಾಂ ಸೇರಿದಂತೆ ಒಟ್ಟು 8 ಡ್ಯಾಂಗಳಿವೆ. ಇವೆಲ್ಲದಕ್ಕೂ ನೀರು ತುಂಬಿಸುವ ಸುಸಂದರ್ಭ ಒದಗಿದೆ. ಮುಚ್ಚಿ ಹೋಗಿರುವ ತೋಡು ಕಾಲುವೆ, ಮುಖ್ಯ ಕಾಲುವೆ ದುರಸ್ತಿ, ಪೈಪ್‌ಲೈನ್‌ಗಳು ಜತೆಗೆ ಸತ್ತೇಗಾಲದಿಂದ ಮಾರ್ಟಳ್ಳಿ ಕಿರೆಪಾತೆ ದವರೆಗಿನ 20 ಕೆರೆ ನೀರು ತುಂಬಿ ಸುವುದು. 200 ಕೋಟಿ ರೂ. ವೆಚ್ಚದಲ್ಲಿ ಉಡುತೊರೆ ಹಳ್ಳಕ್ಕೆ ನೀರು ತುಂಬಿಸುವ ಯೋಜನೆ, 12 ಕೋಟಿ ರೂ.ಅನುದಾನದಲ್ಲಿ ಹೂಗ್ಯಂ ಡ್ಯಾಂ ಅಭಿವೃದ್ಧಿ, ಪಾರ್ಕ್ ನಿರ್ಮಾಣ ಹಾಗೂ ಚೆಕ್ ಡ್ಯಾಂ ನಿರ್ಮಾಣ ಅಭಿವೃದ್ಧಿಗೆ ಒಟ್ಟು 1440 ಕೋಟಿ ರೂ.ವೆಚ್ಚದಲ್ಲಿ ಪ್ರಸ್ತಾವನೆ ಸಲ್ಲಿಸಿದ್ದೇನೆ. ಇವೆಲ್ಲ ಯೋಜನೆಗಳಿಗೂ ಮಲೆ ಮಹದೇಶ್ವರ ಬೆಟ್ಟದಲ್ಲಿ ನಡೆಯುವ ಕ್ಯಾಬಿನೆಟ್ ಸಭೆಯಲ್ಲಿ ಹಣ ಬಿಡುಗಡೆಯಾದರೆ 40 ಸಾವಿರ ಎಕರೆ ಕೃಷಿ ಪ್ರದೇಶಕ್ಕೆ ಸಮೃದ್ಧವಾಗಿ ನೀರು ಸಿಗುತ್ತದೆ ಎಂದರು.

ಅಲ್ಲದೆ, ಗುಂಡಾಲ್ ರಸ್ತೆ, ಮತ್ತೀಪುರ -ಕೊತ್ತನೂರು ರಸ್ತೆ, ಲೊಕ್ಕನಹಳ್ಳಿ ರಸ್ತೆ ಅಭಿವೃದ್ಧಿಗೆ 80 ಕೋಟಿ ರೂ. ಅನುದಾನ ಬಿಡುಗಡೆಯಾಗಿದೆ. ಫೆ.9ರಂದು ಸಂಸದ ಸುನೀಲ್ ಬೋಸ್ ಚಾಲನೆ ನೀಡಲಿದ್ದಾರೆ ಎಂದು ಮಾಹಿತಿ ನೀಡಿದರು. 200 ಕೋಟಿ ರೂ.ವೆಚ್ಚದಲ್ಲಿ ಹನೂರು-ಮಹದೇಶ್ವರ ಬೆಟ್ಟದ ಕೆಶಿಪ್ ರಸ್ತೆಗೆ ಪ್ರಸ್ತಾವನೆ, ಹನೂರಿನಲ್ಲಿ ಬಸ್ ಡಿಪೋ ನಿರ್ಮಾಣ, ತಾಲೂಕು ಆಸ್ಪತ್ರೆ ನಿರ್ಮಾಣ, ಮಹದೇಶ್ವರ ಬೆಟ್ಟದಲ್ಲಿ ಅಗ್ನಿಶಾಮಕ ಇತರ ದೊಡ್ಡ ಕಾಮಗಾರಿಗಳ ಬಗ್ಗೆ ಕ್ಯಾಬಿನೆಟ್ ಚರ್ಚೆಯಾಗಲಿದೆ. ಕ್ಷೇತ್ರದ 32 ಹಾಡಿಗಳ ಪೈಕಿ 12 ಹಾಡಿಗಳಿಗೆ ಬೆಳಕಿರಲಿಲ್ಲ. ಇದೀಗ ಈ ಕೆಲಸವೂ ಆಗುತ್ತಿದೆ ಎಂದರು.

ಮುಖಂಡರಾದ ಕುಮಾರ್‌ಗೌಡ ಕಾಮಗೆರೆ, ಮಾದೇಶ್ ಕಂಡನಪಾಳ್ಯ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಈಶ್ವರ್, ರಾಜು ಇದ್ವಾಂಡಿ, ಗಿರಿ, ಗೋವಿಂದ್, ಪ್ರದೀಪ್, ಸಿದ್ದರಾಜು, ಚೇತನ್ ದೊರೈರಾಜ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net